ಶಿಡ್ಲಘಟ್ಟ: ರಾತ್ರಿಯಿಡೀ ಸುರಿದು ಭಾರೀ ಮಳೆಗೆ ತಾಲೂಕಿನಲ್ಲಿ ರ್ಷಧಾರೆಯಾಗಿದೆ. ಅಬ್ಲೂಡು ಬಳಿ ನೂರು ರ್ಷದ ಬೃಹತ್ ಆಲದ ಮರ ಸಂಪರ್ಣ ನೆಲಕಚ್ಚಿದ್ದು,ಇದರಡಿ ಇದ್ದ ಅಂಗಡಿ ಮುಂಗಟ್ಟುಗಳು,ಜನರು,ವಾಹನಗಳು ಅಪಾಯದಿಂದ ಪಾರಾಗಿವೆ. ಇಂದು ದೈವೀಶಕ್ತಿ ಪವಾಡ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಾತ್ರಿ ರಭಸದಿಂದ ಆರಂಭವಾದ ಮಳೆ ಮುಂಜಾನೆಯವರಿಗೂ ನಿಂತಿರಲಿಲ್ಲ. ಗಾಳಿ ಇಲ್ಲದ ಕಾರಣ ಒಂದೇ ಸಮನೆ ಬಿದ್ದ ಮಳೆಗೆ ಹಳ್ಳಿಗಳಲ್ಲಿ ಇದ್ದ ಚರಂಡಿಗಳಲ್ಲಿ ಕಸ ಕಡ್ಡಿ ಕೊಚ್ಚಿ ಹೋಗಿದೆ. ಗೌಡನ ಕೆರೆಯ ಕಾಲುವೆಯಲ್ಲಿ ನೀರು ಹರಿದಿದೆ. ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿ ಹೋಗುವ ರಸ್ತೆ ರಿಪೇರಿ ನಡೆಯುತ್ತಿತ್ತು. ಅಬ್ಲೂಡು ಬಳಿ ಬೃಹತ್ ಆಲದ ಮರ ನೂರಾರು ವರ್ಷ ಗಳಿಂದ ಎಕರೆಯಷ್ಟು ವಿಶಾಲವಾಗಿ ಹರಡಿಕೊಂಡಿತ್ತು. ಇದರ ಅಡಿಯಲ್ಲಿಯೇ ತರಕಾರಿ ಅಂಗಡಿಗಳು, ಪೆಟ್ಟಿಗೆ ಅಂಗಡಿಗಳು, ಬಸ್ ನಿಲ್ದಾಣ, ಹಾಗೂ ಸಪ್ಲಮ್ಮ ದೇವಿ, ಪಿಳೇಕಕಮ್ಮದೇವಿ, ದೇವಾಲಯ ಸೇರಿದಂತೆ ಶನಿಮಹಾತ್ಮ ದೇವಾಲಯ ಇತ್ತು. ನೂತನವಾಗಿ ದೇವಾಲಯ ಕಟ್ಟಡವನ್ನು ಕಟ್ಟಲಾಗುತ್ತಿತ್ತು. ಹೋಟೆಲ್ ಗಳು ಇದ್ದವು. ರಾತ್ರಿ ಮಳೆ ಸುರಿಯುವಾಗ ಜನರು ಮನೆ ಸೇರಿಕೊಂಡಿದ್ದರು.
ರಸ್ತೆ ಸಂಚಾರ ಇರಲಿಲ್ಲ. ರಸ್ತೆ ರಿಪೇರಿ ಆಗುತ್ತಿದ್ದರಿಂದ ವಾಹನಗಳು ಸಂಚಾರ ಕಡಿಮೆ ಇತ್ತು. ಜನ ಮುಂಜಾನೆ ಬಂದು ನೋಡುವಷ್ಟರಲ್ಲಿ ನೂರು ರ್ಷದ ಆಲದ ಮರ ಸಂಪರ್ಣವಾಗಿ ಧರೆಗೆ ಉರುಳಿತ್ತು. ಮರದ ಬಳಿ ಇದ್ದ ವ್ಯಕ್ತಿ “ತಾನು ರಾತ್ರಿ ಮರ ಬಿದ್ದಿದ್ದನ್ನು ನೋಡಿದೆ. ದೇವರುಗಳೇ ಜನರನ್ನು ಕಾಪಾಡಿದ್ದಾರೆ”. ಎಂದು ಸಾವಾರಿಸಿಕೊಂಡ ಹೇಳಿದ. ಪತ್ರಿಕೆ ವರದಿಗಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಜನರು ಸೇರಿದ್ದರು. ರಸ್ತೆ ಅಗಲೀಕರಣದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಮುಂಚೆ ಮರ ತೆಗೆಯುವಂತೆ ಹೇಳಲಾಗಿತ್ತು.ಆದರೆ ಈ ರಾತ್ರಿ ದೇವರೇ ಯಾರಿಗೂ ತೊಂದರೆಯಾಗದಂತೆ ತೆಗೆದಿದ್ದಾರೆ ಎಂದು ಹೇಳಿದರು. ಅಂತೂ ದೇವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ರಾತ್ರಿ ರಭಸದಿಂದ ಬಿದ್ದ ಮರ ಯಾವುದೇ ಅಪಾಯವಿಲ್ಲದಂತೆ ಕಾಪಾಡಿದ್ದಾರೆಂಬುದು ನಿತ್ಯ ಸತ್ಯವಾಗಿದೆ.