ಬೆಂಗಳೂರು: ಮೈತುಂಬ ಬಂಗಾರ ಹಾಕಿಕೊಂಡು ತನ್ನ ಸುತ್ತಲೂ ಹುಡುಗರು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸುತ್ತಿದ್ದ ದಾಸ ಯಲಹಂಕ ಪೊಲೀಸರ ಅತಿಥಿಯಾಗಿದ್ದಾನೆ.
ಬೇರೆಯವರ ನಿವೇಶನದ ಗಲಾಟೆ ನಡುವೆ ದಾಸ ತನ್ನ ಸಹಚರರನ್ನು ಕಳುಹಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಬೇರೆಯವರ ನಿವೇಶನದ ಗಲಾಟೆ ನಡುವೆ ಯುವಕರ ಕಳುಹಿಸಿಕೊಟ್ಟ ಆರೋಪ ಹಿನ್ನಲೆ ಬಂಧಿಸಿರುವ ದಾಸನನ್ನು ವಿಚಾರಣೆ ಕೈಗೊಳ್ಳಲಾಗಿದೆ.
ಮಹಿಳೆ ಹಾಗೂ ಓರ್ವ ವ್ಯಕ್ತಿ ನಡುವೆ ಜಾಗದ ಗಲಾಟೆ ಇತ್ತು. ಈ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ, ದಾಸನನ್ನು ಸಂಪರ್ಕಿಸಿ ಸಹಾಯ ಕೋರಿದ್ದ. ಅದರಂತೆ ದಾಸ ತನ್ನ ಸಹಚರರನ್ನು ಬಿಟ್ಟು ಮಹಿಳೆಗೆ ಧಮ್ಕಿ ಹಾಕಿಸಿದ್ದ. ಅಲ್ಲೇ ಹಲ್ಲೆ ಮಾಡಿಸಿದ್ದ ಎನ್ನುವ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಮಹಿಳೆಯು ದಾಸನ ಸಹಚರ ಎಂದು ಹೇಳಿ ಹಲ್ಲೆ ಮಾಡಿದ್ದಾರೆ ಎಂದು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ದೂರು ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಪೊಲೀಸರು, ತನಿಖೆ ಕೈಗೊಂಡು ದಾಸನನ್ನು ಬಂಧಿಸಿದ್ದಾರೆ.