ಅಮರಾವತಿ: ಆಂಧ್ರಪ್ರದೇಶವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಅಧಿಕಾರ ಹಿಡಿಯುವತ್ತ ಬಹುಮತ ಗಳಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕಿದೆ.
ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಆಡಳಿತ ನಡೆಸುವ ನಿಟ್ಟಿನಲ್ಲಿ ಅಗತ್ಯ ಸ್ಥಾನಗಳನ್ನು ಗಳಿಸುವತ್ತ ಮುನ್ನಡೆ ಸಾಧಿಸುತ್ತಿದೆ.
ಬೆಳಿಗ್ಗೆ 10ಗಂಟೆ ವೇಳೆಗೆ ಲಭ್ಯವಾದ ಫಲಿತಾಂಶದ ಪ್ರಕಾರ ಅಗತ್ಯವಿರುವ ಸ್ಥಾನಗಳಷ್ಟು ಮುನ್ನಡೆ ಸಾಧಿಸಿದೆ.ಮತ ಎಣಿಕೆಯಲ್ಲಿ ಆರಂಭಿಕ ಹಂತದಲ್ಲಿ ಆಡಳಿತಾರೂಢ ವೈಎಸ್ಆರ್ಸಿಪಿಗೆ ಹಿನ್ನಡೆಯುಂಟಾಗಿದೆ.ಕಾಂಗ್ರೆಸ್ ಪಕ್ಷ ಕೇವಲ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಭಾರೀ ಹಿನ್ನಡೆಯಲ್ಲಿದೆ.
ಬೆಳಗ್ಗೆ 10 ಗಂಟೆಯ ಹೊತ್ತಿಗೆ ಆಂಧ್ರಪ್ರದೇಶದಲ್ಲಿ ಟಿಡಿಪಿ 123 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ 22 ಸ್ಥಾನಗಳಲ್ಲಿ ಮುನ್ನಡೆಯೊಂದಿಗೆ ಹಿಂದೆ ಬಿದ್ದಿದೆ.