ದುಬೈ: ಕ್ರಿಕೆಟ್ಜಗತ್ತಿನ ಬದ್ಧ ವೈರಿಗಳೆಂದೇ ಖ್ಯಾತವಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರಏಷ್ಯಾಕಪ್ ೨೦೨೫ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಪಹಲ್ಗಾಮ್ ನರಮೇಧದ ಹಿನ್ನೆಲೆಯಲ್ಲಿಎರಡೂ ದೇಶಗಳ ನಡುವಿನ ಸಂಘರ್ಷ ಬಿಗಡಾಯಿಸಿತ್ತು.ಅದರ ಬೆನ್ನಲ್ಲೇಎರಡೂ ದೇಶಗಳ ನಡುವೆಕ್ರಿಕೆಟ್ ಆಟ ನಡೆಯುವುದುಅನುಮಾನಎನ್ನುವ ಸನ್ನಿವೇಶಗಳು ಏರ್ಪಟ್ಟಿದ್ದವು.ಭೌಗೋಳಿಕ ರಾಜಕಾರಣದ ಆತಂಕಗಳನ್ನು ಮೀರಿ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯವುದುಬೈನದುಬೈಅಂತರರಾಷ್ಟ್ರೀಯಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯವು ಭಾರತೀಯ ಕಾಲಮಾನರಾತ್ರಿ ೮ ಗಂಟೆಗೆ ಶುರುವಾಗಲಿದ್ದು ಸೋನಿ ಸ್ಪೋರ್ಟ್ ನಲ್ಲಿ ವೀಕ್ಷಿಸಬಹುದು.
ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯವುಗ್ರೂಪ್ ಎ ನಲ್ಲಿ ನಡೆಯಲಿದೆ.ಭಾರತತಂಡವುಟೂರ್ನಿಯತನ್ನ ಮೊದಲ ಪಂದ್ಯದಲ್ಲಿಯುಎಇಯನ್ನು ಸೋಲಿಸಿತು.ಮತ್ತೊಂದೆಡೆ, ಪಾಕಿಸ್ತಾನವು ಓಮನ್ಅನ್ನು ಸೋಲಿಸುವ ಮೂಲಕ ಉತ್ತಮಆರಂಭವನ್ನು ಮಾಡಿದೆ.ಉಭಯ ತಂಡಗಳು ಮೊದಲ ಗೆಲುವು ಕಂಡಿರುವಕಾರಣ ಇಂದಿನ ಪಂದ್ಯರೋಚಕತೆ ಸೃಷ್ಟಿಸಿದೆ.
ಒಟ್ಟು ೨೦ ದಿನಗಳ ಕಾಲ ೮ ದೇಶಗಳು ಒಟ್ಟು ೧೯ ಪಂದ್ಯಗಳು ಟೂರ್ನಿಯಲ್ಲಿ ನಡೆಯಲಿದೆ.
ಏಷ್ಯಾಕಪ್ ೨೦೨೫ ಟೂರ್ನಿ: ಇಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ
