This is the title of the web page
This is the title of the web page

ಟೆನಿಸ್‌: ಸಾನಿಯಾ- ಬೆಥನಿ ಜೋಡಿಗೆ ಸೋಲು

ಬುಧಾಬಿ (ಪಿಟಿಐ): ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನಿ ಮ್ಯಾಟೆಕ್‌ ಸ್ಯಾಂಡ್ಸ್‌ ಜೋಡಿ ಅಬುಧಾಬಿ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಎಡವಿತು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ- ಅಮೆರಿಕ ಜೋಡಿ 3-6, 4-6 ರಲ್ಲಿ ಬೆಲ್ಜಿಯಂನ ಕರ್ಸ್ಟನ್ ಫ್ಲಿಪ್ಕೆನ್ಸ್ ಮತ್ತು ಜರ್ಮನಿಯ ಲಾರಾ ಸೀಗ್ಮಂಡ್‌ ಎದುರು ಪರಾಭವಗೊಂಡಿತು.

ಈ ಪಂದ್ಯ ಒಂದು ಗಂಟೆ 13 ನಿಮಿಷ ನಡೆಯಿತು.

ಆರು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ವಿಜೇತೆ ಸಾನಿಯಾ, ಇದೇ 19 ರಂದು ದುಬೈನಲ್ಲಿ ಆರಂಭವಾಗಲಿರುವ ದುಬೈ ಟೆನಿಸ್‌ ಚಾಂಪಿಯನ್‌ಷಿಪ್‌ ಬಳಿಕ ನಿವೃತ್ತಿಯಾಗಲಿದ್ದಾರೆ.

ಕಳೆದ ತಿಂಗಳು ನಡೆದ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಸಾನಿಯಾ ಮತ್ತು ರೋಹನ್‌ ಬೋಪಣ್ಣ ಜೋಡಿ ರನ್ನರ್ಸ್‌ ಅಪ್‌ ಆಗಿತ್ತು. ಫೈನಲ್‌ನಲ್ಲಿ ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ ಮತ್ತು ರಫೇಲ್‌ ಮಟೊಸ್‌ ಎದುರು ಸೋತಿತ್ತು. ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಸಾನಿಯಾ ಅವರ ಕೊನೆಯ ಪಂದ್ಯ ಅದಾಗಿತ್ತು.