ದೇವನಹಳ್ಳಿ: ಕನ್ನಡ ಅಭಿಮಾನ ನ.1 ಕ್ಕೆ ಮಾತ್ರ ಸೀಮಿತವಾಗದಿರಲಿ,68ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಎಲ್ಲೆಡೆ ಕನ್ನಡದ ಕಂಪು ಹರಡಿರುವುದು ಸಂತಸ ತಂದಿದೆ ಎಂದು ಅಣ್ಣೇಶ್ವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ್ ಹೇಳಿದರು.
ತಾಲ್ಲೂಕು ಅಣ್ಣೇಶ್ವರ ಗ್ರಾಮ ಪಂಚಾಯಿತಿಯಲ್ಲಿ ತಾಯಿ ಭುವನೇಶ್ವರಿ ದೇವಿಯ ಬಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ವನ್ಮು ಆಚರಿಸಿ ಮಾತನಾಡಿ, ಕನ್ನಡಿಗರಾದ ನಮಗೆ ಅಧಿಕೃತ ಧ್ವಜ ಅಗತ್ಯವಿದೆ. ಕೇಂದ್ರ ಬಿಜೆಪಿ ಸರ್ಕಾರ ಪಕ್ಷ, ಭೇದವಿಲ್ಲದೆ ರಾಜ್ಯದ ಬೇಡಿಕೆ ಪುರಸ್ಕಾರಿಸ ಬೇಕಿದೆ.
ಅಣ್ಣೇಶ್ವರ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಈ ದಿನ ರಾಜೋತ್ಸವ ಆಚರಿಸಲು ಸರ್ವ ಸಮತ್ತ ನಿರ್ಧಾರ ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಬಹಳ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಿಗರನ್ನು ಪಡಿದೆಚ್ಚರಿಸುವ ಕೆಲಸವಾಗ ಬೇಕಿದೆ ಎಂದು ಕನ್ನಡಪರ ಸಂಘಟನೆಗಳಿಗೆ ಹಾಗೂ ಕನ್ನಡಿಗರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅಣ್ಣೇಶ್ವರ ಪಂಚಾಯಿತಿ ಉಪಾದ್ಯಕ್ಷಮುನಿರಾಜಪ್ಪ, ಸದಸ್ಯರಾದ ಚಂದ್ರಶೇಖರ್, ರಾಜಣ್ಣ, ಮುಕುಂದ, ವೆಂಕಟೇಶ್, ಶಿಲ್ಪಅಶೋಕ್, ಮಂಜುಳಾ ವೆಂಕಟೇಶ್, ರುಕ್ಮಿಣಿಯಮ್ಮ, ಮುನಿಲಕ್ಷ್ಮಮ್ಮ ನಾರಾ ಯಣಸ್ವಾಮಿ, ಗೋಪಾಲ್, ಪ್ರಭಾವತಿವೇಣು ಗೋಪಾಲ್, ಪಿಡಿಒ ಗಂಗರಾಜು, ಕಾರ್ಯದರ್ಶಿ ಕೃಷ್ಣಮೂರ್ತಿ, ಗ್ರಾಮದ ಮುಖಂಡರಾದ ಅಶೋಕ, ಚೇತನ್, ಮುನಿಕೃಷ್ಣಪ್ಪ ಗ್ರಾಮಸ್ಥ
ರಾದ ಚರಣ್, ಮುನಿಂದ್ರ, ಹರೀಶ್ ಇದ್ದರು.