ಬೆಂಗಳೂರು: ನೀರಿಗಾಗಿ ಗ್ರಾಮಗಳ ಮಧ್ಯ ಬಡಿದಾಟ ವ್ಯಕ್ತಿ ಕೊಲೆ ಯಲ್ಲಿ ಅಂತ್ಯ ಎಂಬ ಅಂಶದೊಂದಿಗೆ ಮೂಡಿಬಂದ ನಾಟಕ ತಾರಕ್ಕ ಬಿಂದಿಗೆ.ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ ಎಂಬ ಜಾನಪದ ಹಾಡಿನ ಚರಣವನ್ನು ತಲೆಬರಹವಾಗಿ ಇಟ್ಟು ಅನುವಾದ ಮಾಡಿದ ನಾಟಕ ಇದಾಗಿದೆ.
ತಮಿಳು ನಿರ್ದೇಶಕರಾದ ಬಾಲಚಂದರ್ ಊಹೆ ಇಂದ ಹೊರಬಂದ ತಣ್ಣೀರ್-ತಣ್ಣೀರ್ ಸಿನಿಮಾದ ಸಾರಾಂಶವನ್ನು ನಾಗರಾಜರಾವ್ ಕನ್ನಡ ನಾಟಕವಾಗಿ ಅನುವಾದ ಮಾಡಿದ್ದಾರೆ,ಇಂದಿಗೂ ಕರ್ಣಾಟಕದ ಬಯಲು ಸೀಮೆಗಳಲ್ಲಿ ಕಾಣ ಬಹುದಾದ ನೀರಿನ ಬವಣೆ ಯನ್ನು ಈ ನಾಟಕದ ರೂಪದಲ್ಲಿ ನಿರ್ದೇಶಕರಾದ ರಾಜೇಶ್ ಕಶ್ಯಪ್ ದೃಶ್ಯರೂಪದಲ್ಲಿ ನಮಗೆ ನೀಡಿದ್ದಾರೆ.
ಬುಧವಾರ ರಾತ್ರಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿತವಾದ ತಾರಕ್ಕ ಬಿಂದಿಗೆ ನಾಟಕವನ್ನು ಬೆಂಗಳೂರಿನ ಐಶ್ವರ್ಯಕಲಾನಿಕೇತನದವರು ಪ್ರಸ್ತುತ ಪಡಿಸಿದರು.ಇತ್ತೀಚಿನ ದಿನಗಳಲ್ಲಿ ಮನರಂಜನೆ ನೀಡುವ ನಾಟಕಗಳಿಗೆ ಬರುವ ಜನ ಕಡಿಮೆ ಎಂದು ಭಾವಿಸಿದವರಿಗೆ ತುಂಬಿದ ಸಭಾಂಗಣ ಇಂದಿಗೂ ರಂಗಭೂಮಿಗೆ ಆದರಣೆ ಕಡಿಮೆ ಯಾಗಲಿಲ್ಲ ಎಂಬ ಭಾವನೆ ಮೂಡಿಸಿತು.
ಬಿಳಿಯಪ್ಪನ ಪಾತ್ರದಲ್ಲಿ ಹರ್ಷ ರವರು ತಾನು ಎರಡು ಕೊಲೆ ಮಾಡಿರುವುದಾಗಿ ಒಪ್ಪಿದ್ದರೂ ತಮ್ಮ ಊರಿಗೆ ನೀರು ತರಲು ಮುಂದೆ ಬಿದ್ದಿದ್ದರಿಂದ ಬಿಳಿಯಪ್ಪ ನನ್ನು ರಕ್ಷಿಸಲು ಮುಂದಾದ ಗ್ರಾಮಸ್ಥರ ಪ್ರಮಾಣ ವಚನ ಇಂದಿನ ವ್ಯವಸ್ಥೆಗೆ ಕಣ್ಣು ತೆರಸುವಂತಾಗಿತ್ತು. ಬಿಳಿಯಪ್ಪ ಎರಡು ಕೊಲೆಗಳನ್ನು ಮಾಡಲು ಕಾರಣ ವಿವರಿಸಿದಾಗ ಆತನು ಮಾಡಿದ ಕೆಲಸ ಸರಿ ಎಂಬ ಭಾವನೆ ಗ್ರಾಮಸ್ಥರಲ್ಲಿ ಮೂಡಿ ಆತನನ್ನು ರಕ್ಷಣೆ ಮಾಡಲು ಮುಂದಾಗುತ್ತಾರೆ.
