ತಿ.ನರಸೀಪುರ:ಬೌದ್ಧ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.ಪಟ್ಟಣದ ಎ.ವಿ.ಎಸ್.ಎಸ್ ಸಭಾಂಗಣದಲ್ಲಿ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಆಯೋಜನೆ ಮಾಡಿದ್ದ 2023 -24 ನೇ ಸಾಲಿನ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮವನ್ನು ಗೌತಮ ಬುದ್ಧ ಮತ್ತು ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬೋಧಿರತ್ನ ಬಂತೆಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪಂಚಶೀಲ ತತ್ವ ಬೋಧನೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎವಿಎಸ್ಎಸ್ ನ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ತುಂಬಾ ಸಂತೋಷದ ವಿಚಾರ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳು ಪ್ರೇರಣೆ ಹೊಂದುತ್ತಾರೆ. ನಾವೆಲ್ಲ ವಿದ್ಯಾವಂತರಾಗಿ ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವುದು ಮತ್ತು ಉನ್ನತಗಳ ಹುದ್ದೆಗಳನ್ನು ಅಲಂಕರಿಸಿರುವುದು ಯಾರಿಂದ ಎಂದರೆ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರಿಂದ ಮತ್ತು ಅವರು ಕೊಟ್ಟ ಕೊಡುಗೆ.ಪಠ್ಯ ಪುಸ್ತಕ ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಬರಹ ಮತ್ತು ಭಾಷಣಗಳನ್ನು ನಾವೆಲ್ಲರೂ ಹೆಚ್ಚು ಹೆಚ್ಚು ಓದಬೇಕೆಂದು ಹೇಳಿದರು.
ಮುಂದುವರೆದು ಮಾತನಾಡಿ ಪೋಷಕರು ಮಕ್ಕಳಲ್ಲಿ ಇಂತದ್ದೆ ಓದಬೇಕು ಇಂಥದ್ದೇ ಒತ್ತಡ ಹೇರಬಾರದು ಎಲ್ಲ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಚಿತ್ರಕಲೆ, ಹಾಡುಗಾರಿಕೆ, ಡಾಕ್ಟರ್ ಮತ್ತು ಇಂಜಿನಿಯರ್ ಇನ್ನು ಹಲವು ಇತ್ಯಾದಿ ಆಗಬೇಕೆಂದು ಮಕ್ಕಳಲ್ಲಿ ಆಸೆ ಇರುತ್ತದೆ ಅವರ ಆಸೆಗೆ ಪೋಷಕರು ಒತ್ತಾಸೆಯಾಗಿ ನಿಲ್ಲಬೇಕು. ಅದಕ್ಕೆ ಪೂರಕವಾಗಿ ಮಕ್ಕಳು ವಿದ್ಯಾವಂತರಾಗಬೇಕು ಎಂದು ಹೇಳಿದರು.
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಅನಿಕ ಕನಸು, ಮಾನ್ಯ, ನಯನ.ಪಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪೃಥ್ವಿ ರಾಣಿ,ನೇಹಾ,ಅಕ್ಷತಾ,ಕನ್ನಿಕಾ, ಸೂರ್ಯಆರ್ಯನ್, ಚಿನ್ಮಯ್ ಪರಂಜ್ಯೋತಿ ಮತ್ತು ನವೋದಯ ಶಾಲೆಗೆ ಆಯ್ಕೆಯಾದ ಯಶಸ್. ಎಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಮುಖಂಡರಾದ ಯಜಮಾನ್ ಶಿವರುದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಮಹೇಶ್, ಮುಖ್ಯ ಶಿಕ್ಷಕ ಶಂಕ್ರಯ್ಯ, ಪಿ.ಮಹದೇವಸ್ವಾಮಿ, ಸೋಸಲೆ ನಾಗೇಶ್, ನಾಗೇಂದ್ರ.ಆರ್, ಪ್ರಸನ್ನ, ಪ್ರಕಾಶ್, ಸಿದ್ದರಾಜು ಹೊಸಹಳ್ಳಿ, ಸಿದ್ದರಾಜು ಕಲ್ಕುಣಿ, ರಾಜಪ್ಪ,ಲೋಕೇಶ್,ಭಾರತೀಯ ಬೌದ್ಧ ಮಹಾಸಭಾ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.