‘ಟೆಡ್ಡಿ ಬೇರ್’ ಚಿತ್ರದ ಪ್ರೊಮೋ, ಟ್ರೇಲರ್ ಹಾಗೂ ಕ್ಲೈಮಾಕ್ಸ್ದಲ್ಲಿ ಬರುವ ಗೀತೆ ಅನಾವರಣ ಕಾರ್ಯಕ್ರಮವು ಕಿಕ್ಕಿರಿದ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಆದ್ಯಲಕ್ಷೀ ಪ್ರೊಡಕ್ಷನ್ ಅಡಿಯಲ್ಲಿ ಜ್ಯೋತಿತಾರಕೇಶ್, ಭರತ್ ಮತ್ತು ನವೀನ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
ಟಾಲಿವುಡ್ನ ಪುರಿಜಗನ್ನಾಥ್ ಸಹಾಯಕರಾಗಿದ್ದ ಲೋಕೇಶ್.ಬಿ ಸಿನಿಮಾಕ್ಕೆ ಬರವಣಿಗೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಇದು ನನ್ನ ಮೊದಲ ಸಿನಿಮಾ. ನಂತರ ‘ಸುಡೂಕು’ ವಿಧುರ’ ‘ವಿಕ್ರಮಾರ್ಕ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದೇನೆ.
ಇದೆಲ್ಲವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀರ್ಷಿಕೆ ಮೇಲೆ ಇಲ್ಲಿಯವರೆಗೂ ಯಾರೂ ಚಿತ್ರ ಮಾಡಿರುವುದಿಲ್ಲ. ಹಾಲಿವುಡ್ದಲ್ಲಿ ಚಿತ್ರವೊಂದು ಬರುತ್ತಿದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಸಿನಿಮಾದಲ್ಲಿ ಮಧ್ಯಮ ಭಾಗದ ಕಥೆಯನ್ನು ಹೇಳಲಾಗುತ್ತಿದೆ. ಇನ್ನು ಪ್ರಿಕ್ವೆಲ್, ಸೀಕ್ವಲ್ ಬರಬೇಕಾಗಿದೆ. ಸಂಶೋಧನೆ ನಡೆಸಿ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಟೈಟಲ್ ಹೇಗೆ ಬಂತು.
ಆತ್ಮ ಯಾವ ರೀತಿ ಗೊಂಬೆಯೊಳಗೆ ಸೇರಿಕೊಳ್ಳುತ್ತದೆ. ಇಂತಹ ಕುತೂಹಲಕಾರಿ ಅಂಶಗಳನ್ನು ತಿಳಿಯಲು ತಾವುಗಳು ಚಿತ್ರಮಂದಿರಕ್ಕೆ ಬರಬೇಕು. ‘ಕಾಲ ಭೈರವೇಶ್ವರ’ ಸ್ವಾಮಿಯ ಹಾಡು ಮಾತ್ರ ಇರುತ್ತದೆ. ಬೆಂಗಳೂರು, ಮಂಗಳೂರು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾಧ್ಯಮದ ಸಹಕಾರಬೇಕೆಂದು ಕೋರಿದರು.