ಮನುಷ್ಯ ಕೋಪದಲ್ಲಿ ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ಪಡುವ ಸನ್ನಿವೇಶ ಪ್ರೇಕ್ಷಕರ ಮನ ಮುಟ್ಟು ವಂತಿತ್ತು.ಬಿಳಿಯಪ್ಪ ಕೊಲೆ ಯಾದಾಗ ಶವ ಸಂಸ್ಕಾರದ ಸ್ನಾನಕ್ಕು ನೀರಿಲ್ಲದ ಸನ್ನಿವೇಶ ಮನಕಲುಕುವಂತಿತ್ತುಗುರುವಜ್ಜನ ಪಾತ್ರದಲ್ಲಿ ರಾಘವೇಂದ್ರ ನಾಡಿಗ್ ಹಿರಯರ ಗಾಂಭೀರ್ಯ ಹಾಗು ಹಿರಿತನವನ್ನು ಪ್ರದರ್ಶನೆ ಮಾಡುವಲ್ಲಿ ಯಶಸ್ವಿ ಯಾದರು.ಕಿರಿಯರನ್ನು ಸಂದರ್ಭೋಚಿತವಾಗಿ ಸಮಾಧಾನ ಮಾಡಲು ತಮ್ಮ ಹಾವ,ಭಾವ ಪ್ರದರ್ಶನದಲ್ಲಿ ಯಶಶ್ವಿಯಾದರು.
ಶಾಂತ ಚಿತ್ತರಾಗಿ ಗ್ರಾಮದ ಒಳಿತನ್ನು ಬಯಸುವ ಪಾತ್ರವಾಗಿ ಮೇಷ್ಟ್ರು ಪಾತ್ರದಲ್ಲಿ ಮಂಜುನಾಥ ಉದ್ವೇಗ ಭರಿತ ಸನ್ನಿ ವೇಶಗಳಲ್ಲಿ ಯುವಕರನ್ನು ಸಮಾಧಾನ ಪಡಿಸುವ ನಟನೆ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.ಗಂಗಿ ಪಾತ್ರದಲ್ಲಿ ಸೌಭಾಗ್ಯ ಸಹಜ ಹೆಣ್ಣಿನ ಹೃದಯದಂತೆ ಬಿಳಿಯಪ್ಪನಿಗೆ ನೀರು ನೀಡುವುದಲ್ಲಿ ,ಗ್ರಾಮಕ್ಕೆ ನೀರು ತರುವಲ್ಲಿ ಬಿಳಿಯಪ್ಪನ ಕಾರ್ಯ ವೈಖರಿಗೆ ಸಹಮತ ಸೂಚಿಸಿದ್ದು,ಸಮಾಜದ ಕಷ್ಟ ಸುಖಗಳಲ್ಲಿ ಹೆಣ್ಣು ಹೇಗೆ ಭಾಗಿಯಾಗ ಬಹುದು ಎಂದು ನೀಡಿದ ಪ್ರದರ್ಶನ ಸಹಜ ಸನ್ನಿವೇಶಗಳಿಗೆ ಹತ್ತಿರವಾಗಿತ್ತು.ನೀರಿಗಾಗಿ ಬಿಳಿಯಪ್ಪ ನನ್ನು ಬಂಧಿಸಲು ಬಂದ ಪತಿ ಪೋಲೀಸು ವೆಂಕಟಪ್ಪನ ಕಾರ್ಯಕ್ಕೆ ಬೇಸತ್ತು ತಾಳಿಯನ್ನು ಕಿತ್ತೆಸಿಯುವ ನಟನೆ ಸನ್ನಿವೇಶಕ್ಕೆ ಹತ್ತಿರವಾಗಿತ್ತು.
ನಾಟಕ ನಿರ್ಧೇಶನ ಮಾಡಿದ ರಾಜೇಶ್ ಕಶ್ಯಪ್ ಪೋಲೀಸು ವೆಂಕಟಪ್ಪನ ಪಾತ್ರದಲ್ಲಿ ಸಹಜವಾದ ದರ್ಪ, ಹಾಗು ಭಾವಿ ಪತ್ನಿ ಗಂಗಿ ಯೊಡನೆ ಸಹಜ ಸಂಭಾಷಣೆ, ಕೊಲೆಗಾರ ಬಿಳಿಯಪ್ಪನ ಬಂಧನದಲ್ಲಿ ಊರ ಒಳತಿಗಾಗಿ ಒಂದುದಿನ ಮುಂದೊಡಿಯುವುದು, ಸಂಭಾಷಣೆಗಳಲ್ಲಿ ಭಾವಕ್ಕೆ ತಕ್ಕಂತೆ ಸ್ವರಗಾಂಭೀರ್ಯವಿತ್ತು.
