ಕೆ.ಆರ್.ನಗರ: ಪಟ್ಟಣದ ವಿನಾಯಕ ಬಡಾವಣೆಯ ಗ್ರಾಮದೇವತೆ ಶ್ರೀ ಮಾರಿಕಾಂಬ ದೇವಾಲಯದ 46ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಸಡಗರ ಸಂಭ್ರಮದಿAದ ಅದ್ಧೂರಿಯಾಗಿ ಮಂಗಳವಾರ ಜರುಗಿತು.
ಏ,06 ರಂದು ಸೋಮವಾರ ಸಂಜೆ 6 ಗಂಟೆಗೆ ದೇವಾಲಯದಿಂದ ಮಂಗಳವಾದ್ಯಗಳ ಮೂಲಕ ದೇವರ ಉತ್ಸವ ಮೂರ್ತಿಯನ್ನು ಪಟ್ಟಣದ ಹೊರವಲಯದ ಹಳೆ ಎಡತೊರೆಯ ಕಾವೇರಿ ನದಿಯಗೆ ಕೊಂಡೋಯ್ದು ಗಂಗಾಪೂಜೆ ನೆರವೇರಿಸಿ ಒಡವೆ, ವಸ್ತ್ರ, ಹೂವುಗಳಿಂದ ಅಲಂಕರಿಸಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ಮೂರು ಕಳಶಗಳಲ್ಲಿ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಆವಾಹನೆ, ನಂತರ ಕನ್ನಿಕೆಯರ ವಲಯ, ಕುಣಿಯುವ ಗುಡ್ಡರ ಕುಣಿತದೊಂದಿಗೆ ದೇವರ ಉತ್ಸವ ಮೂರ್ತಿಯನ್ನು ತಮಟೆ, ಛತ್ರಿ, ಛಾಮರ ಮತ್ತು ಮಂಗಳವಾದ್ಯಗಳೊAದಿಗೆ ಮೆರವಣಿಗೆ ಮೂಲಕ ತರಲಾಯಿತು.
ನಂತರ ಮೈಸೂರು-ಹಾಸನ ರಸ್ತೆಯ ಮಾರ್ಗವಾಗಿ ತಾಯಿ ಉತ್ಸವ ಮೂರ್ತಿಯನ್ನು ತಂದು ವಿನಾಯಕ ಬಡಾವಣೆಯ ವಿವಿಧ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆ ನಂತರ ಆಲಯ ಪ್ರವೇಶ ಮಾಡಲಾಯಿತು. ಬಡಾವಣೆಯ ಮಹಿಳೆಯರು ತೊಬ್ಬಿಟ್ಟು ಆರತಿಯ ನೈವೈದ್ಯ ದೇವಿಗೆ ಸಮರ್ಪಪಿಸಿದರು. ಮಂಗಳವಾರ ಬೆಳಿಗ್ಗೆ ಗಣಪತಿಗೆ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಸ್ವರೂಪಿಣಿಯಾಗಿರುವಂತಹ ಮಾರಿಕಾಂಬ ದೇವಿಗೆ ಹಾಗು ನವಗ್ರಹಗಳಿಗೆ ಪಂಚಾಮೃತ ಪೂರ್ವಕ ಕಲಶದ ನೀರಿನಿಂದ ಮಹಾಭಿಷೇಕ ನಂತರ 12 ಗಂಟೆಗೆ ಮಹಾ ಮಂಗಳಾರತಿ ಮಾಡಲಾಯಿತು.
ಬಡಾವಣೆಯ ನಿವಾಸಿಗಳೆಲ್ಲಾ ಸರಥಿ ಸಾಲಿನಲ್ಲಿ ನಿಂತು ತಾಯಿಗೆೆ ಪೂಜೆ ಸಲ್ಲಿಸುವ ಮೂಲಕ ದರ್ಶನ ಪಡೆದು ಪುನೀತರಾದರೂ. ನಂತರ ಬಂದAತಹ ಭಕ್ತಾಧಿಗಳಿಗೆಲ್ಲಾ ದೇವಸ್ಥಾನದ ಆಡಳಿತ ಮಂಡಳಿಯಿAದ ಮಜ್ಜಿಗೆ, ಪಾನಕ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಪೂಜಾ ಮಹೋತ್ಸವಕ್ಕೆ ಶಾಸಕ ಡಿ.ರವಿಶಂಕರ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ರವರ ಪತ್ನಿ ಶಾಂತಮ್ಮ, ಜಿವಾ ಆರ್ಥೋಕೇರ್ ಮುಖ್ಯಸ್ಥ ಡಾ.ಕೆ.ಆರ್.ಗೌತಮ್ ಇನ್ನಿತರರು ಭಾಗವಹಿಸಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಶ್ರೀ ಮಾರಿಕಾಂಬ ಸೇವಾ ಪ್ರತಿಷ್ಠಾನದ ವತಿಯಿಂದ ಶಾಸಕ ಡಿ.ರವಿಶಂಕರ್ ಮತ್ತು ಆಹಲ್ಯ ಬ್ಯಾಂಕ್ ಅಧ್ಯಕ್ಷತೆ ಶಾಂತಮ್ಮವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಕೋಳಿಪ್ರಕಾಶ್, ಗೌರವಾಧ್ಯಕ್ಷ ಎನ್.ಗೌಡಪ್ಪ, ಗೌರವ ಸಲಹೆಗಾರ ನಾಗೇಂದ್ರರಾವ್, ಉಪಾಧ್ಯಕ್ಷ ತಿಮ್ಮಶೆಟ್ಟಿ, ಕಾರ್ಯದರ್ಶಿ ತುಕ್ಕೋಜೀರಾವ್, ಖಜಾಂಚಿ ಮಲ್ಲಿಕಾರ್ಜುನ ನಾಯಕ್, ನಿರ್ದೇಶಕರಾದ ಎನ್. ಶಿವಕುಮಾರ್, ವೆಂಕಟೇಶ್, ರವಿ, ನೇತ್ರಾವತಿನಾಗೇಗೌಡ, ಕೃಷ್ಣೇಗೌಡ, ಸುರೇಶ್ಕುಮಾರ್, ಶಾಂತಶಾವAದಪ್ಪ, ಮುಖಂಡರಾದ ಡಾ.ಜೆ.ದೇವು, ಗೊರಗುಂಡಿಚAದ್ರು, ಪ್ರದೀಪ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸಂಭ್ರಮದಿಂದ ಜರುಗಿದ ಶ್ರೀಮಾರಿಕಾಂಬ ದೇವಾಲಯದ 46ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ



