ತೇಜಸ್ವಿನಿ ಅಂದು ಬೆಂಗಳೂರಿನಲ್ಲಿ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತದೆ ಪತ್ರಿಕೆ ಜೊತೆ ಮಾತನಾಡಿದರು.ಬಿಜೆಪಿ ಯಶವಂತಪುರ ಘಟಕದ ಮಹಿಳಾ ಮೋರ್ಚಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ತೇಜಸ್ವಿನಿ ಇತ್ತ ಚಲನಚಿತ್ರ ಕ್ಷೇತ್ರದಲ್ಲಿ ಮತ್ತು ಕಿರುತೆರೆಯಲ್ಲಿ ತಮ್ಮದೇ ಛಾಪು ಒತ್ತಿದವರು.
ನರ್ಸ್ ಉಪನ್ಯಾಸಕಿ ವಿಲನ್ ಪೊಲೀಸ್ ಅಧಿಕಾರಿ ಹೀಗೆ ವಿವಿಧ ಪಾತ್ರಗಳಲ್ಲಿ ಚೂರಿಕಟ್ಟೆ ಯುವರತ್ನ, ರಾಜಣ್ಣನ ಮಗ, ಭಜರಂಗಿ 2, ಹೊಯ್ಸಳ, ರಾಘವೇಂದ್ರ ಸ್ಟೋರ್ಸ್, ಮ್ಯಾಕ್ಸ್, ರಾಧೇಯ ಮುಂತಾದ 25ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.ಸಾಮಾಜಿಕ ಕಳಕಳಿ ಸಮಾಜ ಸೇವೆಯ ಉದ್ದೇಶ ಇದರಲ್ಲಿ ಯಾವುದೇ ಆಮಿಷಕ್ಕೆ ಆಸ್ಪದ ಇಲ್ಲ ಎನ್ನುವ ತೇಜಸ್ವಿನಿ ಕೌಶಲ್ಯ ತರಬೇತಿ ಸ್ಕೀಮ್ ಅಡಿ ಯಲ್ಲಿ 300ಕ್ಕೂ ಹೆಚ್ಚು ಯುವತಿಯರಿಗೆ ಉಚಿತವಾಗಿ ತರಬೇತಿ ನೀಡಿ ಅವರಲ್ಲಿ 200 ಯುವತಿಯರು ಆಸ್ಪತ್ರೆ ಹಾಗೂ ಕ್ಲಿನಿಕ್ ಗಳಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಾ ಕೈತುಂಬಾ ಸಂಬಳ ಪಡೆಯುತ್ತಿದ್ದಾರೆ ಎನ್ನುವುದು ನನಗೆ ಆತ್ಮತೃಪ್ತಿಯ ವಿಷಯ ಎನ್ನುತ್ತಾರೆ.
ಕೋವಿಡ್ ಸಮಯದಲ್ಲಿ ಸಾವಿರ ಜನಕ್ಕೆ ಊಟ, ಮಕ್ಕಳಿಗೆ ಉಚಿತ ಟ್ಯೂಷನ್, ಮುಂತಾದ ಕೆಲಸಗಳು ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿದೆ.ಎಂಕಾಂ ಪದವಿ ಧರೆಯಾದ ತೇಜಸ್ವಿನಿಗೆ ಬಣ್ಣದ ಲೋಕದ ಸೆಳೆತ. ಹಾಗಾಗಿ ಸಮಾಜ ಸೇವೆಯೊಂದಿಗೆ ಚಲನಚಿತ್ರ ಮತ್ತು ಧಾರವಾಹಿಗಳಲ್ಲಿ ಅಭಿನಯ. ಕಳೆದ ಹತ್ತು ವರ್ಷದಲ್ಲಿ ತನ್ನ ಪ್ರತಿಭೆಯಿಂದ ಅಮ್ಮಾ ನಿನಗಾಗಿ,ಜನುಮದ ಜೋಡಿ, ಒಂದೇ ಗೂಡಿನ ಹಕ್ಕಿಗಳು, ಶಾಂತಂಪಾಪಂ, ಸುಬ್ಬಲಕ್ಷ್ಮಿ ಸಂಸಾರ,ಆತ್ಮ ಬಂಧನ, ಮುದ್ದು ಲಕ್ಷ್ಮಿ, ಮನೆಯೇ ಮಂತ್ರಾಲಯ ಮುಂತಾದ ಧಾರವಾಹಿಗಳಲ್ಲಿ ಗೆಳತಿ ಮಗಳು ಸೊಸೆ ಇನ್ಸ್ಪೆಕ್ಟರ್ ವೈದ್ಯೆ ಲಾಯರ್ ಹೀಗೆ ಎಲ್ಲ ಪಾತ್ರಕ್ಕೂ ಸಹಿಯನ್ನುವಂತೆ ನಟಿಸಿದ್ದಾರೆ.
ಪಾತ್ರ ಮಾಡಿದರೆ ಇನ್ನೊಬ್ಬರು ಅದನ್ನು ಅನುಕರಣೆ ಮಾಡುವ ಹಾಗಿರಬೇಕು ಎನ್ನುವ ತೇಜಸ್ವಿನಿಗೆ ಅಧಿಕಾರ ದೊರಕಿದರೆ ಇನ್ನಷ್ಟು ಜನಸೇವೆ ಮಾಡಬಹುದು ಎಂಬ ಹಂಬಲವೂ ಇದೆ. ಸೀರೆ, ಜೀನ್ಸ್ ಗೌನ್, ಮಿಡಿ ಹೀಗೆ ಯಾವುದೇ ದಿರಿಸಿನಲ್ಲೂ ನಟಿಸಿ ಸೈನಿಸಿಕೊಳ್ಳಲು ಸಿದ್ಧ ಎನ್ನುತ್ತಾರೆ.ಬಿಡುವಿನ ವೇಳೆಯಲ್ಲಿ ಮಳೆ ಸುರಿಯುತ್ತಿದ್ದಾಗ ಚಂಪಾಕಲಿ ಎನ್ನುವ ರಸಭರಿತ ಸಿಹಿಯೊಡನೆ ಬಾಳೆಕಾಯಿ ಬಜ್ಜಿ ಮೆಣಸಿನಕಾಯಿ ಬಜ್ಜಿ ತಿನ್ನುತ್ತಾ ಮಡಿಕೇರಿಯಲ್ಲಿ ವಿಹರಿಸಬೇಕು ಎನ್ನುವುದು ಮಹದಾಸೆ.
ಕಲಾಸಿಪಾಳ್ಯ ಮೆಚ್ಚಿನ ಸಿನಿಮಾ ದರ್ಶನ್ ರಕ್ಷಿತಾ ಕಲಾವಿದರು. ದರ್ಶನ್ ಮೈಕಟ್ಟು ಪ್ರದರ್ಶಿಸುವ ದಿರಿಸಿನಲ್ಲಿ ಮಿನಿ ಧರಿಸಿದ ರಕ್ಷಿತಾ ಜೊತೆ ಮಲೆನಾಡ ಮಳೆಯಲ್ಲಿ ಹಾಡಿಗೆ ನರ್ತಿಸುವಭಾಗ ನಿರ್ದೇಶನ ಮಾಡುವ ಬಯಕೆ.ಅರಳು ಹುರಿದಂತೆ ಸ್ಪಷ್ಟ ಮಾತು. ಜೊತೆಗೆ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಭರವಸೆ ತೇಜಸ್ವಿನಿಯ ಪ್ಲಸ್ ಪಾಯಿಂಟ್