ವಾಷಿಂಗ್ಟನ್: ಭಾರತ ಸೇರದಂತೆ ಅನೇಕ ದೇಶಗಳ ಉತ್ಪನ್ನಗಳ ಮೇಲೆ ಮನಬಂದAತೆ ಸುಂಕ ಹೆಚ್ಚಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಅಲ್ಲಿನ ಸುಪ್ರೀಂ ಕೋರ್ಟ್ ಕಡಿವಾಣ ಹಾಕಿದೆ. ಪರಿಣಾಮವಾಗಿ ಟ್ರಂಪ್ ಸುಂಕ ನೀತಿಗೆ ದೊಡ್ಡ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಭಾರತವೂ ಸೇರಿದಂತೆ ಅಮೆರಿಕದೊಂದಿಗೆ ಸುಂಕ ಒಪ್ಪಂದ ಮಾಡಿಕೊಂಡಿರುವ ದೇಶಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಶೇ ೧೦ ರ ಸಾಮಾನ್ಯ ಸುಂಕವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ, ಈ ತೀರ್ಪು ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಆಡಳಿತ ಹೊಸ ಆದೇಶ ಹೊರಡಿಸಿದ್ದು, ಅಮೆರಿಕಕ್ಕೆ ಆಮದು ಆಗುವ ವಸ್ತುಗಳ ಮೇಲೆ ಶೇ ೧೦ ರ ಸುಂಕ ವಿಧಿಸಿದೆ. ಈ ಹೊಸ ಸುಂಕ ಫೆಬ್ರವರಿ ೨೪ ರಿಂದ ೧೫೦ ದಿನಗಳ ಕಾಲ ಜಾರಿಯಲ್ಲಿರಲಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ. ಆದರೆ ಔಷಧಿ ಸೇರಿದಂತೆ ಕೆಲವು ವಲಯಗಳಿಗೆ ವಿನಾಯಿತಿ ಮುಂದುವರಿಯಲಿದೆ.



