ನೆಲಮಂಗಲ: ಪರಿಶಿಷ್ಟಜಾತಿ ಪಂಗಡಗಳಕುಂದುಕೊರತೆ ಸಭೆಗಳಲ್ಲಿ ಚರ್ಚೆಯಾಗುತ್ತಿ ರುವ ಕೆಲ ಸಮಸ್ಯೆಗಳು ದಶಕಗಳೇ ಕಳೆದರೂ ಸೂಕ್ತ ಪರಿಹಾರ ಒದಗಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ರಾಜ್ಯದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಆರ್.ಭಾಸ್ಕರ್ಪ್ರಸಾದ್ ಆರೋಪಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪರಿಶಿಷ್ಠಜಾತಿ ಪಂಗಡದವರ ಕುಂದುಕೊರೆತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ನಗರದ ಸರ್ವೇ.ನಂ 246 1.02 ಎಕರೆ ಬಂಡಿಮಾರ್ಗ ಹೆಸರಿನ ಕಂದಾಯ ಇಲಾಖೆಗೆ ಸೇರಿದ ಜಾಗ ವಶಕ್ಕೆ ಪಡೆದು ಬಾಬು ಜಗಜೀವನ್ರಾಂ ಭವನ ನಿರ್ಮಿಸು
ವುದು, ನಗರದ ಸ.ನಂ 8/3ರಲ್ಲಿ 30 ಎಕರೆಸರ್ಕಾರಿ ಜಾಗದಲ್ಲಿ ನಿರಾಶ್ರಿತ ಪರಿಶಿಷ್ಠಜಾತಿ ಪಂಗಡದವರಿಗೆ ನಿವೇಶನ ಹಂಚಿಕೆ ಮಾಡು
ವುದು, ತಾಲೂಕಿನ ಬಾವಿಕೆರೆ ಗ್ರಾಮದ ಸ.ನಂ 54 ರಲ್ಲಿನ 2.41 ಗುಂಟೆ ಜಾಗದಲ್ಲಿ ಪಟ್ಟಭದ್ರರು ಅನಧಿಕೃತ ಮೆನೆ ನಿರ್ಮಿಸಿಕೊಂಡಿದ್ದು ತೆರವುಗೊಳಿಸಿ ಪರಿಶಿಷ್ಠಜಾತಿ ಪಂಗಡದವರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವುದು.
ತಾಲೂಕಿನ ಮಂಟನಕುರ್ಚಿ ಗ್ರಾಮದಲ್ಲಿ ಅರೆಅಲೆಮಾರಿಜನಾಂಗ ಅಸಾದಿಗಳಿಗೆ ನೀಡಿದ ಮಾನ್ಯ ಜಮೀನುಗಳನ್ನು ಒತ್ತುವರಿ ತೆರವು ಸೇರಿದಂತೆ ಅನೇಕ ವಿಚಾರಗಳಿಗೆ ಇದುವರೆಗೂ ಸೂಕ್ತ ಪರಿಹಾರ ಒದಗಿಸಿಲ್ಲ. ಕೇವಲ ಸಭೆಗಳಲ್ಲಿನ ಚರ್ಚೆಗೆ ಸೀಮಿತವಾಗಿವೆ. ಇದೇ ಸಮಸ್ಯೆಗಳನ್ನು ಮುಂದಿಟ್ಟಕೊಂಡ ಕೆಲ ಅಧಿಕಾರಿಗಳು ಪಟ್ಟಭದ್ರರಿಂದ ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದರು. ದಲಿತ ಸಂಘಟನೆಯ ಗಂಗಬೈಲಪ್ಪ, ಛಲವಾದಿ ನಾಗೇಂದ್ರ ಧ್ವನಿಗೂಡಿಸಿದರು.
