ಚಿಂತಾಮಣಿ: ತಾಲೂಕ ಮಟ್ಟದ ೨೦೨೫-೨೬ ನೇ ಸಾಲಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅ ೨೯ ಮತ್ತು ೩೦ ರಂದು ನಗರದ ಝಾನ್ಸಿ ಮೈದಾನ ಹಮ್ಮಿಕೊಂಡ ಮೇಲಾಟಗಳ ಕ್ರೀಡಾಕೂಟವು ಗುರುವಾರ ಸಮಾರೋಪಗೊಂಡಿತು. ಚಿAತಾಮಣಿ ತಾಲೂಕು ಪ್ರಭಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ಜಿ ನರಸಿಂಹಪ್ಪ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಯಶಸ್ವಿ ಮಾತನಾಡಿ ಕ್ರೀಡೆಗಳಲ್ಲಿ ಇಲ್ಲದ ಮನುಷ್ಯ ಕೀಟ ತಿಂದ ಹಣ್ಣಿನಂತೆ. ಪ್ರತಿಯೊಬ್ಬರು ಒಂದಿಲ್ಲೊAದು ಆಟದಲ್ಲಿ ಭಾಗವಹಿಸಬೇಕು. ಪ್ರತಿಯೊಬ್ಬರಲ್ಲೂ ಒಂದು ಪ್ರತಿಭೆ ಇರುತ್ತದೆ ಅದನ್ನು ಆಚೆ ತರಬೇಕೆಂದರೆ ನೀವು ಕ್ರೀಡೆಗಳಲ್ಲಿ ಕ್ರಿಯಾಸಿಲರಾಗಿರಬೇಕು ಓದಿನಷ್ಟೇ ಕ್ರೀಡಿಗು ಮಹತ್ವವನ್ನು ನೀಡಬೇಕು ಸದೃಢವಾದ ದೈಹಿಕ ಆರೋಗ್ಯವಾಗಿದ್ದಾಗ ಮಾತ್ರ ಮಾನಸಿಕ ಆರೋಗ್ಯ ಇರುತ್ತದೆ ನಾವು ಮಾನಸಿಕವಾಗಿ ಆರೋಗ್ಯವಾಗಿದ್ದರೆ ಓದಿನಲ್ಲಿ ಉತ್ತಮ ಸಾಧನೆ ಮಾಡಬಹುದು.
ತಾಲೂಕು ಮಟ್ಟದ ಕ್ರೀಡಾಕೂಟಗಳು ಯಶಸ್ವಿಯಾಗಲು ಸಹಕರಿಸಿದ ತಾಲೂಕು ಆಡಳಿತ ತಾಲೂಕು ಪಂಚಾಯತ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮಾದೇವಿ ಹಾಗೂ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಧನ್ಯವಾದಗಳು ತಿಳಿಸಿದರು. ದೈ ಶಿ ಶಿ ರಾಜ್ಯ ಸಂಘದ ಪದಾಧಿಕಾರಿ ಶ್ರೀಧರ ಹಿರೇಮಠ್ ಮಾತನಾಡಿ ಮೇಲಾಟಗಳು ಎಲ್ಲಾ ಕ್ರೀಡೆಗಳ ತಂದೆ ಇದ್ದಂತೆ ಇವು ಪ್ರಥಮವಾಗಿ ಗ್ರೀಕ್ ದೇಶದಲ್ಲಿ ಪ್ರಾರಂಭವಾದವು. ಗ್ರೀಕ್ ದೇಶದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ ಮತ್ತು ಕಠಿಣ ಪರಿಶ್ರಮದ ಅಭ್ಯಾಸದಿಂದಾಗಿ ಅವರು ಒಲಂಪಿಕ್ ಕ್ರೀಡೆಗಳಲ್ಲಿ ಹೆಚ್ಚಿನ ಪದಕಗಳನ್ನ ಪಡೆಯುತ್ತಾರೆ. ನೀವು ಕೂಡ ಮೇಲಾಟಗಳಲ್ಲಿ ಭಾಗವಹಿಸಿ ಸತತವಾದ ಅಭ್ಯಾಸದಿಂದ ರಾಜ್ಯ ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ವೈಯಕ್ತಿಕ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದು ಹೇಳಿದರು. ತಾಲೂಕು ಕಾರ್ಯದರ್ಶಿ ಕೈವಾರ ರಮೇಶ್ ಅವರು ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು. ಮೇಲಾಟಗಳ ತೀರ್ಪುಗಾರರಾಗಿ ಸುರೇಶ್ ಬಾಬು, ಪುನೀತ್ ಕುಮಾರ್, ವಾಣಿ ಮಂಜುನಾಥ್, ಗಿರೀಶ್, ಶ್ರೀನಿವಾಸ್, ನಾಗೇಶ್, ಉಪೇಂದ್ರ ಕುಮಾರ್, ಪರಮೇಶ್ವರ್, ಶಂಕರ್, ರವೀಂದ್ರ ಹಳ್ಳೂರ್, ಪುಷ್ಪಲತಾ, ಕಾಂಚನ, ಅಲವೇಲಮ್ಮ ಕಾರ್ಯನಿರ್ವಹಿಸಿದರು.



