ಬೇಲೂರು: ಲೋಕಸಭಾ ಚುನಾವಣೆ ಯಲ್ಲಿ ತನ್ನ ಮತ ಚಲಾಯಿಸುವ ಮೂಲಕ ತಹಸೀಲ್ದಾರ್ ಎಂ.ಮಮತಾ ತಮ್ಮ ಜವಬ್ದಾರಿ ನಿಭಾಯಿಸಿದರು.
ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಹೊರ ಜಿಲ್ಲೆಗಳಿಂದ ಬಂದು ಕರ್ತವ್ಯ ನಿರ್ವಯಿಸುತ್ತಿರುವ ಸರ್ಕಾರಿ ನೌಕರರಿಗೆ, ಪಟ್ಟಣದ ವೈ.ಡಿ.ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಲಾಗಿತ್ತು.
ಬೆಳಗ್ಗೆ 9 ಗಂಟೆಗ ಸಹಾಯಕ ಚುನಾವಣಾ ಅಧಿಕಾರಿಯಾದ ಎಂ.ಎನ್ ಮಂಜುನಾಥ್ ರವರೊಂದಿಗೆ ಆಗಮಿಸಿದ ತಹಸಿಲ್ದಾರ್ ಎಂ.ಮಮತ ಮತಗಟ್ಟೆ ಯ ರೂಪು ರೇಷೆಗಳನ್ನು ಪರಿಶೀಲಿಸಿದರು ನಂತರ 9.30ಕ್ಕೆ ತಾವೇ ಮೊದಲಿಗರಾಗಿ ಬಂದು ಬ್ಯಾಲೆಟ್ ಪೇಪರ್ ನಲ್ಲಿ ತನ್ನ ಹಕ್ಕು ಚಲಾಯಿಸಿ ಮತಪೆಟ್ಟಿಗೆಗೆ ಹಾಕುವ ಮೂಲಕ ಇತರರಿಗೆ ಮಾದರಿಯಾದರು.
ನಂತರ ಮತನಾಡಿದ ಅವರು ಮತದಾನ ಪ್ರತಿಯೋಬ್ಬ ಪ್ರಜೆಯ ಹಕ್ಕು ತಪ್ಪದೆ ಎಲ್ಲರು ತನ್ನ ಜವಬ್ದಾರಿ ಮರೆಯದೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು, ಸರ್ಕಾರ ಈಗಾಗಲೆ ಒಬ್ಬರೂ ಸಹ ಮತದಾನದಿಂದ ಹೊರಗುಳಿಯದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಮೊದಲನೆಯದಾಗಿ ಎಂಬತೈದು ವರ್ಷ ವಯಸ್ಸಾದ ವೃದ್ದರಿಗೆ ಹಾಗೂ ವಿಶೇಷ ಚೇತನರಿಗೆ ಅವರ ಗ್ರಾಮಗಳಿಗೆ ನಮ್ಮ ಟೀಂ ತೆರಳಿ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದು ಇಂದು ಸರ್ಕಾರಿ ನೌಕರರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಂತೆಯೇ ಏಪ್ರೀಲ್ 26ರಂದು ನೆಡೆಯುವ ಚುನಾವಣೆಯಲ್ಲೂ ಸಹ ತಾಲ್ಲೂಕಿನ ಎಲ್ಲಾ ಮತದಾರರೂ ಸಹ ಯಾವುದೇ ಅಮಿಷಗಳಿಗೆ ಬಲಿಯಾಗದೆ ತಮ್ಮ ಹಕ್ಕು ಚಲಾಯಿಸುವಂತೆ ತಿಳಿಸಿದರು.ಮತಗಟ್ಟೆಯ ಮತದಾನ ಪ್ರಕ್ರಿಯೆಯಲ್ಲಿ ಪೊಸ್ಟಲ್ ಅಧಿಕಾರಿ ಎಸ್. ಗಣೇಶ್, ಪತ್ರಾಂಕಿತ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಕಾರ್ಯನಿರ್ವಯಿಸಿದರೆ ಎ.ಆರ್.ಓ, ಎ.ಪಿ.ಆರ್. ಓ ಗಳು ಹಾಜರಿದ್ದರು.