ಬೇಲೂರು: ಬೇಲೂರು ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯಲ್ಲಿರುವ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿ ದೇವಾಲಯದಲ್ಲಿ ಕಳೆದ ಎಂಟು ದಿನಗಳಿಂದ 38ನೇ ವರ್ಷದ ದಿಂಡಿ ಮಹೋತ್ಸವ ಹಾಗೂ ವಿಶೇಷ ಜ್ಞಾನೇಶ್ವರಿ ಗಂಥ ಪಾರಾಯಣ ಸಪ್ತಾಹ ಕಾರ್ಯಕ್ರಮವು ಇಂದು ರಾಜಭೀದಿ ಉತ್ಸಹ ಮೂಲಕ ಸಡಗರ ಸಂಭ್ರಮದಿಂದ ಜರುಗಿತು.
38ನೇ ವರ್ಷದ ದಿಂಡಿ ಮಹೋತ್ಸವದ ಮಂಗಳವಾರ ಮುಂಜಾನೆ 5 ಗಂಟೆಯಿಂದ ಕಾಕಡರತಿ ಭಜನೆನಂತರ ಬೆಳಿಗ್ಗೆ 10:00 ಇಂದ ಶ್ರೀ ರುಕ್ಮಿಣಿ ಪಾಂಡುರಂಗಸ್ವಾಮಿಯ ಅದ್ದೂರಿ ಉತ್ಸವವು ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯ ಮೂಲಕ ಶ್ರೀಕನಿಕ ಪರಮೇಶ್ವರಿ ರಸ್ತೆ ಹೊಳೆ ಬೀದಿ ರಸ್ತೆ ದೇವಸ್ಥಾನದ ರಸ್ತೆ ಮೂಲಕ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಬಳಿ ಪರಸ್ಪಳದ ಸಂತರು ಸಮಾಜ ಬಾಂಧವರು ಶ್ರೀ ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಹಿಳೆಯರು ಶ್ರೀ ಪಾಂಡುರಂಗ ಸ್ವಾಮಿಯ ಭಜನೆಯಲ್ಲಿ ಪಾಲ್ಗೊಂಡು ಭಜನೆ ಆಡುತ್ತಾ ಕುಣಿದು ಕುಪ್ಪಳಿಸಿದರು ಇದೇ ಸಂದರ್ಭದಲ್ಲಿ ಕಲಾ ಕೀರ್ತನೆ ಹ.ಭ.ಪ ಬದ್ರಿನಾಥ್ ಉತ್ತರ್ ಕರ್ ಭದ್ರಾವತಿ ಇವರಿಂದ ಕಲಾ ಕೀರ್ತನೆ ನೆರವೇರಿಸಲಾಯಿತು ನಂತರ ಶ್ರೀ ಪಾಂಡುರಂಗ ಸ್ವಾಮಿಗೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬೇಲೂರು ತಾಲೂಕು ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಭಗವಂತ ರಾವ್ ಗುಜ್ಜರ್ ಕಳೆದ ಎಂಟು ದಿನಗಳಿಂದ ಪಾಂಡುರಂಗ ಸ್ವಾಮಿ ದಿಂಡಿ ಮಹೋತ್ಸವ ಮತ್ತು ವಿಶೇಷ ಜ್ಞಾನೇಶ್ವರಿ ಗ್ರಂಥ ಪಾರಾಯಣ ಸಪ್ತಹ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಮತ್ತು ಭಕ್ತರು ಪರಸ್ಪರದ ಸಂತರು ಭಾಗವಹಿಸಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಿದ್ದು ಕಳೆದ ಎಂಟು ದಿನಗಳಿಂದ ಭಜನೆ ಕೀರ್ತನೆ ವಿಶೇಷ ಪೂಜೆ ಮತ್ತು ದಾಸೋಹ ಪ್ರಸಾದ ವ್ಯವಸ್ಥೆಯು ಏರ್ಪಡಿಸಿದ್ದು ಸಾಸ್ತಾರು ಭಕ್ತರು ಪಾಲ್ಗೊಂಡು ಶ್ರೀ ಪಾಂಡುರಂಗನ ಕೃಪೆಗೆ ಪಾತ್ರರಾದರು ಎಂದು ಹೇಳಿದರು.
ಬೇಲೂರು ಭಾವಸಾರ ಕ್ಷತ್ರಿಯ ಸಮಾಜದ ಮುಖಂಡ ಜಯಣ್ಣ ಮಾತನಾಡಿ ಬೇಲೂರು ಭಾವಸಾರಕ್ಷತ್ರಿಯ ಸಮಾಜ ಬಾಂಧವರ ಮತ್ತು ಪಾಂಡುರಂಗ ಸ್ವಾಮಿ
ಯ ಭಕ್ತರ ಸಹಕಾರದಲ್ಲಿ 38ನೇ ದಿಂಡಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿದ್ದು ಸಮಾಜದ ಅಧ್ಯಕ್ಷರಾದಭಗವಂತ ರಾವ್ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಗೊಂಡಿದ್ದು ಮುಂದಿನ ದಿನಗಳಲ್ಲಿಯೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಂಡುರಂಗನ ಸೇವೆಗೆ ಮುಂದಾಗಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಗೌರವಾಧ್ಯಕ್ಷ ಆನಂದ್ ಚಿಂಬಳ್ಕರ್.
ಉಪಾಧ್ಯಕ್ಷರದ ಮಂಜುನಾಥ್ ಇರೋಸ್ಕರ್. ಕಾರ್ಯದರ್ಶಿ ಗಣೇಶ್ ರಾವ್ ಪೂಕಾಳೆ. ಖಜಾಂಚಿ ಗಣೇಶ್ ಚಿಂಬಳ್ಕರ್. ಸಹ ಕಾರ್ಯದರ್ಶಿ ವಿಶ್ವನಾಥ್ ಗುಜ್ಜರ್. ಸಮಾಜದ ಮಾಜಿ ಅಧ್ಯಕ್ಷ ಬಾಬುರಾವ್ ರಾವ್ ಸಮಾಜದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ. ಸೇರಿದಂತೆ ಬೇಕರಿ ಗಣೇಶ್. ದೀಪು ಸ್ಟುಡಿಯೋ. ಗೋಪಿ. ಗಣೇಶ್. ಚೇತನ್ ಫೋಟೋ. ಅರುಣ್. ಪುಟ್ಟರಾಜ್. ಆನಂದ್. ಗಿರೀಶ್. ಸೇರಿದಂತೆ ಕಾರ್ಯಕಾರಿ ಮಂಡಳಿ ಭಾವಸಾರ ಕ್ಷತ್ರಿಯ ದೈವ ಮಂಡಳಿ ಹಾಗೂ ಮಹಿಳಾ ಮಂಡಳಿ ಸೇರಿದಂತೆ ಸಾಸ್ತರು ಭಕ್ತರು ಪಾಲ್ಗೊಂಡಿದ್ದರು.