ಕೆ.ಆರ್.ಪುರ: ಕಿಂಡರ್ ಮಾ ಜೀವನ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.ಬಿ.ನಾರಾಯಣಪುರದ ಎಸ್ ಕೆಜಿ ಕಲ್ಯಾಣ ಮಂಟಪದಲ್ಲಿ ಕಿಂಡರ್ ಆಸ್ಪತ್ರೆ ವತಿಯಿಂದ ಕಿಂಡರ್ ವುಮೆನ್ಸ್ ವೆಲ್ಪೇರ್ ಟ್ರಸ್ಟ್ ಸಿಎಸ್ ಆರ್ ಯೋಜನೆಯಡಿ ಹಮ್ಮಿಕೊಂಡಿದ್ದ ಕಿಂಡರ್ ಮಾ ಜೀವನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ.
ಅವರು,ಮಹಿಳೆಯರಿಗಾಗಿ ಸಿಎಸ್ ಆರ್ ಅನುದಾನದಲ್ಲಿ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಮೊದಲ ಕಂತಿನಲ್ಲಿ ಎರಡು ಕೋಟಿ ರೂ.ಮೀಸಲಿಟ್ಟಿದ್ದು ಇದನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.ಯಾವುದೇ ಬಡ ಮಹಿಳೆ ಬಂದರೂ ಪರೀಕ್ಷಿಸಿ ಚಿಕಿತ್ಸೆ ನೀಡಿ ಇನ್ಸೂರೆನ್ಸ್ ಸ್ಕೀಮ್ ಇಲ್ಲದಿದ್ದರೆ ಡಿಸ್ಚಾಜ್9 ಮಾಡ್ತಾರೆ ಇಂತಹ ಆಸ್ಪತ್ರೆಗಳ ಮಧ್ಯೆ ಕಿಂಡರ್ ಆಸ್ಪತ್ರೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಪ್ರತಿ ವಾರ್ಡ್ನಲ್ಲೂ ಕ್ಯಾಂಪ್ ಮಾಡಿ ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಿಂಡೋರಮಾ ಹೆಲ್ತ್ ಕೇರ್ ಲಿಮಿಟೆಡ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ವಿ.ಕೆ.ಪ್ರದೀಪ್ ಕುಮಾರ್,ಕಿಂಡೋರಮಾ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ ನ ಸಿಇಓ ರಂಜಿತ್ ಕೃಷ್ಣನ್,ಮಕ್ಕಳ ತಜ್ಞ ಡಾ.ಸುಶಾಂತ್,ಚಿತ್ರನಟಿ ಹರ್ಷಿಕಾ ಪೂಣಚ್ಚ, ಕ್ಷೇತ್ರದ ನಗರ ಮಂಡಲ ಅಧ್ಯಕ್ಷ ಮನೋಹರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಬಿ.ಎನ್.ನಟರಾಜ್,ಬೆಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಕೆ.ಎಂ.ಎಂ.ಮಂಜುನಾಥ್,ಹೂಡಿ ಪಿಳ್ಳಪ್ಪ,ವರ್ತೂರು ಶ್ರೀಧರ್ ಮತ್ತಿತರರು ಇದ್ದರು.