ಬೆಂಗಳೂರು: ಭಾರತದ ಪ್ರಮುಖ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಟಾಟಾ ಎಐಎ ಲೈಫ್ ಇನ್ಶೂರೆನ್ಸ್ ಕಂ. ಲಿಮಿಟೆಡ್ (ಟಾಟಾ ಎಐಎ) ಅಸೆಟ್ ಅಂಡರ್ ಮ್ಯಾನೇಜ್ಮೆಂಟ್(ಎಯುಎಂ)ನಲ್ಲಿ ರೂ. 1 ಲಕ್ಷ ಕೋಟಿ ದಾಟಿರುವ ಸಾಧನೆ ಮಾಡಿದೆ. ಮೂರು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಕಂಪನಿಯು ತನ್ನ ಎಯುಎಂ ಅನ್ನು ದ್ವಿಗುಣಗೊಳಿಸಿದೆ.
ರೂ.50000 ಕೋಟಿ (ಆಗಸ್ಟ್ 2021) ಇದ್ದ ಎಯುಎಂ ಮೂರು ವರ್ಷದಲ್ಲಿ ರೂ.1,00,000 ಕೋಟಿ ತಲುಪಿದೆ. ಇಂಡಿವಿಜುವಲ್ ನ್ಯೂ ಬಿಸಿನೆಸ್ ಪ್ರೀಮಿಯಂ (ಐಡಬ್ಲ್ಯೂಎನ್ಬಿಪಿ) ಆದಾಯದಲ್ಲಿನ ಉತ್ತಮ ಬೆಳವಣಿಗೆ ಮತ್ತು ಉನ್ನತ ಹೂಡಿಕೆಯ ಕಾರ್ಯಕ್ಷಮತೆಯಿಂದ ಈ ಹೆಚ್ಚಳವು ಉಂಟಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಎಐಎಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ವೆಂಕಿ ಅಯ್ಯರ್, ನಮ್ಮ ಎಯುಎಂ ಅನ್ನು 3 ವರ್ಷಗಳಲ್ಲಿ ದ್ವಿಗುಣಗೊಳಿಸಿರುವುದು ಗ್ರಾಹಕರು ನಮ್ಮ ನವೀನ ಉತ್ಪನ್ನಗಳು ಮತ್ತು ಸೇವಾ ಅನುಭವದ ಮೇಲೆ ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ.
ನಮ್ಮ ಏಜೆಂಟ್ಗಳು ಮತ್ತು ಪಾಲುದಾರರ ಬೆಂಬಲ ಮತ್ತು ನಮ್ಮ ಹೂಡಿಕೆ ತಂಡದ ಅತ್ಯುತ್ತಮ ಕಾರ್ಯಕ್ಷಮತೆಗೂ ಇದು ಪುರಾವೆಯಾಗಿದೆ ಎಂದು ಹೇಳಿದರು.
ಆರ್ಥಿಕ ವರ್ಷ 24ರ 3ನೇ ತ್ರೈಮಾಸಿಕದಲ್ಲಿ 4 ಸಮೂಹಗಳಲ್ಲಿ(13ನೇ, 25ನೇ, 37ನೇ, 61ನೇ ತಿಂಗಳು) #1ನೇ ಸ್ಥಾನ ಪಡೆಯುವ ಮೂಲಕ ಟಾಟಾ ಎಐಎ ಅತ್ಯುತ್ತಮ ಕಾರ್ಯಕ್ಷಮತೆಯನ್ನು (ಪ್ರೀಮಿಯಂ ಆಧರಿಸಿದಂತೆ) ಸಾಧಿಸಿ ತೋರಿಸಿದೆ.ಕ್ಲೈಮ್ಗಳ ಇತ್ಯರ್ಥದ ಅನುಪಾತವು 12-ತಿಂಗಳ ಆಧಾರದ ಮೇಲೆ 0.71%ರಷ್ಟು ಬೆಳವಣಿಗೆಯೊಂದಿಗೆ ಡಿಸೆಂಬರ್-23ರ ಪ್ರಕಾರ 99.19%ಕ್ಕೆ ಸುಧಾರಣೆ ಕಂಡಿದೆ.
ಟಾಟಾ ಎಐಎಯ ಹೂಡಿಕೆ ತತ್ವವು ಪಾಲಿಸಿದಾರರಿಗೆ ಗ್ರಾಹಕರಿಗೆ ಉನ್ನತವಾದ, ಸ್ಥಿರವಾದ ಮತ್ತು ಅಪಾಯ ಹೊಂದಾಣಿಕೆಯ ದೀರ್ಘಾವಧಿಯ ಆದಾಯವನ್ನು ನೀಡುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ಕಾರ್ಯವಿಧಾನವು ಬಾಟಮ್-ಅಪ್ ಸ್ಟಾಕ್-ಪಿಕ್ಕಿಂಗ್ ಎಂಬ ತಂತ್ರದಿಂದ ನಡೆಸಲ್ಪಡುತ್ತದೆ. ಮಾರ್ನಿಂಗ್ಸ್ಟಾರ್ ರೇಟಿಂಗ್ಸ್* ಮಾರ್ಚ್ 31 2024ರ ಪ್ರಕಾರ ಟಾಟಾ ಎಐಎನ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ (ಎಯುಎಂ)ನ 91%ಗೆ 4 ಸ್ಟಾರ್ ಅಥವಾ 5 ಸ್ಟಾರ್ಗಳನ್ನು ರೇಟಿಂಗ್ ನೀಡಲಾಗಿದೆ. ಈ ರೇಟಿಂಗ್ ಅನ್ನು 5- ವರ್ಷದ ಆಧಾರದ ಮೇಲೆ ಮಾಡಲಾಗಿದೆ. ಗಮನ ಹರಿಸಬೇಕಾದ ವಿಚಾರವೆಂದರೆ, ಫಂಡ್ ಗಳು ವಿವಿಧ ಕಾಲಾವಧಿಯಲ್ಲಿ ಅದರ ಮಾನದಂಡಗಳನ್ನು ಮೀರಿಸಿವೆ.