ಚಳ್ಳಕೆರೆ: ಚಳ್ಳಕೆರೆ ತಾಲೂಕಿನಲ್ಲಿ ಪಲ್ಸ್ ಪೋಲಿಯ ಕಾರ್ಯಕ್ರಮ ವನ್ನು ಮಾರ್ಚ್ 3 ರಿಂದ 6ರ ತನಕ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಸಾರ್ವಜನಿಕ ರಲ್ಲಿ ಮನವಿ ಮಾಡಿದರು.
ನಗರದ ತಾಲೂಕು ಕಚೇರಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗ ಳೊಂದಿಗೆ ಆಯೋಜಿಸಲಾಗಿದ್ದ. ಪಲ್ಸ್ ಪೊಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿ. ಪಲ್ಸ್ ಪೊಲಿಯೋ ಕಾರ್ಯಕ್ರಮ ಯಶಸ್ವಿಯಾಗಲು ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು ಎಂದು ಹೇಳಿದರು.
ಆರೋಗ್ಯ ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ.0-5ವರ್ಷದ ಮಕ್ಕಳಿಗೆ ಪಲ್ಸ್ ಪೊಲಿಯೋ ಡ್ರಾಪ್ ಹಾಕಲಾಗುವುದು. ತಾಲೂಕಿನಲ್ಲಿ ಸುಮಾರು 233 ಬೂತ್ ಗಳನ್ನು ಪಲ್ಸ್ ಪೋಲಿಯೋ ಹಾಕಲು ಸ್ಥಾಪಿಸ ಲಾಗಿದೆ. ದೇಶವು ಪೊಲಿಯೋ ಮುಕ್ತವಾಗಿದ್ದ ರಿಂದ ಕಳೆದ ವರ್ಷ ಪಲ್ಸ್ ಪೊಲಿಯೋ ಕಾರ್ಯಕ್ರಮ ನಡೆಸಿರುವುದಿಲ್ಲ.
ಆದರೆ ಅಕ್ಕಪಕ್ಕದ ದೇಶಗಳಲ್ಲಿ ಹಲೋ ಪೊಲಿಯೋ ಪ್ರಕರಣಗಳು ದಾಖಲಾಗಿದ್ದರಿಂದ. ವಿಶ್ವ ಆರೋಗ್ಯ ಸಂಸ್ಥೆ ಪಲ್ಸ್ ಪೊಲಿಯೋ ಕಾರ್ಯಕ್ರಮವನ್ನು ಪುನರ್ ಪ್ರಾರಂಭಿಸಲು ಹೇಳಿದ್ದರಿಂದ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ.ಮಾರ್ಚ್ 3 ರಂದು ಶೇಕಡ 95ರಷ್ಟು ಗುರಿ ಸಾಧಿಸುವ ಉದ್ದೇಶವಿದೆ. ಒಟ್ಟು ಚಳ್ಳಕೆರೆ ತಾಲೂಕಲ್ಲಿ 28,826 ಮಕ್ಕಳನ್ನು ಗುರುತಿಸಿ. ಪೊಲಿಯೋ ಗ್ರಾಫ್ ಹಾಕಲಾ ಗುವುದು. ಮಾರ್ಚ್ 4ರಿಂದ 5ರ ತನಕ ಮನೆ ಮನೆಗೆ ತೆರಳಿ ಮಕ್ಕಳಿಗೆ ಪೊಲಿಯೋ ಹನಿ ಹಾಕಲಾಗುವುದು.
ತಾಲೂಕಿನ ಎಲ್ಲಾ ಇಲಾಖೆಯ ವಾಹನಗಳನ್ನು ಕಾರ್ಯಕ್ರಮಕ್ಕೆ ಕೊಡಬೇಕೆಂದು. ಸಭೆಯಲ್ಲಿ ಮನವಿ ಮಾಡಿದರು. ನಗರದ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್, ರೈಲ್ವೆ ಟೇಷನ್, ಎಲ್ಲಾ ಕಡೆ 470 ಸಿಬ್ಬಂದಿಗ ಳನ್ನು ನೇಮಿಸಲಾಗಿದೆ. ಇವರ ಜೊತೆ 51 ಮೇಲ್ವಿಚಾರ ಕರನ್ನು ನೇಮಿಸಲಾಗಿದೆ ಎಂದರು. ಆದ್ದರಿಂದ ಚಳ್ಳಕೆರೆ ತಾಲೂಕಿನ ಮಹಾಜನತೆ ತಪ್ಪದೇ ತಮ್ಮ ಮಕ್ಕಳಿಗೆ ಪೊಲಿಯೋ ಹನಿ ಹಾಕಿಸಿ ಎಂದು ಮನವಿ ಮಾಡಿದರು.
ಈ ಸಭೆಯಲ್ಲಿ ಡಾ.ಗೀತಾ, ಮಹಿಳಾ ಮತ್ತುಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಹರಿ ಪ್ರಸಾದ್, ನಗರಸಭೆ ಅಧಿಕಾರಿಗಳಾದ ಗಣೇಶ್, ಸುನಿಲ್, ಮಂಜುನಾಥ್ಪ್ರ, ಪ್ರಭುದೇವ, ಷರಿಫ್ ಇತರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.