ತಿಪಟೂರು: ಕರ್ನಾಟಕ ರಾಜ್ಯಕ್ಕೆ ಭೀಕರ ಬರಗಾಲ ಬಂದೊದಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಬರನಿರ್ವಹಣೆಗೆ ಸೂಕ್ತಅನುದಾನ ನೀಡದೆ ಕರ್ನಾಟಕ ರಾಜ್ಯದ ವಿರುದ್ಧ ಮಲತಾಯಿ ಧೋರಣೆ ತಾಳುತ್ತಿದೆ ಎಂದು ಗೃಹ ಸಚಿವ ಡಾಕ್ಟರ್ .ಜಿ .ಪರಮೇಶ್ವರ್ ನೇರವಾಗಿ ಆರೋಪಿಸಿದರು.
ಅವರು ತಿಪಟೂರು ತಾಲೂಕಿನ ಕೆ ಬಿ ಕ್ರಾಸ್ ನಲ್ಲಿ ನಡೆಯಲಿರುವ ಪ್ರಜಾ ಧ್ವನಿ 2 ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರ ಸಚಿವರು ನಮಗೆ ಸಂವಿಧಾನವು ಒಕ್ಕೂಟ ವ್ಯವಸ್ಥೆಯನ್ನು ಅವಕಾಶ ಮಾಡಿಕೊಟ್ಟಿದ್ದು, ಒಕ್ಕೂಟ ವ್ಯವಸ್ಥೆಯನ್ನು ಗೌರವಿಸದ ಕೇಂದ್ರ ಸರ್ಕಾರದ ವಿರುದ್ಧ ಒಕ್ಕೂಟ ವ್ಯವಸ್ಥೆಯಲ್ಲಿರುವ ರಾಜ್ಯಗಳು ತನಗೆ ನೀಡಬೇಕಾದ ಪರಿಹಾರವನ್ನು ಪಡೆದುಕೊಳ್ಳಲು ಸುಪ್ರೀಂಕೋರ್ಟ್ ಗೆ ಹೋಗುವಂತಹ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಸೃಷ್ಟಿ ಮಾಡಿದೆ.
ಬರಗಾಲ ನಿರ್ವಹಣೆಗೆ ನಾವು ಕೇಂದ್ರ ಸರ್ಕಾರಕ್ಕೆ 18 ಸಾವಿರ ಕೋಟಿ ಅನುದಾನ ನೀಡಬೇಕೆಂದು ಮನವಿ ಮಾಡಿಕೊಂಡಿದ್ದವು ಕೇಂದ್ರದಿಂದ ನಿಯೋಗವು ಸಹ ಡಿಸೆಂಬರ್ ತಿಂಗಳಿನಲ್ಲಿ ಬಂದು ಹೋಗಿದೆ. ಆದರೆ ನಿಯಮಾನುಸರ ನಿಯೋಗ ಬಂದು ಹೋದ ಒಂದು ತಿಂಗಳ ಒಳಗೆ ಪರಿಹಾರ ಹಣ ಬಿಡುಗಡೆ ಮಾಡಬೇಕು, ಇಂತಹ ನಿಯಮಗಳನ್ನು ಗೌರವಿಸದೆ ಜನ ವಿರೋಧಿ ನೀತಿ ಅನುಸರಿಸುತ್ತಿರುವ, ಆರ್ಥಿಕ ವ್ಯವಸ್ಥೆಯನ್ನು ಹಾಳುಗೆಡವಿ ಅಭಿವೃದ್ಧಿಯನ್ನು ಮರೀಚಿಕೆಯ ನ್ನಾಗಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಜನರು ಜನಾದೇಶ ನೀಡಬೇಕು , ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲು ಸಜ್ಜನ ರಾಜಕಾರಣಿಯಾಗಿರುವ ಮುದ್ದಹನುಮೇಗೌಡರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವರಾದ ಮುನಿಯಪ್ಪನವರು ಮಾತನಾಡುತ್ತಾ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದರ ಪ್ರತಿಫಲವಾಗಿ ಕರ್ನಾಟಕ ರಾಜ್ಯದ ಜನತೆಗೆ ಪ್ರತಿಯೊಬ್ಬರಿಗೂ ತಲಾ ಹತ್ತು ಕೆಜಿ ಆಹಾರ ದೊರಕುತ್ತಿದೆ. ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಅಕ್ಕಿ ಕೊಡದೆ ಇರುವುದರ ಮಲತಾಯಿ ಧೋರಣೆ ನೀತಿಯಿಂದಾಗಿ ಐದು ಕೆ.ಜಿ .ಅಕ್ಕಿ ನೀಡುತ್ತಿದ್ದು ಐದು ಕೆ.ಜಿ .ಹಣವನ್ನು ಡಿ ಬಿ ಟಿ ಮೂಲಕ ನೇರವಾಗಿ ಫಲಾನುಭವಿ ಖಾತೆಗೆ ವರ್ಗಾವಣೆ ಮಾಡುತ್ತಿದ್ದೇವೆ.
ದಾಸ್ತಾನು ಸಾಕಷ್ಟಿದ್ದರೂ ಅಕ್ಕಿಕೊಡದೆ ಕರ್ನಾಟಕಕ್ಕೆ ಅನ್ಯಾಯವೆಸಗಿದ ಕೇಂದ್ರ ಸರ್ಕಾರದ ವಿರುದ್ಧ ಮತ ಚಲಾಯಿಸಬೇಕೆಂದು ಕರೆ ನೀಡಿದರು.ವೇದಿಕೆಯಲ್ಲಿ ತಿಪಟೂರು ತಾಲೂಕಿನ ಮಾನ್ಯ ಶಾಸಕರಾದ ಕೆ ಷಡಕ್ಷರಿ ಹಾಗೂ ನಗರಸಭೆ ಸದಸ್ಯ ಲೋಕನಾಥ್ ಸಿಂಗ್ ಉಪಸ್ಥಿತರಿದ್ದರು.