ನೆಲಮಂಗಲ: ನಗರ ವ್ಯಾಪ್ತಿಗೆ ಬರುವ ಸುಭಾಷ್ ನಗರದ ಎಂಜಿ ರಸ್ತೆಯಲ್ಲಿರುವ ಶ್ರೀ ಮುರಳಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದ ಹಿನ್ನೆಲೆ ಕಾಲೇಜು ಶಿಕ್ಷಕ ವರ್ಗ ಸಿಹಿ ಹಂಚಿ ಸಂಭ್ರಮಿಸಿದರು.
ಶಾಲೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಮುರುಳಿಧರ್ ಮಾತನಾಡಿ ಶಿಕ್ಷಕರುಗಳ ಅವಿರತಶ್ರಮ, ವಿದ್ಯಾರ್ಥಿಗಳ ಸತತ ಪ್ರಯತ್ನ,ಪೋಷಕರುಗಳ ಪ್ರೋತ್ಸಾಹ ಇಷ್ಟೆಲ್ಲ ದೊರೆಯುವುದ ರಿಂದ ಪ್ರತಿವರ್ಷ ಅತ್ಯುತ್ತಮ ಫಲಿತಾಂಶ ಪಡೆಯುತ್ತಿರುವ ಶ್ರೀ ಮುರಳಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಫಲಿತಾಂಶ ಶಾಲೆಗೆ ದೊರಕಿಸಿ ಕೊಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದೆ.
ಇದೊಂದು ಗ್ರಾಮೀಣ ಭಾಗದ ಅದರಲ್ಲೂ ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಕಾರಣವಾದ ಕಾಲೇಜ್ ಆಗಿದೆ ಈ ಬಾರಿಯೂ ಅತ್ಯುತ್ತಮ ಫಲಿತಾಂಶವನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ದೊರಕಿಸಿ ಕೊಟ್ಟಿರುವುದು ನಮಗೆ ಸಂತಸ ತಂದಿದೆ ಎಂದು ತಿಳಿಸಿದರು.ಒಟ್ಟು 68 ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದು ಅದರಲ್ಲಿ ಆರು ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆದಿದ್ದು ಶೇಕಡ 83 ರಷ್ಟು ಫಲಿತಾಂಶ ತಂದುಕೊಟ್ಟಿದ್ದಾರೆ.
ಹಾಗಾಗಿ ಅನುದಾನಿತ ಕಾಲೇಜುಗಳ ಪಟ್ಟಿಯಲ್ಲಿ ನೆಲಮಂಗಲದಲ್ಲಿ ಪ್ರಥಮ ಸ್ಥಾನದಲ್ಲಿ ಶ್ರೀ ಮುರಳಿ ಪದವಿ ಪೂರ್ವ ಕಾಲೇಜು ಕಂಡುಬಂದಿದ್ದು ವಾಣಿಜ್ಯ ವಿಭಾಗದ ಸೌಮ್ಯ ಎಂಬ ವಿದ್ಯಾರ್ಥಿನಿ 600 ಕ್ಕೆ 552 ಅಂಕ ಪಡೆಯುವ ಮೂಲಕ ಶೇಕಡ 92 ರಷ್ಟು ಫಲಿತಾಂಶ ಪಡೆದರೆ, ಸುನಿಲ್ ಎಂಬ ವಿದ್ಯಾರ್ಥಿ ವಾಣಿಜ್ಯ ವಿಭಾಗದಲ್ಲಿ 515 ಅಂಕ ಅಂದರೆ ಶೇಕಡ 86 ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ ಜೊತೆಗೆ ಮೆಹಕ್ ಎಂಬ ವಿದ್ಯಾರ್ಥಿನಿ 510 ಅಂಕಗಳು, ಪ್ರೀತಿ ಎಂಬ ವಿದ್ಯಾರ್ಥಿನಿ 506 ಅಂಕಗಳು ಪಡೆದಿದ್ದು ಇನ್ನಿತರ ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿರುತ್ತಾರೆ ಎಂದರು.
ನಂತರ ಕಾಲೇಜು ಪ್ರಾಂಶುಪಾಲರಾದ ರಾಮಯ್ಯಮಾತನಾಡಿ ಕನ್ನಡ ಹಾಗೂ ಇತಿಹಾಸ ವಿಷಯಗಳಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿರುವುದು ನಮಗೆ ಸಂತಸ ತಂದಿದೆ ಜೊತೆಗೆ ಇನ್ನಿತರ ವಿಷಯಗಳಲ್ಲೂ ಸಹ ಅತ್ಯುತ್ತಮ ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಹಾಗಾಗಿ ನಮ್ಮ ಕಾಲೇಜಿನಲ್ಲಿ ಆಡಳಿತ ವರ್ಗದವರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಂಸ್ಥಾಪಕ ನಿರ್ದೇಶಕರಾದ ಡಾ ಮುರುಳಿಧರ್, ಪ್ರಾಂಶುಪಾಲರಾದ ರಾಮಯ್ಯ, ಭೂಗೋಳ ಶಾಸ್ತ್ರ ಉಪನ್ಯಾಸಕ ಮಾರುತಿ ಎಂ ಪಿ. ಆಂಗ್ಲ ಉಪನ್ಯಾಸಕ ಟಿ ವಿ ವೀರಭದ್ರಪ್ಪ. ಇತಿಹಾಸ ಉಪನ್ಯಾಸಕ ಅಂಜನ್ ಮೂರ್ತಿ ಬಿ ಆರ್. ರಾಜ್ಯ ಶಾಸ್ತ್ರ ಉಪನ್ಯಾಸಕ ಶಿವ ನಾಯಕ್ ಪಿ ಬಿ.ವಾಣಿಜ್ಯಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ಉಪನ್ಯಾಸಕ ನರಹರಿ ರಾಜ್ ಕುಮಾರ್ ಎಂ.ಸಮಾಜಶಾಸ್ತ್ರ ಉಪನ್ಯಾಸಕ ಸೋಮಶೇಖರ್. ಅರ್ಥಶಾಸ್ತ್ರ ಉಪನ್ಯಾಸಕರುಗಳಾದ ಶ್ರೀಧರ್ ಮತ್ತು ಚಂದ್ರಕಲಾ.ಗಣಕ ವಿಜ್ಞಾನ ಉಪನ್ಯಾಸಕಿ ರೂಪಿಣಿ.ಕಚೇರಿ ಸಹಾಯಕ ನರಸಿಂಹಮೂರ್ತಿ. ಡಿ ದರ್ಜೆ ನೌಕರ ಹೊನ್ನೇಗೌಡ ಸೇರಿದಂತೆ ಕಾಲೇಜು ಆಡಳಿತ ಮಂಡಳಿ ಸಿಹಿ ಹಂಚಿ ಸಂಭ್ರಮಿಸಿದರು.