ಮುಂಬೈ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವಿರುದ್ಧ ಇದೇ ನ. ೧೪ರಿಂದ ಆರಂಭವಾಗುವ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಕೆಲಕಾಲ ತಂಡದಿAದ ದೂರವಿದ್ದ ವಿಕೆಟ್ ಕೀಪರ್-ಕಂ-ಬ್ಯಾಟ್ಸ್ ಮನ್ ರಿಷಬ್ ಪಂತ್ ಅವರಿಗೆ ತಂಡದಲ್ಲಿ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಅವರಿಗೆ ತಂಡದ ಉಪ ನಾಯಕನ ಪಟ್ಟವನ್ನು ನೀಡಲಾಗಿದೆ.
ಗಾಯದಿಂದ ಚೇತರಿಸಿಕೊಂಡಿರುವ ಪಂತ್ ತಮ್ಮ ಮುಂಗಾಲಿನ ಗಾಯದ ಸಮಸ್ಯೆಯಿಂದಾಗಿ ಇತ್ತೀಚೆಗೆ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದ ರಿಷಬ್ ದೂರ ಉಳಿಯಬೇಕಾಗಿತ್ತು. ಇಂಗ್ಲೆAಡ್ ನಲ್ಲಿ ನಡೆದಿದ್ದ ಭಾರತ – ಇಂಗ್ಲೆAಡ್ ನಡುವಿನ ಟೆಸ್ಟ್ ಸರಣಿಯ ವೇಳೆ ಅವರು ಗಾಯಗೊಂಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪಂಥ್ ಅಲಭ್ಯವಾಗಿದ್ದರಿAದ ಅವರ ಜಾಗಕ್ಕೆ ಯುವ ಆಟಗಾರ ಧ್ರುವ್ ಜುರೇಲ್ ಅವರನ್ನು ನೇಮಿಸಿಕೊಳ್ಳಲಾಗಿತ್ತು. ಧ್ರುವ್ ಕೂಡ ತಮ್ಮ ಬ್ಯಾಟಿಂಗ್ ನಲ್ಲಿ ಹಾಗೂ
ವಿಕೆಟ್ ಕೀಪಿಂಗ್ ನಲ್ಲಿ ಮಿಂಚಿ ತಮ್ಮ ಆಯ್ಕೆಯನ್ನು ಸಾರ್ಥಕಗೊಳಿಸಿದರು.
ಆದರೆ, ಈಗ ಪಂತ್ ಅವರ ರೀ- ಎಂಟ್ರಿಯಿAದಾಗಿ ಅವರು ಆಡುವ ೧೧ ಮಂದಿ ಆಟಗಾರರಿAದ ಹೊರಗುಳಿಯಬೇಕಾಗುತ್ತದೆ. ಅಸಲಿಗೆ, ಪಂತ್ ಅವರು ತಂಡದಲ್ಲಿದ್ದ ಎನ್. ಜಗದೀಶನ್ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಎ ತಂಡಗಳ ಪಂದ್ಯದಲ್ಲೇ ಫಿಟ್ನೆಸ್ ಸಾಬೀತು: ರಿಷಬ್ ಅವರು ಬೆಂಗಳೂರಿನಲ್ಲಿ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರದ ಮೈದಾನದಲ್ಲಿ ನಡೆದಿದ್ದ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ತಂಡದ ನಡುವಿನ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಅದರಲ್ಲಿ ಭಾರತ ಎ ತಂಡದ ೨ನೇ ಇನಿಂಗ್ಸ್ ನಲ್ಲಿ ೯೦ ರನ್ ಸಿಡಿಸಿದ್ದ ಅವರು ಭಾರತ ತಂಡವು ದಕ್ಷಿಣ ಆಫ್ರಿಕಾ ಎ ತಂಡ ನೀಡಿದ್ದ ೨೭೫ ರನ್ ಗಳ ಗುರಿಯನ್ನು ಸುಲಭವಾಗಿ ಮೆಟ್ಟಲು ಸಹಾಯ ಮಾಡಿದ್ದರು. ಆಗಲೇ ಅವರು ಟೀಂ ಇಂಡಿಯಾಕ್ಕೆ ರೀ-ಎಂಟ್ರಿ
ಪಡೆಯುವುದು ಪಕ್ಕಾ ಆಗಿತ್ತು.
ಶಮಿಗೆ ಮತ್ತೆ ನಿರಾಸೆ, ಪ್ರಸಿದ್ಧ್ ಕೃಷ್ಣ ಕೂಡ ಡ್ರಾಪ್: ವಿಪರ್ಯಾಸವೆಂದರೆ, ವೇಗಿ ಮೊಹಮ್ಮದ್ ಶಮಿ ಅವರಿಗೆ ಮತ್ತೊಮ್ಮೆ ಕೊಕ್ ನೀಡಲಾಗಿದೆ. ದ. ಆಫ್ರಿಕಾ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡ ಶುಭ್ ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪಿçÃತ್ ಬುಮ್ರಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.



