ನಿರ್ದೇಶಕ ಜೀವಾ ನವೀನ್ ಅವರು ಕೋಲಾರ, ದೇವನಹಳ್ಳಿ ಸುತ್ತಮುತ್ತ ನಡೆದ ಶೋಷಿತ ವರ್ಗದಲ್ಲಿ ನಡೆದ ಕಥೆಯನ್ನು ಇಟ್ಟುಕೊಂಡು ಪಾಲಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಫೆ.24 ರಂದು ತೆರೆಕಾಣುತ್ತಿರುವ ಆ ಚಿತ್ರವನ್ನು ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಮೂಲಕ ಮಂಜುನಾಥ್ ಅವರು ರಿಲೀಸ್ ಮಾಡುತ್ತಿದ್ದಾರೆ.
ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ಹಂಚಿಕೊಂಡ ಜೀವಾನವೀನ್, ಸುಮಾರು ವರ್ಷಗಳ ಹಿಂದೆ ಕೋಲಾರ ಮತ್ತು ದೇವನಹಳ್ಳಿ ಭಾದಲ್ಲಿ ನಡೆದ ನೈಜಘಟನೆಗಳನ್ನು ಇಟ್ಟುಕೊಂಡು ಈ ಚಿತ್ರಕಥೆ ಹೆಣೆದಿದ್ದೇವೆ. ಇದೊಂದು ಮಹಿಳಾ ಪ್ರಧಾನ, ಸಂಘರ್ಷದ, ಹೋರಾಟದ ಕಥನ. ಚಿಕ್ಕ ವಯಸಿನಿಂದ ಸಿನಿಮಾ ಬಗ್ಗೆ ಆಸಕ್ತಿ. ನಮ್ಮ ಜೀವನದಲ್ಲಿ ನಡೆದ, ನಾನು ನೋಡಿದಂಥ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಕಥೆ,ಸಿನಿಮಾ ಮೇಲೆ ನಂಬಿಕೆಯಿದೆ. ಕಂಟೆಂಟ್ ಬೇಸ್ ಸಿನಿಮಾವಿದು ಎಂದು ಹೇಳಿದರು.
ತೆಲುಗಿನ ಸಿನಿಮಾಬಂಡಿ ನಟಿ, ಗಾಯಕಿ ವೈ.ಜಿ.ಉಮಾ ಕೋಲಾರ ಅವರು ಮುಖ್ಯಪಾತ್ರದಲ್ಲಿ ನಟಿಸಿರುವ ಪಾಲಾರ್ ಚಿತ್ರದಲ್ಲಿ ನಾಯಕನಾಗಿ ತಿಲಕ್‍ರಾಜ್ ಕಾಣಿಸಿಕೊಂಡಿದ್ದಾರೆ, ಜೊತೆಗೆ ಈ ಚಿತ್ರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾಅರೆ. ಚಿತ್ರಕ್ಕೆ ಕ್ಯಾಮರಾಮನ್ ಆಗಿ ಆಸಿ ರೆಹಾನ್ ಹಾಗೂ ಸಂಕಲನವನ್ನು ವಲಿ ಕುಲಾಯಿಸ್ ನಿರ್ವಹಿದಿದ್ದಾರೆ. ಈ ಚಿತ್ರಕ್ಕೆ ಸುಬ್ರಮಣ್ಯ ಆಚಾರ್ಯ ಅವರ ಸಂಗೀತವಿದ್ದು, ವರದರಾಜ್ ಚಿಕ್ಕಬಳ್ಳಾಪುರ 4 ಹಾಡುಗಳನ್ನು ರಚಿಸಿದ್ದು.
ಶ್ವೇತಾ ದೇವನಹಳ್ಳಿ, ಸುಪ್ರೀತ್ ಪಲ್ಗುಣ, ಸುಬ್ರಮಣ್ಯ ಆಚಾರ್ಯ ಜೊತೆಗೆ ಉಮಾ ಕೊ ಸೌನವಿ ಕ್ರಿಯೇಷನ್ ಮತ್ತು ಹೆಲೋ ಗ್ಲೋಬಲ್ ಬ್ಯಾನರ್ ಅಡಿಯಲ್ಲಿ ಕೆ.ಆರ್. ಸೌಜನ್ಯ, ಸೌಂದರ್ಯ ಕೆ.ಆರ್ ಮತ್ತು ನವೀನ್‍ಕುಮಾರ್ ಬಾಬು ಅವರು ಈ ಚಿತ್ರ ನಿರ್ಮಿಸಿದ್ದಾರೆ.
Leave a Review