ಕ್ರಿಕೆಟ್ ನಲ್ಲಿ ಎಂಥೆದ್ದದ್ದೋ ರೀತಿಯ ಸಂಭ್ರಮಾಚರಣೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಶ್ರೀರಾಮ ಲಕ್ಷ÷್ಮಣರ ಶೈಲಿಯಲ್ಲಿ ಬಿಲ್ಲು-ಬಾಣದ ಸಂಜ್ಞೆ ಮಾಡಿದ
ಉದಾಹರಣೆಯಿಲ್ಲ. ಇದೀಗ ದಕ್ಷಿಣ ಆಫ್ರಿಕಾದ ಮಹಿಳಾ ತಂಡದ ಸ್ಟಾರ್ ಬ್ಯಾಟರ್ ತಾಝ್ಮಿನ್ ಬ್ಪಿಟ್ಝ್ ಅವರು ನ್ಯೂಜಿಲೆಂಡ್ ವಿರುದ್ಧದ ೨೦೨೫ರ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ತಮ್ಮ ಏಳನೇ ಏಕದಿನ ಶತಕವನ್ನು ಪೂರೈಸಿದ ಬಳಿಕ ವಿಶಿಷ್ಟವಾದ ಬಿಲ್ಲು-ಬಾಣದ ಸಂಭ್ರಮಾಚರಣೆಯನ್ನು ಮಾಡಿದ್ದು ಎಲ್ಲರ
ಗಮನ ಸೆಳೆಯಿತು.
೩೧ನೇ ಓವರ್ನ ಮೂರನೇ ಎಸೆತದಲ್ಲಿ ಒಂಟಿ ರನ್ ಗಳಿಸುವುದರೊಂದಿಗೆ ಶತಕ ಪೂರೈಸಿದ ಅವರು ಮೈದಾನದಲ್ಲಿ ಕುಳಿತುಕೊಂಡು ತಮ್ಮ ಬತ್ತಳಿಕೆಯಿಂದ
ಬಾಣ ತೆಗೆದು, ಕಲ್ಪಿತ ಬಿಲ್ಲನ್ನು ಬಳಸಿ ಗುರಿಯತ್ತ ಬಿಡುವಂತೆ ಸಂಜ್ಞೆ ಮಾಡಿ ಹರ್ಷ ವ್ಯಕ್ತಪಡಿಸಿದರು. ಈ ರೀತಿಯ ಸಂಭ್ರಮಾಚರಣೆ Uಈಅ ಮತ್ತು ಫುಟ್ಬಾಲ್
ಮೊದಲಾದ ಕ್ರೀಡೆಗಳಲ್ಲಿ ಹೊಸತಲ್ಲ. ಅದೇ ಕ್ರಿಕೆಟ್ ಮೈದಾನಕ್ಕೆ ಹೊಸದೇ ಆಗಿರುವ ಈ ಸಂಭ್ರಮಾಚರಣೆಯನ್ನು ಕಂಡು ಪ್ರೇಕ್ಷಕರು ಬೆರಗಾದರು. ಈ ‘ಬಿಲ್ಲು ಮತ್ತು ಬಾಣ’ದ ಸಂಜ್ಞೆ ವಿಶ್ವಕಪ್ನಂತಹ ಪ್ರತಿಷ್ಠಿತ ಪಂದ್ಯಾವಳಿಯ್ಲಿ ತನ್ನ ಗುರಿ ಸರಿಯಾಗಿದೆ ಎಂದು ಅವರು ಸೂಚ್ಯವಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಪಾಕ್ ಆಟಗಾರ್ತಿಯರು ೬-೦ ಸಂಜ್ಞೆ ಮಾಡಿದ್ದು ಭಾರೀ ವಿವಾದವಾಗಿತ್ತು. ಆದರೆ ಬ್ರಿಟ್ಸ್ ಸಂಜ್ಞೆ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.
