ಬೆಂಗಳೂರು: ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಸತತವಾಗಿ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದವರು ಹಾಗೂ ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಖಾಸಗಿ ಕ್ಯಾನ್ಸರ್ ಆಸ್ಪತ್ರೆಗಳು ಚಿಕಿತ್ಸಾ ಸೌಲಭ್ಯ ಒದಗಿಸಲು ಮುಂದಾಗುವುದು ಅತ್ಯಗತ್ಯ ಎಂದು ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾಗಿರುವ ಟಿ.ಬಿ.ಜಯಚಂದ್ರ ಭಾನುವಾರ ಹೇಳಿದರು.ಕ್ಯಾನ್ಸರ್ ಬಾಧಿತರಿಗೆ ಸುಧಾರಿತ ಚಿಕಿತ್ಸೆಯನ್ನು ಜೇಬಿಗೆ ಹೊರೆಯಾಗದ ದರದಲ್ಲಿ ಲಭ್ಯವಾಗಿಸುವ ಉದ್ದೇಶದೊಂದಿಗೆ ಹೊಸದಾಗಿ ಸ್ಥಾಪಿಸಲಾಗಿರುವ ಏರಿಯನ್ ರೇಡಿಯೋಥೆರಪಿ ಮತ್ತು ಆಕಾಂಲಜಿ ಕೇಂದ್ರದ (ಎ.ಆರ್.ಸಿ. ಕ್ಯಾನ್ಸರ್ ಹಾಸ್ಪಿಟಲ್) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೇವೆಯನ್ನು ಮುಖ್ಯ ಗುರಿಯಾಗಿಸಿಕೊಂಡಿರುವ ಉತ್ತಮ ಮೂಲಸೌಕರ್ಯವುಳ್ಳ ಇಂತಹ ಖಾಸಗಿ ಆಸ್ಪತ್ರೆಗಳಿಗೆ ಕೂಡ ಸರ್ಕಾರ ನೆರವು ನೀಡಬೇಕಾಗುತ್ತದೆ ಎಂದರು. ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀಹರಿ ಶಾಪುರ್ ಅವರು, ಕ್ಯಾನ್ಸರ್ ಚಿಕಿತ್ಸೆಗೆ ಸಂಬAಧಿಸಿದAತೆ ವ್ಯವಸ್ಥೆಯಲ್ಲಿರುವ ಭಾರಿ ಕಂದಕದ ನಿವಾರಣೆಯನ್ನು ಗುರಿಯಾಗಿಸಿಕೊಂಡು ಈ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಮುಖ್ಯವಾಗಿ, ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ತ್ವರಿತವಾಗಿ ಉತೃಷ್ಟ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಿಸುವುದು ಈ ಆಸ್ಪತ್ರೆಯ ಗುರಿಯಾಗಿದೆ. ಬಿಪಿಎಲ್ ಹಾಗೂ ಆಯುಷ್ಮಾನ್ ಯೋಜನೆ ಫಲಾನುಭವಿಗಳಿಗೆ ಇಲ್ಲಿ ಚಿಕಿತ್ಸೆ ಲಭ್ಯವಾಗಿಸಲು ಕ್ರಮ ವಹಿಸಲಾಗುವುದು ಎಂದರು.