ನಗರದ ಸ.ನಂ 246 ಸರ್ಕಾರಿ ಜಾಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ಸರ್ಕಾರದ ಪರ ವಕೀಲರು ಸಮರ್ಪಕ ಕಾನೂನು ಹೋರಾಟ ಮಾಡಿ ಸರ್ಕಾರಿ ಆಸ್ತಿಯನ್ನು ರಕ್ಷಿಸುವಲ್ಲಿ ವಿಫಲರಾಗಿದ್ದು ಬೇರೆ ವಕೀಲರನ್ನು ನಿಯೋಜಿಸುವುದು ಜತಗೆ ನಗರಸಭೆಗೆ ಸೇರಿದ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಗೆ ಸಂಬಂಧಿಸಿದಂತೆ ಇರುವ ಕಾನೂನು ಸಲಹೆಗಾರರನ್ನು ಬದಲಾಯಿಸುವಂತೆ ಬಿ.ಆರ್.ಬಾಸ್ಕರ್ ಪ್ರಸಾದ್ ಆಗ್ರಹಿಸಿದರು. ಇದಕ್ಕೆ ಇನ್ನು ಕೆಲ ದಲಿತ ಮುಖಂಡರು ಒತ್ತಾಯಿಸಿದರು.
ಪರಿಶಿಷ್ಠಜಾತಿ ಪಂಗಡದವ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹೋರಾಟ ಮಾಡುವ ದಲಿತ ಸಂಘಟನೆಗಳ ಮುಖಂಡರುಗಳನ್ನು ರೌಡಿ ಪಟ್ಟಿಯಿಂದ ಕೈಬಿಡಲು ತೀರ್ಮಾನಿಸಲಾಯಿತು. ಸಾರ್ವಜನಿಕ ಉದ್ದೇಶಕ್ಕೆ ಬಳಕೆಯ ದೃಷ್ಠಿಯಿಂದ ಕವಾಡಿಮಠದ ಒತ್ತುವರಿಯನ್ನು ವಿಚಾರವನ್ನು ಕೈಬಿಡಲಾಯಿತು.
ಸಂದರ್ಭದಲ್ಲಿ ತಹಸೀಲ್ದಾರ್ ಅಮೃತ್ಆತ್ರೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಾಧಿಕಾರಿ ಎಲ್.ಮಧು, ಡಿವೈಎಸ್ಪಿ ಜಗದೀಶ್, ಆರಕ್ಷಕ ನಿರೀಕ್ಷಕ ಶಶಿಧರ್, ಬಿಇಓ ತಿಮ್ಮಯ್ಯ, ನಗರಸಭೆ ಪೌರಾಯುಕ್ತ ಮನುಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಂ.ವಾಣಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವೀರಣ್ಣ, ದಲಿತ ಕೂಲಿಕಾರ್ಮಿಕರ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎಂ.ಗಂಗಬೈಲಪ್ಪ,
ಬೆಳಕು ಕಾರ್ಮಿಕ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಕೀಲ ಕನಕರಾಜು, ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯ ಬಿ.ಎನ್. ನರಸಿಂಹಮೂರ್ತಿ, ಜನಸೈನ್ಯ ಸಂಘದ ಸಂಸ್ಥಾಪಕ ನರಸಿಂಹಯ್ಯ, ಪರಿಶಿಷ್ಠಜಾತಿ ಪಂಗಡದ ಮುಖಂಡರಾದ ಬೊಮ್ಮನಹಳ್ಳಿ ನಾಗರಾಜು, ರಾಜುನಿಡವಂದ, ಶಿವಗಂಗೆ ಹನುಮಂತ ರಾಜು, ಗಂಗಾಧರ್, ಹೈಟೆಕ್ ರಾಜು, ಮಲ್ಲೇಶ್, ನಾಗರಾಜು, ತ್ಯಾಮಗೊಂಡ್ಲು ಶ್ರೀನಿವಾಸ್, ಮರಿವೆಂಕಟಪ್ಪ, ನಂದಕುಮಾರ್ ಮತ್ತಿತರರು ಉಪಸ್ಥಿತರಿದ್ದರು.