ಸಂಭ್ರಮಾಚರಣೆಗಳಿಗೆ ಫೇಮಸ್ ಬ್ರಿಟ್ಸ್ ಬ್ರಿಟ್ಸ್ಗೆ ಇಂತಹ ಸಂಭ್ರಮಾಚರಣೆಗಳು ಹೊಸದೇನಲ್ಲ. ಕೋವಿಡ್ ಸಮಯದಲ್ಲಿ ನಿಧನರಾದ ತಮ್ಮ ತಂದೆಗೆ ಗೌರವ
ಸೂಚಿಸಲು, ಅರ್ಧಶತಕ ಪೂರೈಸಿದ ಬಳಿಕ ಮೈದಾನದಲ್ಲಿ ‘ಬ್ಯಾಲೆರಿನ’ ನೃತ್ಯ ಮಾಡಿದ್ದರು. ಇದು ಅವರು ತಮ್ಮ ತಂದೆಯ “ಚಿಕ್ಕ ಮಗಳು” ಎಂಬುದನ್ನು ಧ್ವನಿಸಿತ್ತು. ಅದೇ ರೀತಿ ಬಿಲ್ಲು-ಬಾಣದ ಸಂಭ್ರಮಾಚರಣೆಗೂ ಒAದು ಹಿನ್ನಲೆ ಇದೆ. ದಕ್ಷಿಣ ಆಫ್ರಿಕಾದ ಇಬ್ಬರು ಅಭಿಮಾನಿಗಳು ಈ ಕಲ್ಪನೆಯನ್ನು ನೀಡಿದ್ದರು. “ನಾನು ಅಭಿಮಾನಿಗಳಿಂದ ಸAಭ್ರಮಾಚರಣೆಗಳ ಬಗ್ಗೆ ಕೇಳಿದೆ. ‘ನನಗೆ ನಿಮ್ಮ ಸಂಭ್ರಮಾಚರಣೆಗಳನ್ನು ಕೊಡಿ, ಏಕೆಂದರೆ ೫೦ ರನ್ ನನ್ನ ತಂದೆಗೆ ಮಾತ್ರ
ಮೀಸಲು’ ಎಂದು ಹೇಳಿದೆ.
ಆಗ ದಕ್ಷಿಣ ಆಫ್ರಿಕಾದ ೧೩ ವರ್ಷದ ಇಬ್ಬರು ಬಾಲಕಿಯರು ನನ್ನ ಅಭಿಮಾನಿಗಳು. ಅವರಲ್ಲಿ ಒಬ್ಬರು ಆಸ್ಟೆçÃಲಿಯಾದಲ್ಲಿ, ಇನ್ನೊಬ್ಬರು ದಕ್ಷಿಣ ಆಫ್ರಿಕಾದಲ್ಲಿ
ವಾಸಿಸುತ್ತಿದ್ದಾರೆ. ಅವರು ಶತಕ ಗಳಿಸಿದ ಬಳಿಕ ತಮಗಾಗಿ ಈ ರೀತಿ ಸಂಭ್ರಮಾಚರಣೆಯನ್ನು ಮಾಡಬೇಕೆAದು ಕೇಳಿಕೊಂಡರು. ಆದ್ದರಿಂದ ಆ ಸಂಭ್ರಮಾಚರಣೆ ಅವರಿಗಾಗಿ ಮಾಡಿದ್ದೇನೆ” ಎಂದು ಪಂದ್ಯಶೇಷ್ಠ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಬ್ರಿಟ್ಸ್ ವಿವರಿಸಿದರು.ಈ ಅದ್ಭುತ ಇನ್ನಿಂಗ್ಸ ಮೂಲಕ, ಬ್ರಿಟ್ಸ್ ಹಲವು ದಾಖಲೆಗಳನ್ನು ಮುರಿದರು. ವಿಶ್ವದ ಅತಿ ವೇಗವಾಗಿ ಏಳು ಔಆI ಶತಕಗಳನ್ನು ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.