ಪ್ರಥಮ ಬಾರಿಗೆ ರಂಗಸ್ಥಳದ ವೇದಿಕೆಯ ಮೇಲೆ ಕಾಣಿಸಿಕೊಂಡ ಪತ್ರಕರ್ತೆ ಪಾತ್ರದಲ್ಲಿ ಸುನಿತಾ, ಹಾಗು ಮಾದ ಪಾತ್ರದಲ್ಲಿ ಪುಷ್ಕರ್ ಮುಂದೆ ಉತ್ತಮ ಭವಿಷ್ಯ ವಿರುವ ನಟನೆಯನ್ನು ಪ್ರದರ್ಶಿಸಿದರು.ಸಾಹುಕಾರನಾಗಿ ಉಗ್ರಂ ಸುರೇಶ್ ಹೆಸರಿಗೆ ತಕ್ಕಂತೆ ಉಗರನಾಗಿ ಗ್ರಾಮಸ್ಥರ ಮೇಲೆ ಪ್ರದರ್ಶಿಸಿದ ದರ್ಪ ಕನ್ನಡ ಚಲನಚಿತ್ರ ನಟ ವಜ್ರಮುನಿ ನಟನೆಯನ್ನು ನೆನಪಿಸಿತ್ತು.
ಐಶ್ವರ್ಯ ಕಲಾನಿಕೇತನ್ ಪ್ರಸನ್ನ ಕುಮಾರ್ ಇಂಜನೀರ್ ಯಾಗಿ ಕಾನಿಸಿಕೊಂಡು ಚಿಕ್ಕ ಸಂಭಾಷಣೆ ಯೊಂದಿಗೆ ಚೊಕ್ಕವಾಗಿ ನಿರ್ಗಮಿಸಿದರು.ಒಟ್ಟಾರೆ ನಟರೆಲ್ಲರೂ ತಮ್ಮ ಪಾತ್ರಗಳಿಗೆ ಪ್ರಾನ ನೀಡಿ ಪ್ರದರ್ಶಿಸಿದರು.ಕಾರಾಕೂನ ಹಾಗೂ ಸಂಗೀತ ನಿರ್ವಹಣೆಯಲ್ಲಿ ಚೇತನ್,ತಮಟೆ ಹಾಗು ರಂಗಸಜ್ಜಿಕೆ ಯಲ್ಲಿ ವೆಂಕಟೇಶ್ ತಮ್ಮ ಪ್ರತಿಭೆಯನ್ನು ತೋರ್ಪದಿಸಿದರು.
ಎರಡು ಗಂಟೆಗಳ ಕಾಲ ಸಭಿಕರ ಮನಸೂರಗೊಂಡ ನಾಟಕ ತಾರಕ್ಕ ಬಿಂದಿಗೆ ಇಂದಿನ ಗ್ರಾಮೀಣ ಪ್ರದೇಶಗಳ ನೀರಿನ ಬವಣೆಯನ್ನು ನಗರ ಜನತೆಗೆ ಅರ್ಥಗರ್ಭಿತವಾಗಿ ಮನದಟ್ಟು ಮಾಡುವಲ್ಲಿ ನಿರ್ದೇಶಕ ರಾಜೇಶ್ ಕಶ್ಯಪ್ ಯಶಶ್ವಿಯಾದರು.
ಒಟ್ಟಾರೆ ನಾಟಕ ಪ್ರೇಕ್ಷಕರ ಮನ ಗೆದ್ದುವಲ್ಲಿ ಯಶಶ್ವಿ ಕಾಣಿತು. ನಾಟಕದ ಮಧ್ಯೆ ಚೇತನ್ ರವರ ಸಂಗೀತ, ಪಾತ್ರಗಳು ಎರಡು ಬಾರಿ ಮಾಡಿದ ನೃತ್ಯ ಗಂಗಿ ಪಾತ್ರದಲ್ಲಿ ಔಚಿತ್ಯದ ಮಾತುಗಳು, ಪೋಲೀಸು ವೆಂಕಟಪ್ಪನ ದರ್ಪ ಮರಿಯಲಾರದ ನಟನೆಯಾಗಿ ಉಳಿಯಿತು.
ನಾಟಕ ವಿಮರ್ಶೆ: ಲೇಪಾಕ್ಷಿ ಸಂತೋಷರಾವ್