ಕೆಂಗೇರಿ: ತಾಯದಿಂರು ತಮ್ಮ ಮಕ್ಕಳಿಗೆ ಪ್ರತ್ಯೇಕವಾಗಿ ಹಾಲು ಉಣಿಸಲು ಒಂದು ಕೊಠಡಿಯ ಅವಶ್ಯಕತೆ ಇರುವುದನ್ನು ಅರಿತು ಕೆಂಗೇರಿ ಉಪನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನವಾದ ಕೊಠಡಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ಅವರು ತಿಳಿಸಿದರು.
ಕೆಂಗೇರಿ ಉಪನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚು ಹೆಚ್ಚು ರೋಗಿಗಳು ಅಗಮಿಸುವುದನ್ನು ಅರಿತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪುರುಷರಿಗೆ ಪ್ರತ್ಯೇಕ ಶೌಚಾಲಯ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಹಾಗು ತಾಯದಿಂರು ತಮ್ಮ ಮಕ್ಕಳಿಗೆ ಎದೆ ಹಾಲು ಉಣಿಸಲು ಬೇಕಾದ ಒಂದು ಕೂಠಡಿಯನ್ನು ನಿರ್ಮಾಣ ಮಾಡಿ ಇಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ ಎಂದು ತಿಳಿಸಿದರು.
ಈ ಕೆಂಗೇರಿ ಉಪನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯೆ ಡಾ/ರೇಷ್ಮಾ ಕೆಂಗೇರಿ ವಾರ್ಡ್ ಮುಖಂಡ ಟಿ ಪ್ರಭಾಕರ್ ಎಂ ಹರೀಶ್ ಕುಮಾರ್ ಸಜ್ಜದ್ ಬಾಬು ವೈ ಕೃಷ್ಣ ಶಿವಕುಮಾರ್ ಸಬೀಹಾ ಅಜುಂ ಕಾಂತ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.