ಬೆಂಗಳೂರು: ಮೂರನೇ ಶ್ರೇಯಾಂಕದ ಕರ್ನಾಟಕದ ಕೆವಿನ್ ಸುರೇಶ್ ಅವರು ಇಲ್ಲಿನ ಟಾಪ್ಸ್ಪಿನ್ ಕೋರ್ಟ್ನಲ್ಲಿ ನಡೆಯುತ್ತಿರುವ ಟಿ.ಎನ್.ಆರ್. ಸ್ಮಾರಕ ಎಐಟಿಎ ರಾಷ್ಟ್ರೀಯ ಸರಣಿಯ 18 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್ನಲ್ಲಿ 7-6(3), 6-4 ಸೆಟ್ಗಳಿಂದ ಎರಡನೇ ಶ್ರೇಯಾಂಕದ ಡೇವಿಡ್ ಜೇಸನ್ (ಕರ್ನಾಟಕ) ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.
ಶುಕ್ರವಾರ ನಡೆದ ಮತ್ತೊಂದು ಸೆಮಿಫೈನಲ್ನಲ್ಲಿ ಕೇರಳದ ಕರಣ್ ಥಾಪಾ 7-5, 6-3 ರಿಂದ ಕರ್ನಾಟಕದ ಶ್ರೀಕರ್ ಡೋಣಿ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು.ಬಾಲಕಿಯರ ಸಿಂಗಲ್ಸ್ನಲ್ಲಿ ನಾಲ್ಕನೇ ಶ್ರೇಯಾಂಕದ ಕರ್ನಾಟಕದ ಅಮೋದಿನಿ ನಾಯಕ್ 7-5,6-4ರಿಂದ ಅಗ್ರ ಶ್ರೇಯಾಂಕದ ಹರ್ಷಿಣಿ ಎನ್. (ಕರ್ನಾಟಕ) ಅವರಿಗೆ ಆಘಾತ ನೀಡಿ ಫೈನಲ್ಗೆ ಲಗ್ಗೆ ಹಾಕಿದರು.
ಮತ್ತೊಂದು ಸೆಮಿಫೈನಲ್ನಲ್ಲಿ ಕರ್ನಾಟಕದ ಸ್ನಿಗ್ಧಾ ಕಾಂತ 7-6(8), 6-0ರಿಂದ ಕಶ್ವಿ ಸುನಿಲ್ (ಕರ್ನಾಟಕ) ಅವರನ್ನು ಮಣಿಸಿ ಮುನ್ನಡೆದರು.
ಬಾಲಕರ ಡಬಲ್ಸ್ನಲ್ಲಿ ಶ್ರೀಕರ್ ಡೋಣಿ ಮತ್ತು ಕೆವಿನ್ ಸುರೇಶ್ ಜೋಡಿ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಬಾಲಕಿಯರ ಡಬಲ್ಸ್ನಲ್ಲಿ ಮಹಾರಾಷ್ಟ್ರದ ನೈನಿಕಾ ಬೇಂದ್ರಂ ಮತ್ತು ಕೇರಳದ ಹರ್ಷಿಣಿ ಎಚ್. ಜೋಡಿ ಚಾಂಪಿಯನ್ ಆಯಿತು.