ತನ್ನ ಅಪ್ರತಿಮ ಬ್ಯಾಟಿಂಗ್ ನಿಂದಾಗಿ ಈಗಾಗಲೇ ಮನೆ ಮಾತಾಗಿರುವ ೧೪ ವರ್ಷದ ವೈಭವ್ ಸೂರ್ಯವಂಶಿ ಅವರು ೨೦೨೫-೨೬ರ ರಣಜಿ ಟ್ರೋಫಿ ಋತುವಿನಲ್ಲಿ ಬಿಹಾರ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ೨೬ ವರ್ಷದ ಸಕಿಬುಲ್ ಗನಿ ಅವರ ನಾಯಕತ್ವದ ತಂಡದಲ್ಲಿ ಅವರು ಮಹತ್ವದ ಜವಾಬ್ದಾರಿ ನಿಭಾಯಿಸಲಿದ್ದಾರೆ. ಐಪಿಎಲ್ ನಲ್ಲಿ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆಟ ಮತ್ತು ಭಾರತ ಅಂಡರ್ ೧೯ ತಂಡಗಳಲ್ಲಿನ ಪ್ರದರ್ಶನದಿAದಾಗಿ ವೈಭವ್ ಸೂರ್ಯವಂಶಿ ಅವರಿಗೆ ೧೪ರ ಹರೆಯದಲ್ಲೇ ಈ ಗೌರವ ದೊರಕಿದೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಇಷ್ಟು ಚಿಕ್ಕ ವಯಸ್ಸಿನ ಆಟಗಾರ ಉಪನಾಯಕನಾಗಿರುವುದು ಇದೇ ಮೊದಲು.
ಇಂಡಿಯನ್ ಪ್ರೀಮಿಯರ್ ಲೀಗ್ (IPಐ) ೨೦೨೫ರ ಆವೃತಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಶರವೇಗದ ಬ್ಯಾಟಿಂಗ್ ಮಾಡಿದ್ದ ಅವರು ಇತಿಹಾಸದಲ್ಲಿ ಅತಿ ವೇಗವಾಗಿ ಶತಕ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಾಜಸ್ಥಾನ ರಾಯಲ್ಸ್ (ಖಖ) ತಂಡದ ಈ ಯುವ ಆಟಗಾರನನ್ನು,
ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರAತೆ ಶೀಘ್ರವಾಗಿ ರಾಷ್ಟಿçÃಯ ತಂಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಇದೀಗ ಎಲ್ಲೆಡೆಯಿಂದಲೂ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಏತನ್ಮಧ್ಯೆ ಅವರು ಬಿಹಾರ ರಾಜ್ಯ ತಂಡದ ಉಪನಾಯಕರಾಗಿದ್ದಾರೆ.ಅಕ್ಟೋಬರ್ 15 ರಂದು ಬಿಹಾರ ತಂಡವು ಅರುಣಾಚಲ ಪ್ರದೇಶದ ವಿರುದ್ಧ ತನ್ನ ಮೊದಲ ಪಂದ್ಯವನ್ನು ತವರು ನೆಲದಲ್ಲಿ ಆಡಲಿದೆ. ಪ್ರಸ್ತುತ, ಬಿಹಾರ ತಂಡವು ರಣಜಿ ಟ್ರೋಫಿಯ ಎಲೈಟ್ ಗುಂಪಿನಲ್ಲಿಲ್ಲ, ಬದಲಿಗೆ ಪ್ಲೇಟ್ ಗುಂಪಿನಲ್ಲಿದೆ. ಆಸೀಸ್ ನಲ್ಲಿ ಉತ್ತಮ ಪ್ರದರ್ಶನ ವೈಭವ್ ಸೂರ್ಯವಂಶಿ ಅವರು ಉತ್ತಮ ಫಾರ್ಮ್ನಲ್ಲಿದ್ದು ಬ್ರಿಸ್ಬೇನ್ ನಲ್ಲಿ ಆಸ್ಟೆçÃಲಿಯಾ ಅಂಡರ್ ೧೯ ತಂಡದ ವಿರುದ್ಧ ನಡೆದ ಮೊದಲ
ಯೂತ್ ಟೆಸ್ಟ್ ಪಂದ್ಯದಲ್ಲಿ ಕೇವಲ ೭೮ ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು.
ಯೂತ್ ಒಡಿಐ (ಔಆI) ಇತಿಹಾಸದಲ್ಲಿ ಅತಿ ವೇಗವಾಗಿ ಶತಕಗಳಿಸಿದ ದಾಖಲೆ ಇದೀಗ ಅವರ ಹೆಸರಲ್ಲಿದೆ. ಕೇವಲ ೭೮ ಎಸೆತಗಳಲ್ಲಿ ೧೪೩ ರನ್ ಗಳಿಸಿದ್ದರು,
ಇದರಲ್ಲಿ ೧೩ ಬೌಂಡರಿ ಮತ್ತು ೧೦ ಸಿಕ್ಸರ್ಗಳು ಸೇರಿದ್ದವು.ಆಸ್ಟೆçÃಲಿಯಾ ನೆಲದಲ್ಲಿ ನಡೆದ ಏಕದಿನ ಸರಣಿಯಲ್ಲೂ ಅವರು ಅತ್ಯುತ್ತಮ ಪ್ರದರ್ಶನ
ನೀಡಿದ್ದರು. ಇದಕ್ಕೂ ಮೊದಲು, ಇಂಗ್ಲೆAಡ್ ಪ್ರವಾಸದಲ್ಲಿ ಬೌಲರ್ಗಳನ್ನು ನಿರ್ದಯವಾಗಿ ದಂಡಿಸಿದ್ದರು ಮಾಡಿದ್ದರು.