ಬೇಲೂರು: ವಿಶ್ವ ವಿಖ್ಯಾತ ಬೇಲೂರಿನ 23ನೇ ವಾರ್ಡಿನ ಯುವಕ. ಡೆಂಗಿ ಜ್ವರದಿಂದ ಸಾವನಪ್ಪಿರುವ ಘಟನೆ ನಡೆದಿದೆ. ವಿಪರೀತ ಜ್ವರದಿಂದ ಬಳಲುತ್ತಿದ್ದ. ತೀವ್ರ ತಲೆನೋವು ಎಂದು ಎರಡು ದಿನದಿಂದ. ಬಳುತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿರುವ ಸಂದರ್ಭದಲ್ಲಿಪರಿಸ್ಥಿತಿ ಕೈಮೀರುತ್ತಿದ್ದಂತೆ. ವೈದ್ಯರ ಸಲಹೆ ಮೇರೆಗೆ.ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ. ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
ಡೆಂಗಿ ಜ್ವರದಿಂದ ಸಾವು ಸುದ್ದಿ ತಿಳಿದ ತಕ್ಷಣ. ಮೃತ ಯುವಕನ ಮನೆಗೆ ಬೇಲೂರು ತಾಲೂಕು ದಂಡಾಧಿಕಾರಿ. ಎಂ ಮಮತಾ. ಭೇಟಿ ನೀಡಿ ಸಾಂತ್ವನ ಹೇಳಿದರು.ನಂತರ ವಾರ್ಡ್ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿ. ಚರಂಡಿಗಳಲ್ಲಿ ಕಸ ಕಡ್ಡಿ ನೋಡಿ. ಸ್ಥಳದಲ್ಲಿ ಇದ್ದ ಪುರಸಭೆ ಮತ್ತು ಆರೋಗ್ಯ ಇಲಾಖೆಯಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಅ ಸ್ವಚ್ಛತೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಕ್ಷಣ ಇಡೀ ವಾರ್ಡ ಸ್ವಚ್ಛಗೊಳಿಸಬೇಕು ಮತ್ತು. ಮೂಲಭೂತ ಸೌಕರ್ಯ ಅಗತ್ಯ ವಾದಕ್ರಮ. ಕೈಗೊಳ್ಳಬೇಕು. ಮುಂದಿನ ವಾರ ಭೇಟಿ ನೀಡುತ್ತೇನೆ ಎಂದರು.ಆ ಸಮಯದಲ್ಲಿ ಯಾವುದೇ ಸಮಸ್ಯೆ ಇರಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಮತ್ತು ಸ್ಥಳೀಯ ನಿವಾಸಿಗಳಿಗೆ ತಮ್ಮ ಮನೆಯ ಅಕ್ಕಪಕ್ಕ ಸ್ವಚ್ಛತೆ ಗಮನಹರಿಸಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ. ಪುರಸಭೆಯ ಪೌರಕಾರ್ಮಿಕರ ಜೊತೆ ನೀವು ಸಹಕರಿಸಿ.
ಕಸವನ್ನು ಎಲ್ಲೆಂದರೆ ಬಿಸಾಡದೇ.ಹಸಿ ಕಸ ಒಣ ಕಸ ಬೇರ್ಪಡಿಸಿ ಪುರಸಭೆಯ ಕಸದ ವಾಹನಕ್ಕೆ. ನೀಡಿ ಉತ್ತಮ ಆರೋಗ್ಯಕರ ಬೇಲೂರು ನಿರ್ಮಾಣಕ್ಕೆ ನೀವು ಸಹ ಸಹಕಾರಿ ಯಾಗಬೇಕುಎಂದರುಈ ಸಂದರ್ಭದಲ್ಲಿ. ಬೇಲೂರು ಪುರಸಭೆ ಮುಖ್ಯ ಅಧಿಕಾರಿ. ಎಂ ಇಂದು. ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ವಿಜಯ್. ತಾಲೂಕು ಶಿಕ್ಷಣ ಆರೋಗ್ಯ ಅಧಿಕಾರಿ ಉಷಾ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕುಮಾರ್. ಮತ್ತು ಪುರಸಭೆಯ ಆರೋಗ್ಯ ಅಧಿಕಾರಿ ಲೋಹಿತ್. ಸ್ಥಳೀಯ ಪುರಸಭೆ ಸದಸ್ಯ ಅಕ್ರಂಪಾಶ. ಸ್ಥಳೀಯ ನಿವಾಸಿಗಳಾದ ಮುಜೀಬ್. ಇರ್ಫಾನ್. ಗುಲ್ಜಾರ್ ಶಾರುಖ್. ಮುಖರಂ ನಯಾಜ್ . ಅಕ್ರಂಪಾಶ.ಇನ್ನು ಮುಂತಾದವರು ಹಾಜರಿದ್ದರು.