ಕೇಸರಿ ನಂದನ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನವನೀತ ಲಕ್ಷ್ಮೀ ಅವರು ನಿರ್ಮಿಸಿರುವ ಹಾಗೂ ಕೆ.ಆರ್ ಸುರೇಶ್ ನಿರ್ದೇಶನದ ” ಚಿತ್ರಲಹರಿ” ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಟೀಸರ್ ಅನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಅವರು ಹಾಗೂ ಹಾಡುಗಳನ್ನು ಹಿರಿಯ ನಿರ್ದೇಶಕ ಪುರುಷೋತ್ತಮ್ ಬಿಡುಗಡೆ ಮಾಡಿದರು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು. ನಿರ್ದೇಶಕರು ಸಂಭಾಷಣೆ ಇಲ್ಲದೆ ಟೀಸರ್ ಸಿದ್ದ
ಮಾಡಿದ್ದಾರೆ. ಇದು ಬಹಳ ನನಗೆ ಬಹಳ ಹಿಡಿಸಿತು. ಚಿತ್ರ ಅದ್ದೂರಿ ಯಶಸ್ಸು ಕಾಣಲಿ ಎಂದು ಹಾರೈಸಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಅವರು, ಸರ್ಕಾರ ಈ ವರ್ಷದಿಂದ ಚಿತ್ರಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ನಿಲ್ಲಿಸುವ ಯೋಚನೆಯಲ್ಲಿದೆ. ಹಾಗಾದರೆ ಕನ್ನಡ ಚಿತ್ರಗಳಿಗೆ ಬಹಳ ತೊಂದರೆಯಾಗುತ್ತದೆ.
ಈ ಕುರಿತು ಸದ್ಯದಲ್ಲೇ ಚಿತ್ರರಂಗದ ಗಣ್ಯರ ಜೊತೆಗೂಡಿ ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದರು. ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ ಹಿರಿಯ ನಿರ್ದೇಶಕ ಪುರುಷೋತ್ತಮ್, ನಾನು ಈ ಚಿತ್ರದಲ್ಲಿ ಅಭಿನಯಿಸಿರುವುದಾಗಿ ಹೇಳಿದರು. “ಚಿತ್ರಲಹರಿ” ಎರಡು ಕಥೆಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಆದರೆ ಕ್ಲೈಮ್ಯಾಕ್ಸ್ ಒಂದೇ ಆಗಿರುತ್ತದೆ. ಕರೋನ ಸಮಯದಲ್ಲೇ ಸಿದ್ದವಾದ ಕಥೆಯಿದು. ಆದರೆ ಕಳೆದವರ್ಷ ಚಿತ್ರೀಕರಣ ಆರಂಭವಾಯಿತು. ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸತೀಶ್ ಬಾಬು ಅವರು ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಅದರೆ ದುರದೃಷ್ಟವಶಾತ್ ಚಿತ್ರ ಬಿಡುಗಡೆ ಹೊತ್ತಿಗೆ ನಮ್ಮೊಂದಿಗೆ ಅವರಿಲ್ಲ.
ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಎಂದರು ನಿರ್ದೇಶಕ ಕೆ.ಆರ್.ಸುರೇಶ್. ನಮ್ಮ ಕೇಸರಿ ನಂದನ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಮೊದಲ ಚಿತ್ರ”ವಿಕ್ಕಿ”ಗೆ ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ. ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು ನಿರ್ಮಾಪಕಿ ನವನೀತ ಲಕ್ಷ್ಮೀ. ವರುಣ್ ದೇವಯ್ಯ ಹಾಗೂ ಶ್ರೀಕಾಂತ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿಯರಾಗಿ ಗಾನ್ವಿ ಹಾಗೂ ಹರ್ಷಿತ ಅಭಿನಯಿಸಿದ್ದಾರೆ.ಸೂರ್ಯತೇಜ, ಶ್ರೀನಾಥ್, ಪ್ರದೀಪ್, ಚಂದ್ರು,ರAಗ, ಸತೀಶ್ ಗೌಡ, ತೇಜಸ್ವಿನಿ, ಪದ್ಮ, ಯುವಶ್ರೀ, ಗಾಯತ್ರಿ, ರಾಜಶೇಖರ ಮುಂತಾದವರು ತಾರಾ ಬಳಗದಲ್ಲಿದ್ದಾರೆ.



