ರಾಮನಗರ: ಬೆಂಗಳೂರು ಗ್ರಾಮಾಂತರಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚಿನ್ನಪ್ಪ ಚಿಕ್ಕ ಹಾಗಡೆ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕು ಮುನ್ನ ಕೃತಕ ಆನೆ ಮೇಲೆ ಕುಳಿತು ಮೆರವಣಿಗೆಯಲ್ಲಿ ಸಾಗಿದರು. ಆನೆಯು ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಚಿಹ್ನೆಯಾಗಿದ್ದು, ಇದನ್ನೇ ಬಳಸಿ ಕೊಂಡು ಆನೆ ಮೇಲೆ ಕುಳಿತು ಡಿಸಿ ಕಚೇರಿ ತನಕ ಮೆರವಣಿಗೆಯಲ್ಲಿ ಸಾಗಿದರು.
ಇವರಿಗೆ ಪಕ್ಷದ ರಾಜ್ಯಾ ಧ್ಯಕ್ಷ ಮಾರಸಂದ್ರಮುನಿಯಪ್ಪ ಸೇರಿದಂತೆ ಹಲವರು ಸಾಥ್ ನೀಡಿದರು. ಅಭ್ಯರ್ಥಿಯ ವಿಭಿನ್ನತೆಯು ಸಾರ್ವಜನಿಕರು ಕುತೂಹಲಕ್ಕೆ ಕಾರಣವಾಗಿತ್ತು.ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಭ್ಯರ್ಥಿ ಚಿನ್ನಪ್ಪ ಚಿಕ್ಕ ಹಾಗಡೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ತನ್ನ ಉಮೇದುವಾರಿಕೆ ಸಲ್ಲಿಸಿದ್ದೇನೆ. ಈ ಭಾಗದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು ಅಧಿಕಾರಿ ನಡೆಸಿವೆ.
ಆದರೆ, ಈ ಭಾಗದ ಜನತೆಗೆ ಕನಿಷ್ಟ ಮೂಲಭೂತ ಸೌರ್ಯವನ್ನು ಒದಗಿಸಿಲ್ಲ. ಅಭಿವೃದ್ಧಿ ಕರ್ಯದಲ್ಲಿ ಕಳೆದ 10 ವರ್ಷದಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ಡಿ.ಕೆ.ಸುರೇಶ್ ಅವರು ಯಾವುದೆ ಕೆಲಸಗಳನ್ನು ಮಾಡಿಲ್ಲ ಎಂದು ಹೇಳಿದರು.ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ವಿಜಯ ಸಾಧಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಹಾಲಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಯಾರು ಸಹ ಶಾಶ್ವತವಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ. ಕೇವಲ ಸಣ್ಣಪುಟ್ಟ ಕೆಲಸಗಳನ್ನೇ ನಡೆಸಿಕೊಂಡು ಬಂದಿದ್ದಾರೆ.
ಜನತೆಗೆ ಆಮೀಷ ಒಡ್ಡಿಕೊಂಡು ಚುನಾವಣೆಯಲ್ಲಿ ವಿಜಯಸಾಧಿಸುತ್ತಿದ್ದಾರೆ ಎಂದು ಹೇಳಿದರು.ಎಲ್ಲೆಡೆ ಇರುವಂತೆ ಕುಟುಂಬ ರಾಜಕಾರಣ ಬೆಂಗಳೂರು ಗ್ರಾ.ಕ್ಷೇತ್ರದಲ್ಲಿಯೂ ಇದೆ. ಕಾಂಗ್ರೆಸ್ನಿಂದ ಅಣ್ಣ ಡಿಸಿಎಂ ಆದರೆ, ತಮ್ಮ ಸಂಸತ್ ಸದಸ್ಯರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರ ಮಾವ ದೇಶದ ಪ್ರಧಾನಿಯಾಗಿದ್ದರು, ಭಾವ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಭಾರತದ ಸಂವಿಧಾನಕ್ಕೆ ಮಾರಕವಾಗಿರುವ ಕುಟುಂಬ ರಾಜ ಕಾರಣ ಈ ಪಕ್ಷಗಳು ನಡೆಸುತ್ತಿವೆ. ಈ ಕುಟುಂಬ ರಾಜಕಾರಣಗಳನ್ನು ಕೊನೆಗಾಣಿಸಲು 5ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಸೇವೆ ಮಾಡುವವರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಬಿಎಸ್ಪಿ ಪಕ್ಷದ ವತಿಯಿಂದ ಎರಡು ಭಾರಿ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಜತೆಗೆ ಕ್ಷೇತ್ರದಲ್ಲಿನ ಸಂಚಾರ ಮಾಡಿ ಜನತೆ ಸಮಸ್ಯೆಗೆ ಸ್ಪಂಧಿಸುವ ಕೆಲಸ ಮಾಡುತ್ತಿದ್ದೇನೆ. ಒಮ್ಮೆ ನಮಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, ನಾವು ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿಯು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇವೆ. ನಮ್ಮ ಪಕ್ಷವೂ ಎನ್ಡಿಎ ಹಾಗೂ ಐಎನ್ಡಿಎ ಮೈತ್ರಿಕೂಟದಲ್ಲಿ ಇಲ್ಲ. ಜತೆಗೆ, ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲಿಯು ಬಿಎಸ್ಪಿ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಸಂವಿಧಾನವನ್ನು ಯಥಾವತ್ತಾಗಿ ಜಾರಿಗೆ ಮಾಡಬೇಕಾಗಿದೆ. ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ ನೀಡಬೇಕು. ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಧರ್ಮದ ಗಲಾಟೆ ಇರಬಾರದು. ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಹಾಗು ಸಂಸತ್ ಸದಸ್ಯ ದುಡಿಯಬೇಕು. ಆದರೆ,ದುರಾದೃಷ್ಟವಶಾತ್ಜನಪ್ರತಿನಿಧಿಗಳ ಕರ್ತವ್ಯ ತಿಳಿಯದೆ, ಚುನಾವಣೆಯಲ್ಲಿ ಮತದಾನ ಮಾಡದೆ, ಪಾರ್ಲಿಮೆಂಟ್ನಲ್ಲಿ ಮಾತನಾಡದ ಪ್ರತಿನಿಧಿಗಳಿಗೆ ಮತದಾನ ಮಾಡುತ್ತಾರೆ.
ಕ್ರಿಮಿನಲ್ ಹಿನ್ನಲೆ, ಮೈನಿಂಗ್ ಮಾಡುವುದು ಸೇರಿದಂತೆ ಅಪರಾಧಿ ಚುಟುವಟಿಕೆಗಳಲ್ಲಿ ಭಾಗೀಯಾಗಿರುವವರೆ ಆಯ್ಕೆಯಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ರಾಜ್ಯದಲ್ಲಿ 28 ಮಂದಿ ಸಂಸದರಿದ್ದಾರೆ.ಆದರೆ, ರಾಜ್ಯ ಜಲ್ವಂತ ಸಮಸ್ಯೆಗಳ ಬಗ್ಗೆ ಪಾರ್ಲಿಮೆಂಟ್ನಲ್ಲಿ ಯಾರೊಬ್ಬರು ಚರ್ಚಿಸಿಲ್ಲ. ಅದರಲ್ಲೂ ಕಾವೇರಿ ಸಮಸ್ಯೆ, ಕೈಗಾರಿಕೆ, ಶಿಕ್ಷಣ ಸೇರಿದಂತೆ ಯಾವುದಕ್ಕೂ ಚಕಾರ ಎತ್ತುತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ 55 ವರ್ಷ ಆಳ್ವಿಕೆ ಮಾಡಿದೆ, ಬಿಜೆಪಿ 10 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದೆ.ಆದರೂ, ದೇಶದ ಅಭಿವೃದ್ಧಿ ಹಾಗೂ ಪ್ರಗತಿಪರಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಯಾ ಪಕ್ಷದಿಂದ ಬಿ ಫಾರಂ ಪಡೆಯಲು 25 ಕೋಟಿ ಹಣನೀಡಬೇಕು ಎಂದು ಹೇಳಿದರು.
ಬಿಎಸ್ಪಿ ರಾಜ್ಯ ಕರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಲಾಢ್ಯ ಕುಟುಂಬಗಳ ನಡುವೆ ಸಾಮಾನ್ಯ ಕರ್ಯಕರ್ತರೊಬ್ಬರು ಸ್ಪರ್ಧೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಹಣ ಬಲ ಮತ್ತು ಜಾತಿ ಬಲದ ಮೇಲೆ ಚುನಾವಣಾ ಆಯೋಗದ ಕಾನೂನು ಉಲ್ಲಂಘಿಸಿ ಮತದಾರರಿಗೆ ಆಮೀವೊಡ್ಡಿ ಎರಡು ಪಕ್ಷಗಳು ಚುನಾವಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.ಈ ವೇಳೆ ಪಕ್ಷದ ಮುಖಂಡರಾರದ ಹಾ.ರಾ.ಮಹೇಶ್, ಅನ್ನದಾನಪ್ಪ, ಮುರುಗೇಶ್, ನಾಗೇಶ್ ಸೇರಿದಂತೆ ಹಲವರು ಇದ್ದರು.