ಎ.ಆರ್.ಸಿ.ವೈದ್ಯಕೀಯ ನಿರ್ದೇಶಕಿ ಡಾ.ಸಂಸ್ಕೃತಿ ಪಿ.ಮೂರ್ತಿ ಅವರು, ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ಉಪಕರಣಗಳು ಯೋಜಿತ ಹಾಗೂ ತ್ವರಿತ ಚಿಕಿತ್ಸೆಗೆ ಅನುಕೂಲ ಕಲ್ಪಿಸುತ್ತವೆ ಎಂದರು.ಸಚಿವರಾದ ರಾಮಲಿಂಗಾ ರೆಡ್ಡಿ, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್, ಬೆಂಗಳೂರು ಜಾಮಿಯಾ ಮಸೀದಿಯ ಇಮಾಮ್ ಡಾ.ಮೊಹಮ್ಮದ್ ಮಖ್ಸೂದ್ ಇಮ್ರಾನ್ ರಷದಿ, ಜಿಬಿಎ ಮುಖ್ಯ ಕಮಿಷನರ್ ಡಾ.ಮಹೇಶ್ವರ ರಾವ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಆಸ್ಪತ್ರೆಯಲ್ಲಿನ ಸೌಲಭ್ಯಗಳು: ಪ್ರಸ್ತುತ ನಮ್ಮ ವ್ಯವಸ್ಥೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಯೇ ಸವಾಲಿನ ಸಂಗತಿಯಾಗಿದೆ. ಒಂದೆಡೆ, ದುಬಾರಿ ಕಾರ್ಪೊರೇಟ್ ಆಸ್ಪತ್ರೆಗಳಾದರೆ, ಮತ್ತೊಂದೆಡೆ, ರೋಗಿಗಳ ದಟ್ಟಣೆಯಿಂದ ತುಂಬಿ ತುಳುಕುವ ಸರ್ಕಾರಿ ಆಸ್ಪತ್ರೆಗಳು. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ದರವನ್ನು ಭರಿಸುವುದು ವಿಪರೀತ ಹೊರೆಯಾಗಿದ್ದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲಿಕ ಚಿಕಿತ್ಸೆಯ ಖಾತರಿ ಇಲ್ಲವಾಗಿದೆ. ಆದರೆ, ಎ.ಆರ್.ಸಿ. ಕ್ಯಾನ್ಸರ್ ಆಸ್ಪತ್ರೆಯು ಈ ಎರಡೂ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ಲಭ್ಯವಾಗಿಸಲಿದೆ. ಇಲ್ಲಿ ವಿಶ್ವದರ್ಜೆಯ ಗುಣಮಟ್ಟದ ಚಿಕಿತ್ಸೆಯನ್ನು ಹೊರೆಯೆನ್ನಿಸದ ದರದಲ್ಲಿ ಒದಗಿಸಲಾಗುವುದು. ಆಧುನಿಕ ತಂತ್ರಜ್ಞಾನ ಹಾಗೂ ಜಾಗತಿಕ ಪರಿಣತಿಯನ್ನು ಸಂಯೋಜನೆಗೊಳಿಸಿ ಉತ್ಕೃಷ್ಟ ಗುಣಮಟ್ಟದ ಕ್ಯಾನ್ಸರ್ ಶುಶ್ರೂಷೆಯನ್ನು ಬೆಂಗಳೂರಿಗೆ ಪರಿಚಯಿಸಲಾಗಿದೆ.
ಸಮಗ್ರ ಆರೋಗ್ಯಸೇವೆ ಒದಗಿಸಲು ಆಸ್ಪತ್ರೆ ಒತ್ತು ನೀಡಿದ್ದು, ಬಿಪಿಎಲ್ ಸ್ಕೀಮ್ ನಡಿಯಲ್ಲಿ ರೇಡಿಯೋಥೆರಪಿ ಸೇವೆಗಳನ್ನು ಲಭ್ಯವಾಗಿಸಲಾಗುತ್ತಿದೆ. ಇದು, ಆರ್ಥಿಕವಾಗಿ ದುರ್ಬಲವಾದ ಕುಟುಂಬಗಳಿಗೆ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಸಹಕಾರಿಯಾಗಿದೆ.
ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಚಿಕಿತ್ಸಾ ಪರಿಣತಿಯ ಜೊತೆಗೆ ಸ್ಪಷ್ಟತೆ, ಪಾರದರ್ಶಕತೆ ಹಾಗೂ ರೋಗಿಗಳ ಸಾಕ್ಷರತೆಗೆ ಎ.ಆರ್.ಸಿ. ಕ್ಯಾನ್ಸರ್ ಹಾಸ್ಪಿಟಲ್ ಒತ್ತು ನೀಡಲಿದೆ. ಇದರಿಂದಾಗಿ, ಬಾಧಿತರು ಹಾಗೂ ಕುಟುಂಬ ಸದಸ್ಯರಿಗೆ ಚಿಕಿತ್ಸೆಯ ಆಯ್ಕೆಗಳು, ಪ್ರಕ್ರಿಯೆಗಳು ಹಾಗೂ ಫಲಿತಾಂಶಗಳ ಬಗ್ಗೆ ಸ್ಪಷ್ಟವಾಗಿ ಮನವರಿಕೆಯಾಗಲಿದೆ.
