ಏಷ್ಯಾ ಕಪ್ ಫೈನಲ್ ಗೂ ಮುನ್ನ ಕೇವಲ ಔಪಚಾರಿಕ ಎಂದೇ ಪರಿಗಣಿಸಲ್ಪಟ್ಟ ಭಾದತಗ v/s ಶ್ರೀಲಂಕಾ ಪಂದ್ಯ ಅಕ್ಷರಶಃ ಟಿ೨೦ಯ ರೋಚಕತೆಯನ್ನು ಉಣಬಡಿಸಿತು. ಪತುಮ್ ನಿಸ್ಸಾಂಕ ಅವರ ಅದ್ಬುತ ಶತಕದಿಂದ ಸೂಪರ್ ಓವರ್ ಕಂಡ ಪಂದ್ಯ ಅಂತಿಮವಾಗಿ ಸೂಪರ್ ಓವರ್ ನಲ್ಲಿ ಭಾರತ ತಂಡದ ಪಾಲಾಯಿತು.
ಗಣದಲ್ಲಿ ಶುಕ್ರವಾರ ನಡದ ಸೂಪರ್ ೪ ಹಂತದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ೨೦ ಓವರ್ ಗಳಲ್ಲಿ ೨೦೨ ರನ್ ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕುತ್ತರವಾಗಿ ಶ್ರೀಲಂಕಾ ತಂಡ ೨೦ ಓವರ್ ಗಳಲ್ಲಿ ಅಷ್ಟೇ ರನ್ ಗಳಿಸುವಲ್ಲಿ ಶಕ್ತವಾಯಿತು. ಸೂಪರ್ ಓವರ್ ನಲ್ಲಿ ಶ್ರೀಲಂಕಾ ೨ ವಿಕೆಟ್ ನಷ್ಟಕ್ಕೆ ಕೇವಲ ೨ ರನ್. ಇದನ್ನು ನಾಯಕ ಸೂರ್ಯಕುಮಾರ್ ಯಾದವ್ ಒಂದೇ ಎಸೆತದಲ್ಲಿ ಪೂರೈಸಿದರು. ಈ ಮೂಲಕ ಭಾರತ ತಂಡ ಅಜೇಯವಾಗಿ ಏಷ್ಯಾ ಕಪ್ ಫೈನಲ್ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದಿರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಏಷ್ಯಾ ಕಪ್ಇತಿಹಾಸದಲ್ಲೇ ಇತ್ತಂಡಗಳು ಮೊದಲ ಬಾರಿ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ಶ್ರೀಲಂಕಾಗೆ ಆರಂಭಿಕ ಆಘಾತ ಗೆಲ್ಲಲು ೨೦೨ ರನ್ ಗಳ ಕಠಿಣ ಗುರಿ ಪಡೆದಿದ್ದ ಶ್ರೀಲಂಕಾ ತಂಡ ಮೊದಲ ವಿಕಟ್ ಕುಸಾಲ್ ಮೆಂಡಿಸ್ ರೂಪದಲ್ಲಿ ೭ ರನ್ ಗೆ
ಪತನಗೊಂಡಾಗ ಭಾರತ ಈ ಪಂದ್ಯವನ್ನು ಸುಲಭದಲ್ಲಿ ಗೆದ್ದುಬಿಡಬಹುದು ಎಂದೇ ಎಲ್ಲರೂ ಎಣಿಸಿದ್ದರು. ಆದರೆ ಪತುಮ್ ನಿಸ್ಸಾಂಕಾ ಮತ್ತು ಕುಸಾಲ್ ಪೆರೆರಾ ಅವರು ಪಂದ್ಯದ ಗತಿಯನ್ನೇ ಗತಿಯನ್ನೇ ಬದಲಾಯಿಸಿದರು. ಇವರಿಬ್ಬರೂ ೨ನೇ ವಿಕೆಟ್ ಗೆ ೧೨೭ ರನ್ ಕಲೆಹಾಕಿದರು. ಓವರ್ ಗೆ ೧೧ ರನ್ ನಂತೆ ಗಳಿಸುತ್ತಾ ಹೋದ ಇವರಿಬ್ಬರೂ ಭಾರತೀಯ ಬೌಲರ್ ಗಳನ್ನು ಚೆನ್ನಾಗಿ ಗೋಳು ಹೊಯ್ದುಕೊಂಡರು.
ತAಡದ ಮೊತ್ತ ೧೩೪ ರನ್ ಆಗಿರಬೇಕಾದರೆನ ವರುಣ್ ಚಕ್ರವರ್ತಿ ಅವರ ಬೌಲಿಂಗ್ ನಲ್ಲಿ ಕೀಪರ್ ಸಂಜು ಸ್ಯಾಮ್ಸನ್ ಅವರ ಅದ್ಬುತ ಸ್ಟಂಪಿAಗ್ ನಿಂದಾಗಿ ಕುಸಾಲ್ ಪೆರೆರಾ(೩೨ ಎಸೆತದಲ್ಲಿ ೫೮) ವಿಕೆಟ್ ಪತನಗೊಂಡಿತು. ಆದರೂ ನಿಸ್ಸಾಂಕಾ ಹೋರಾಟ ಮಾತ್ರ ನಿಂತಿರಲಿಲ್ಲ. ಕೇವಲ ೨೫ ಎಸೆತಗಳಲ್ಲಿ
ಅರ್ಧಶತಕ ಬಾರಿಸಿದ್ದ ಅವರು ೫೩ ಎಸೆತದಲ್ಲಿ ಶತಕ ಪೂರೈಸಿದರು. ಅಂತಿಮವಾಗಿ ಅವರು ೫೮ ಎಸೆತಗಳಲ್ಲಿ ೧೦೭ ರನ್ ಗಳಿಸಿ ಕೊನೇ ಓವರ್
ನಲ್ಲಿ ಔಟಾದರು. ಇದು ನಿಸ್ಸಾಂಕಾ ಅವರು ಮೊದಲ ಚಿ೨೦ ಶತಕವಾಗಿದ್ದರೆ, ಏಷ್ಯಾ ಕಪ್ ಟಿ೨೦ ಪಂದ್ಯದಲ್ಲಿ ೩ನೇ ಶತಕವಾಗಿದೆ.
ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ೨೩ ಎಸೆತಗಳಲ್ಲಿ ಉಪಯುಕ್ತ ೩೯ ರನ್ ಗಳಿಸಿದರೆ, ಅಕ್ಷರ್ ಪಟೇಲ್ ಅವರು ೧೫ ಎಸೆತಗಳಲ್ಲಿ ಅಜೇಯ ೨೧ ರನ್ ಗಳಿಸಿದರು. ಶ್ರೀಲಂಕಾ ಪರವಾಗಿ ದಸುನ್ ಶನಕ, ಚರಿತ ಅಸಲಂಕ,ವನಿAದು ಹಸರಂಗ, ದುಷ್ಮಂತ ಚಾಮಿರ, ಮಹೀಶ್ ಪತಿರಣ ತಲಾ ೧ ವಿಕೆಟ್ ಗಳಿಸಿದರು