![]() |
![]() |
![]() |
![]() |
![]() |
ಬೆಂಗಳೂರು: ಟೆನೆಟ್ ಮೆಡ್‍ಕಾರ್ಪ್ ಪ್ರೈ. ಲಿ. ಮಾಲೀಕತ್ವದ. ಟೆನೆಟ್ ಡಯಾಗ್ನೋಸ್ಟಿಕ್ಸ್ ಎಂಟು ರಾಜ್ಯಗಳಲ್ಲಿ ಮತ್ತು ದೇಶದ 25 ನಗರಗಳಲ್ಲಿ ಈಗಾಗಲೇ ಕಾರ್ಯಾಚರಣೆ ಮಾಡುತ್ತಿದೆ.ಡಯಾಗ್ನೋಸ್ಟಿಕ್ಸ್ ಸೇವೆ ವಿಸ್ತರಣೆಗಾಗಿ ಕರ್ನಾಟಕದಲ್ಲಿ 100 ಕೋಟಿ ರುಪಾಯಿ ಬಂಡವಾಳ ಹೂಡಲು ಮುಂದಾಗಿದೆ. ಈ ಹೂಡಿಕೆಯಿಂದ ಮುಂದಿನ ವರ್ಷದ ವೇಳೆಗೆ ಟೆನೆಟ್ ಡಯಾಗ್ನೋಸ್ಟಿಕ್ಸ್ ಕೇಂದ್ರಗಳ ಸಂಖ್ಯೆ ಕರ್ನಾಟಕದಲ್ಲಿ ಪ್ರಸ್ತುತ 5 ಕೇಂದ್ರಗಳಿಂದ 15ಕ್ಕೆ ಹೆಚ್ಚಾಗಲಿದೆ.
ಬೆಂಗಳೂರಿನಲ್ಲಿ ಜಯನಗರ, ಸದಾಶಿವನಗರ, ಇಂದಿರಾನಗರ, ಮಾರತಹಳ್ಳಿ ಮತ್ತು ವೈಟ್ಫೀಲ್ಡ್ ನಲ್ಲಿ 5 ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಮೈಸೂರು ಮತ್ತು ಮಂಗಳೂರಿನಲ್ಲಿ ಎರಡು ಕೇಂದ್ರಗಳು ಈ ವರ್ಷದ ಅಂತ್ಯದ ವೇಳೆಗೆ ಆರಂಭವಾಗಲಿದೆ. ಟೆನೆಟ್ ಡಯಾಗ್ನೋಸ್ಟಿಕ್ಸ್ ಪ್ರಸ್ತುತವಿರುವ 150 ವೈದ್ಯರು ಮತ್ತು 800 ತಂತ್ರಜ್ಞ ಉದ್ಯೋಗಿಗಳ ಜೊತೆಗೆ ಹೆಚ್ಚುವರಿಯಾಗಿ 1,500 ನುರಿತ ಕೌಶಲ್ಯಯುತ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಇದರಿಂದ ಸಮುದಾಯ ಆರೋಗ್ಯ ಅಗತ್ಯ ಪೂರೈಕೆಗೆ ಒಟ್ಟು 2,500 ನುರಿತ ಸಿಬ್ಬಂದಿ ಸೇವೆಗೆ ಲಭ್ಯ.
ಈ ಸಂದರ್ಭದಲ್ಲಿ ಟೆನೆಟ್ ಡಯಾಗ್ನೋಸ್ಟಿಕ್ಸ್ ನ ಅಧ್ಯಕ್ಷ ಡಿ ಸುರೇಶ್, ಕಾರ್ಯನಿರ್ವಾಹಕ ನಿರ್ದೇಶಕ ದೇವಿನೇನಿ ಶ್ರೀಚರಣ್ ಮಾತನಾಡಿದರು.ಟೆನೆಟ್ ಡಯಾಗ್ನೋಸ್ಟಿಕ್ಸ್ ಬಗ್ಗೆ : ದೇಶದ 8 ರಾಜ್ಯಗಳ 25 ನಗರಗಳಲ್ಲಿನ ರಾಷ್ಟ್ರೀ ಯ ಸಂಸ್ಥೆ. ಡಯಾಗ್ನೋಸ್ಟಿಕ್ಸ್ ಸೇವೆಗೆ ಬೇಕಾದ ಉಪಕರಣಗಳು, ಯಂತ್ರೋಪಕರಣಗಳು ಮತ್ತು ಕಿಟ್ ಗಳನ್ನು ದೇಶದಲ್ಲೇ ತಯಾರಿಸುವ ಗುರಿ ಹೊಂದಿದೆ. ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ `ಮೇಕ್‍ಇನ್ ಇಂಡಿಯಾ’ ಮುನ್ನೋಟದ ಸಾಕಾರಕ್ಕೆ ಪಣತೊಟ್ಟಿದೆ. ವಿಶ್ವದರ್ಜೆಯ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ಅರಸಿ ಬರುವ ವಿದೇಶಿ ಪ್ರವಾಸಿಗರಿಗೆ ಉತ್ತಮ ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸುವುದು ಟೆನೆಟ್ ಡಯಾಗ್ನೋಸ್ಟಿಕ್ ನ ಪ್ರಮುಖ ಆಶಯವಾಗಿದೆ.
![]() |
![]() |
![]() |
![]() |
![]() |
Leave a Review