ರಾಮನಗರ: ಮಂಡ್ಯ ಲೋಕಸಭೆಗೆ ನಾನು ಸ್ಪರ್ದೆ ಮಾಡಿರುವುದು ವಯುಕ್ತಿಕ ಸ್ಥಾನಮಾನಕಲ್ಲ, ಜಿಲ್ಲೆಯ ಅಭಿವೃದ್ಧಿಗೆ ಮತ್ತು ಪಕ್ಷಕ್ಕೆ ಭದ್ರ ಬುನಾದಿ ಹಾಕಲು ಸ್ಪರ್ಧೆ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಮನಗರದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಥರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಅವರು ನಾಮಪತ್ರ ಸಲ್ಲಿಕೆ ನಂತರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ನಮ್ಮ ಬೆನ್ನಿಗೆ ಚೂರಿ ಹಾಕಿದಿರಿ, ನಾವು ಯಾವ ರೀತಿ ಮೈತ್ರಿ ಧರ್ಮ ಪಾಲನೆ ಮಾಡಿದಿರಿ ಎಂದು ತಿಳಿದಿದೆ. ಸರ್ಕಾರ ನಡೆಸಿದಾಗ ಹಸ್ತಕ್ಷೇಪ ನಡೆಸಿ ಅವರು ನನ್ನನ್ನು ನಡೆಸಿಕೊಂಡ ರೀತಿಯನ್ನು ರಾಜ್ಯದ ಜನರು ನೋಡಿದ್ದಾರೆ.
ನಾನು ಮತ್ತು ಯಡಿಯೂರಪ್ಪ ಅವರು ನೀಡಿದ ಆಡಳಿತವನ್ನು ಜನರು ಮರೆತಿಲ್ಲ. ಭಾಗ್ಯಲಕ್ಷ್ಮಿ, ಸೈಕಲ್ ವಿತರಣೆ, ಲಾಟರಿ ಬಂದ್, ಸಾರಾಯಿನೀಷ ಮಾಡಿದ್ದು ಈ ರಾಜ್ಯದ ಜನರಿಗೆ ತಿಳಿದಿದೆ ಎಂದು ಮಾರ್ಮಿಕವಾಗಿ ನುಡಿದರು.ಎದುರಾಳಿಗಳು ಜಿಲ್ಲೆಗೆ ಅನೇಕ ಕೊಡುಗೆ ನೀಡಿರುವುದಾಗಿ ಹೇಳುತ್ತಿದ್ದಾರೆ. ನಮ್ಮ ಕುಟುಂಬ ಸ್ಪರ್ದೆ ಮಾಡಿದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಕಾರವಾಗಿವೆ.
ಡಿ.ಕೆ.ಶಿವಕುಮಾರ್ ನನ್ನ ಸಹೋದರ ಪಂಚಾಯ್ತಿ ಸದಸ್ಯನಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿರುವುದನ್ನು ನೋಡಿದರೆ ಕನಕಪುರದಲ್ಲಿ ನರೇಗಾ ಯೋಜನೆಯಡಿ ಲಕ್ಷಾಂತರ ಹಣ ಮಾಡಿದ್ದು, ರೈತರ ಹೊಲಗಳಿಗೆ ದಾರಿ ಕೊಡಿಸದಿರುವುದು, ಪೊಲೀಸ್ ಠಾಣೆಯಲ್ಲಿ ಎಪ್ಐಆರ್ ಹಾಕಿದಿರುವುದು, ಎಂಪಿಸಿಎಸ್ ಗಳಲ್ಲಿ ರೈತರಿಗೆ ಅನ್ಯಾಯ ಮಾಡಿ ಲೂಟಿ ಮಾಡಿರುವವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಡಿ.ಕೆ.ಬ್ರದರ್ಸ್ ವಿರುದ್ದ ಹರಿಹಾಯ್ದರು.
ಅಣ್ಣ ತಮ್ಮಂದಿರ ಆಟಕ್ಕೆ ಇದು ಕೊನೆಗಾಲ. ಪ್ರಾಕೃತಿಕ ಸಂಪತ್ತು ದರೋಡೆ ಮಾಡಿ, ಅಧಿಕಾರಿಗಳಿಗೆ ದಮಕಿ ಹಾಕುವವರಿಗೆ ಕಡಿವಾಣ ಹಾಕಿ, ಎಲ್ಲರೂ ಮಂಜುನಾಥ್ ಗೆಲುವಿಗೆ ಪಣ ತೊಡಿ. ನಾನು ನಿಮಗೆ ಏನು ಅನ್ಯಾಯ ಮಾಡಿದ್ದೇನೆ.
ಪ್ರತಿ ಕುಟುಂಬಗಳು ನೆಮ್ಮದಿಯ ಜೀವನ ನಡೆಸುವ ವಾತಾವರಣ ನಿರ್ಮಾಣ ಮಾಡಿದ್ದೇನೆ. ರಾಮನಗರ ಕ್ಷೇತ್ರದಲ್ಲಿ ಸುಮಾರು 25 ಸಾವಿರ ಲೀಡ್ ಕೊಡಿ ವಿಶೇಷವಾಗಿ ಮನವಿ ಎಂದರು.ನಾನು ಜಿಲ್ಲೆ ಬಿಡುವ ಪ್ರಶ್ನೆಯೇ ಇಲ್ಲ. ಈ ಚುನವಣೆಯಲ್ಲಿ ಕಾಂಗ್ರೆಸ್ಸಿಗರು ಹಣ ನೀಡಿ ಮುಖಂಡರನ್ನು ಖರೀದಿ ಮಾಡಿದರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ. ನೀವು ವಿಧಾನಸಭಾ ಚುನಾವಣೆ ವೇಳೆ ಡಿ.ಕೆ.ಶಿವಕುಮಾರ್ ಅವರಿಗೆ ಪೆನ್ನು ಪೇಪರ್ ಕೊಟ್ಟಿರುವುದು ತಮಿಳುನಾಡಿಗೆ ನೀರು ಬಿಡಲು, ವರ್ಗಾವಣೆಗೆ ಸಹಿ ಮಾಡುವುದಕ್ಕಾ ಎಂದು ಡಿಕೆಶಿ ಬ್ರದರ್ಸ್ ವಿರುದ್ದ ಹರಿಹಾಯ್ದರು.