ಬೆಂಗಳೂರು ನಗರದ ಅಂದಾಜು ೨೫ ಪೊಲೀಸ್ ಠಾಣ ವ್ಯಾಪ್ತಿಗಳಲ್ಲಿ ವಿವಿಧ ಘೋರ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನು ಪಡೆದು
ನ್ಯಾಯಾಲಯಕ್ಕೆ ಹಾಜರಾಗದೆ ೨೩ ಘೋರ ಪ್ರಕರಣಗಳಲ್ಲಿ ಈತನ ಮೇಲೆ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದ ವ್ಯಕ್ತಿಯನ್ನು ಗಿರಿನಗರ ಪೊಲೀಸರು ಬಂಧಿಸಿರುತ್ತಾರೆ. ಆರೋಪಿಯು ಬ್ಯಾಟರಾಯನಪುರ ಪೊಲೀಸ್ ಠಾಣಾಯ ರೌಡಿ ಶೀಟರ್ ಪಟ್ಟಿಯಲ್ಲಿ ಇರುತ್ತಾನೆ.
ಮೂಲತಹ ರಾಮನಗರ ಜಿಲ್ಲೆಯ ಯೋಗಾನಂದ ೩೫ ವರ್ಷದ ವ್ಯಕ್ತಿ ಸರ ಅಪಹರಣ ಪ್ರಕರಣದಿಂದ ಹಿಡಿದು ಇನ್ನೂ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹಾಲಿ ಇತರನ್ನು ಬಂಧಿಸಿರುವ ಪೊಲೀಸರು ೮೦ ಗ್ರಾಂ ಚಿನ್ನಾಭರಣಗಳನ್ನು ಗಿರಿನಗರ, ಕೋಣನಕುಂಟೆ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರ ಅಪಹರಣ ಮಾಡಿದ್ದನು ಎಂದು ಪೊಲೀಸರು ತಿಳಿಸಿರುತ್ತಾರೆ.