ಜೈಪುರ: ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ತುಂಬಿದ್ದ ಟ್ರಕ್ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಭಾರೀ ಸ್ಫೋಟ ಸಂಭವಿಸಿರುವ ಘಟನೆ ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಏಳು ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಚಾಲಕ ರಸ್ತೆಬದಿಯಲ್ಲಿ ಟ್ರಕ್ ಅನ್ನು ನಿಲ್ಲಿಸಿ, ಊಟಕ್ಕೆಂದು ಹೋಟೆಲ್ ಹೋಗಿದ್ದ. ಈ ವೇಳೆ ಟ್ಯಾಂಕರೊAದು ತಿರುವು ಪಡೆಯುತ್ತಿದ್ದಾಗ ನಿಯಂತ್ರಣ ತಪ್ಪಿ ಸಿಲಿಂಡರ್ ತುಂಬಿದ್ದ ಟ್ರಕ್ಗೆ ಹಿಂಬದಿಯಿAದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊAಡು, ನಂತರ ಗ್ಯಾಸ್ ಸಿಲಿಂಡರ್ಗಳು ಒಂದರ ನಂತರ ಒAದರAತೆ ಸರಣಿ ಸ್ಫೋಟಗೊಂಡಿದೆ