ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರನ್ನು ಬೆಂಬಲಿಸಿ ಕರೆದಿದ್ದ 25ಕ್ಕೂ ಹೆಚ್ಚಿನ ಬೆಂಗಳೂರು ಜಿಲ್ಲಾ ವ್ಯಾಪ್ತಿಯ ಸಹಕಾರ ಬ್ಯಾಂಕುಗಳ ಮತ್ತು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಳ ನಿರ್ದೇಶಕರುಗಳ ಸಭೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ ಯಾಚಿಸಿದರು.
ಈ ಸಭೆಯಲ್ಲಿ ಬಸವನಗುಡಿ ಶಾಸಕ ಎಲ್.ಎ.ರವಿ ಸುಬ್ರಮಣ್ಯ, ಸಹಕಾರ ಬ್ಯಾಂಕುಗಳ ಮತ್ತು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಳ ಅಧ್ಯಕ್ಷರುಗಳಾದ ಡಾ. ಎಂ.ಆರ್. ವೆಂಕಟೇಶ್, ಡಾ. ಬಿ.ಎಂ. ಉಮೇಶ್ ಕುಮಾರ್, ಎಂ.ರಾಜು, ಮಲ್ಲಾರಿ ಗೌಡ, ಡಾ.ಗಂಗಹನುಮೇಗೌಡ ಮತ್ತಿತರರು ಇದ್ದರು.