ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಝಳ ತುಸು ಹೆಚ್ಚಾಗಿಯೇ ಇದೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪ ತೀವ್ರವಾಗಿದೆ.ಬಾಗಲಕೋಟೆ, ವಿಜಯಪುರ ಮತ್ತಿತರ ಕಡೆ 41 ಡಿಗ್ರಿಯಷ್ಟು ಸುಡುಬಿಸಿಲು ಇದೆ. ಇದೀಗ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಾದ ದಾವಣಗೆರೆ, ಬಾಗಲಕೋಟೆಯಲ್ಲಿ ಬಿಸಿಲನ್ನೂ ಲೆಕ್ಕಿಸದೆ ಅಭ್ಯರ್ಥಿಗಳು ತೀವ್ರ ಪ್ರಚಾರದಲ್ಲಿ ತೊಡಗಿದ್ದಾರೆ.ಬೆಳಗ್ಗೆ 10 ಗಂಟೆಯಿAದ ಮಧ್ಯಾಹ್ನ 1 ಗಂಟೆಯವರೆಗೂ ತದನಂತರ ಮೂರು ಗಂಟೆಯಿಂದ ಸಂಜೆಯವರೆಗೂ ಮನೆಮನೆಗೂ ತೆರಳಿ ಪ್ರಚಾರ ನಡೆಸಿದ್ದಾರೆ.ಇಂದು ಬಾಗಲಕೋಟೆಯ ಆಸ್ಪತ್ರೆ ರಸ್ತೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ತಮ್ಮ ಪಕ್ಷದ ಮುಖಂಡರು ಹಾಗೂ ಅಭಿಮಾನಿ ಪಡೆಯೊಂದಿಗೆ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ತೀವ್ರ ಪ್ರಚಾರ ನಡೆಸಿದ್ದಾರೆ.ಬೆಳಿಗ್ಗೆ 8 ಗಂಟೆಯಿAದಲೇ ಶುರುವಾದ ಪ್ರಚಾರ ಮಧ್ಯಾಹ್ನದವರೆಗೂ ಮುಂದುವರೆದಿತ್ತು. ಬಿಸಿಲಿನ ತಾಪಕ್ಕೆ ಕಾಲು ಸುಡುತ್ತಿದ್ದರೂ ಸಹ ಕೆಲವು ಅಭಿಮಾನಿ ಕಾರ್ಯಕರ್ತರು ತಮ್ಮ ನಾಯಕರ ಪರ ಜಯಘೋಷ ಕೂಗುತ್ತಿದ್ದದ್ದೂ ಸಾಮಾನ್ಯವಾಗಿತ್ತು. ಪ್ರಚಾರಕ್ಕೆ ಆಗಮಿಸುತ್ತಿದ್ದವರಿಗೆ ನೀರು ಹಾಗೂ ದಣಿವಾರಿಸಿಕೊಳ್ಳಲು ತಂಪು ಪಾನೀಯ ನೀಡುತ್ತಿದ್ದು ಅಲ್ಲಲ್ಲಿ ಕಂಡುಬಂತು. ಇತ್ತ ದಾವಣಗೆರೆಯಲ್ಲೂ ಸಹ ಅದೇ ಪರಿಸ್ಥಿತಿ ಮುಂದುವರೆದಿತ್ತು.ಪಕ್ಷದ ಅಭ್ಯರ್ಥಿ ಸಮರ್ಥ ಶಾಮನೂರು ಯುವ ಕಾರ್ಯಕರ್ತರ ಪಡೆಯೊಂದಿಗೆ ಮನೆಮನೆಗೂ ತೆರಳಿ ಪ್ರಚಾರ ಮುಂದುವರೆಸಿದ್ದರು.
ಬಿಸಿಲಿನ ಝಳದಲ್ಲೂ ಪ್ರಚಾರ ದಿನದಿಂದ ದಿನಕ್ಕೆ ಕಾವೇರುತ್ತಿದೆ ಉಪಚುನಾವಣೆ ಪ್ರಚಾರ



