ದೇವನಹಳ್ಳಿ: ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ಹೀಗಾಗಿ ನಾವು ಬರ ಅಧ್ಯಯನ ಮಾಡುತ್ತಿದ್ದೇವೆ ರಾಜ್ಯ ಸರ್ಕಾರ ಹತ್ತು ಸಾವಿರ ಕೋಟಿ ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡುವ ಮೂಲಕ ರೈತರ ನೆರವಿಗೆ ಸಹಕರಿಸಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪುಜಾರಿ ಹೇಳಿದರು.
ಕುಂದಾಣ ಹೋಬಳಿಯ ಶ್ಯಾನಪನಹಳ್ಳಿ ಗ್ರಾಮದ ರೈತರ ಹೊಲಗಳಿಗೆ ಬಿಜೆಪಿ ಸಮೀಕ್ಷೆ ತಂಡ ಬೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು ಕೇಂದ್ರದಿಂದ ಅನುದಾನ ಕೊಡಿಸಲು ಬಿಜೆಪಿಯವರಿಗೆ ತಾಕತ್ತಿಲ್ಲ ಎಂದವರ ಮಾತಿಗೆ ತಿರುಗೇಟು ನೀಡಿದ ಪೂಜಾರಿ ಕೇಂದ್ರದ ಜತೆ ಮಾತನಾಡುವುದಾದರೆ ನೀವು ಇರುವುದು ಏತಕ್ಕೆ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿ ಮತ್ತು ಕಂದಾಯ ಮಂತ್ರಿಗಳು ಇರುವದಾದ್ರೂ ಏತಕ್ಕೆ ಎಂದು ಪ್ರಶ್ನಿಸಿದರು.
ಒಳ ಮೀಸಲಾತಿ ಮಿಸಲಾತಿ ವಿಚಾರ ಕುರಿತು ಮಾತನಾಡಿ ಅಹಾರ ಸಚಿವ ಮುನಿಯಪ್ಪ ಕೆ.ಎಚ್ ಅವರ ಹೇಳಿಕೆ ಗಮನಿಸಿದ್ದೇನೆ
ರಾಜಣ್ಣನವರು ಮೂವರು ಉಪಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದಾರೆ ಸರ್ಕಾರ ಈ ಜಂಜಾಟದ ಪರಿಸ್ಥಿತೆ ಎದುರಿಸುತ್ತಿದೆ ಇನ್ನು 5 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿ ಅಕ್ಕಿ ಕೊಡುತ್ತಿಲ್ಲಾ ಅದರೆ ಕೇಂದ್ರ ಸರ್ಕಾರ 22 ಲಕ್ಷ ಕುಟುಂಬಗಳಿಗೆ ಅಕ್ಕಿ ಕೊಡುತ್ತಿದೆ ಆಯುಷ್ಮಾನ್ ಸೇರಿ ಪ್ರತಿ ಯೋಜನೆ ಜನರಿಗೆ ತಲಪುವಂತೆ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ ಮಾಡುವ ಅವಶ್ಯಕತೆಯಿಲ್ಲ ಗ್ಯಾರಂಟ್ ಯೋಜನೆಯ ವಿಫಲತೆಯಿಂದ ಕಾಂಗ್ರೇಸ್ ನವರು ಮುಚ್ಚಿಕೊಳ್ಳಲು ಆಪರೇಷನ್ ಕಮಲ ಮಾಡಲು ಹೊರಟ್ಟಿದ್ದಾರೆ ಎಂದು ಆರೋಪ ಮಾಡುತ್ತಿದ್ದರೆ ಎಂದರು.
ಇದೇ ಸಂದರ್ಬದಲ್ಲಿ ವಿಧಾನ ಪರಿಷತ್ ಸದಸ್ಯ ಆ,ದೇವೇಗೌಡ, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್, ಜಿಲ್ಲಾ ಬಿಜೆಪಿ ಮೋರ್ಚಾ ಅಧ್ಯಕ್ಷ ಎಚ್.ಎಂ ರವಿಕುಮಾರ್, ಜಿಲ್ಲಾ ಅಧ್ಯಕ್ಷ ಎ.ವಿ ನಾರಾಯಾಣಸ್ವಾಮಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕೇಶ್ ಗೌಡ, ಮಾಜಿ ಉಪಾಧ್ಯಕ್ಷ ನಾರಾಯಣಗೌಡ, ಜಿಲ್ಲಾ ಅಸಂಘಟಿತ ಕಾರ್ಮಿಕ ಸಂಚಾಲಕ ಅಂಬರೀಷ್ ಗೌಡ, ಬಿಜೆಪಿ ಇನ್ನು ಹಲವಾರು ಮುಖಂಡರುಗಳು ಹಾಜರಿದ್ದರು.