ಚಿಕಿತ್ಸೆಯ ಲಭ್ಯತೆ, ಹೊರೆಯಾಗದ ದರ ಹಾಗೂ ಜಾಗತಿಕ ಮಟ್ಟದ ಚಿಕಿತ್ಸಾ ಶಿಷ್ಟಾಚಾರಗಳಿಗೆ ಗಮನ ಕೇಂದ್ರೀಕರಿಸುವ ಮೂಲಕ ಕ್ಸಾನ್ಸರ್ ಚಿಕಿತ್ಸೆಗೆ ಹೊಸ ವ್ಯಾಖ್ಯಾನ ನೀಡುವುದು ಹಾಗೂ ಸಮಾಜದ ಎಲ್ಲ ವರ್ಗಗಳಿಗೆ ಸೇರಿದ ರೋಗಿಗಳ ವಿಶ್ವಾಸಾರ್ಹ ಆಸ್ಪತ್ರೆಯಾಗುವುದು ಏರಿಯನ್ ರೇಡಿಯೋಥೆರಪಿ ಮತ್ತು ಕ್ಯಾನ್ಸರ್ ಕೇರ್ ನ ಗುರಿಯಾಗಿದೆ.
ಏರಿಯನ್ ರೇಡಿಯೋಥೆರಪಿ & ಆಂಕಾಲಜಿ ಸೆಂಟರ್ ಬಗ್ಗೆ: ಏರಿಯನ್ ರೇಡಿಯೋಥೆರಪಿ & ಆಂಕಾಲಜಿ ಸೆಂಟರ್ (ಎ.ಆರ್.ಸಿ. ಕ್ಯಾನ್ಸರ್ ಹಾಸ್ಪಿಟಲ್), ರೋಗಿಗಳಿಗೆ ಆಧುನಿಕ ಕ್ಯಾನ್ಸರ್ ಚಿಕಿತ್ಸೆಯನ್ನು ಲಭ್ಯವಾಗಿಸಲು ಬದ್ಧವಾದ ವಿಶೇಷ ಕ್ಯಾನ್ಸರ್ ಶುಶ್ರೂಷಾ ಸೌಲಭ್ಯಗಳಿರುವ ಆಸ್ಪತ್ರೆಯಾಗಿದೆ. ಆಧುನಿಕ ತಂತ್ರಜ್ಞಾನ, ಅನುಭವಿ ವೈದ್ಯಕೀಯ ವೃತ್ತಿಪರರು ಹಾಗೂ ಕಾಳಜಿಯಿಂದ ಕೂಡಿದ ಆರೈಕೆಯ ಮೂಲಕ ಪರಿಣಾಮಕಾರಿ ಶುಶ್ರೂಷೆ ಲಭ್ಯವಾಗಿಸಲು ಗಮನ ಕೇಂದ್ರೀಕರಿಸಲಿದೆ. ಹೊರೆಯಾಗದ ದರದಲ್ಲಿ ಉತ್ಕಷ್ಟ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ಒದಗಿಸಲು ಒತ್ತು ನೀಡಲಿದೆ.
ಬಡವರು, ಮಧ್ಯಮ ವರ್ಗದವರಿಗೆ ಸೇವಾಸೌಲಭ್ಯ ಖಾಸಗಿ ಕ್ಯಾನ್ಸರ್ ಆಸ್ಪತ್ರೆಗಳ ಗುರಿಯಾಗಲಿ: ಟಿ.ಬಿ.ಜಯಚಂದ್ರ



