ಬೇಲೂರು: ಪೆನ್ ಡ್ರೈವ್ ಹಗರಣದಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷವನ್ನು ಮುಗಿಸಲು ಹವಣಿಸುತ್ತಿದೆ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ತೋಚ ಅನಂತಸುಬ್ಬರಾವ್ ಆರೋಪಿಸಿದರು.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹಗರಣದಲ್ಲಿ ಕಾರು ಚಾಲಕ ಕಾರ್ತಿಕ್,ಬೇಲೂರು ತಾಲ್ಲೂಕ್ಕಿನ ವಿನಯಗೌಡ, ಚೇತನ್ ನ್ಯಾಯಾಲಯ ಜಾಮೀನು ನಿರಾಕರಿದ್ದರೂ ಅವರನ್ನು ಎಸ್ ಐ ಟಿ ಸಂಸ್ಥೆ ವಶಕ್ಕೆ ಪಡೆಯುತ್ತಿಲ್ಲ,
ಕೇವಲ ಜೆಡಿಎಸ್ ಪಕ್ಷವನ್ನೇ ಗುರಿಯಾಗಿಸುತ್ತಿದೆ, ಕಾರಣ ಬೆಂಗಳೂರು ಗ್ರಾಮಾಂತರದಲ್ಲಿ ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಅವರನ್ನು ಡಿ ಕೆ ಸುರೇಶ್ ವಿರುದ್ಧ ನಿಲ್ಲಿಸಿದ್ದರಿಂದ ಅಲ್ಲಿ ಜೆಡಿಎಸ್ ಪಕ್ಷ ಹೆಚ್ಚು ಪ್ರಾಬಾಲ್ಯ ಇರುವುದರಿಂದ ಬಿಜೆಪಿ ಪಕ್ಷ ಅಷ್ಟೇನು ಪರಿಣಾಮ ಬೀರಲ್ಲ ಎಂದು ತಿಳಿದಿದ್ದರೂ ಮೈತ್ರಿಯಾದ ಸಂದರ್ಭ ನಮ್ಮ ಪಕ್ಷವನ್ನು ಬಲಹೀನ ಗೊಳಿಸಲು ಪೆನ್ ಡ್ರೈವ್ ಹಂಚಿಕೆ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ,
ಹೆಚ್ ಡಿ ರೇವಣ್ಣ ಅವರ ಮೇಲೆ ಯಾವುದೇ ದಾಖಲೆ ಇಲ್ಲದೇ ಇದ್ದರೂ ಎಸ್ ಐ ಟಿ ಯವರು ರೇವಣ್ಣ ಅವರನ್ನು ಬಂಧಿಸಿದ್ದರು ಇದರಿಂದ ಜೆಡಿಎಸ್ ಕಾರ್ಯಕರ್ತರ ಶಕ್ತಿ ಕುಗ್ಗುತ್ತದೆ, ಜೆಡಿಎಸ್ ಪಕ್ಷ ಕುಸಿಯುತ್ತದೆ ಎಂದು ಬಾವಿಸಿದ್ದಾರೆ ಆದರೆ ಹಗರಣದ ತಿರುವುವನ್ನು ಕರ್ನಾಟಕದ ಜನತೆನೋಡಿದೆ, ಕಾನೂನಿಗೆ ಎಲ್ಲರೂ ಒಂದೇ ಪ್ರಜ್ವಲ್ ಭಾರತಕ್ಕೆ ಬಂದು ತನಿಖೆಗೆ ಸ್ಪಂದಿಸಬೇಕು ಎಂದು ಹೈಕಮಾಂಡ್ ಹೇಳಿದೆ, ಶಿವಲಿಂಗಗೌಡ ಮಂತ್ರಿಯಾಗಬೇಕೆಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರನ್ನು ಓಲೈಕೆ ಮಾಡಲು ಮಾತನಾಡುತ್ತಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಸಿ ಬಿ ಐ ಗೆ ವಹಿಸಬೇಕೆಂದು ಅಗ್ರಹಿಸುತ್ತಿದ್ದೇವೆ ಎಂದರು.
ಜೆಡಿಎಸ್ ಮುಖಂಡ ಲೋಕಪ್ಪಾಗೌಡ ಮಾತನಾಡಿ ಜೂನ್ ಮೂರರಂದು ನಡೆಯಲಿರುವ ದಕ್ಷಿಣ ಪದವಿ ಶಿಕ್ಷಕರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರು ಅಭ್ಯರ್ಥಿಯಾಗಿದ್ದು ಒಟ್ಟು ನಾಲ್ಕು ಜಿಲ್ಲೆ ಈ ಚುನಾವಣೆಗೆ ಸೀಮಿತವಾಗಿದ್ದು ಹಾಸನ ಜಿಲ್ಲೆಯಲ್ಲಿ ಒಟ್ಟು ಮೂರು ಸಾವಿರ ಶಿಕ್ಷಕ ಮತದಾರರಿದ್ದು ಬೇಲೂರು ತಾಲ್ಲೂಕ್ಕಿನಲ್ಲಿ 450 ಇದ್ದು ಅದರಲ್ಲಿ 250 ಶಿಕ್ಷಕ ಮತದಾರರು ಸ್ಥಳೀಯರಿದ್ದು ಹಾಸನ ಜಿಲ್ಲೆಯಲ್ಲಿ ನಮ್ಮ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ ಅಲ್ಲದೆ ಈ ಬಾರಿ ವಿವೇಕಾನಂದರ ಗೆಲುವು ಶತಸಿದ್ಧ,
ಪೆನ್ ಡ್ರೈವ್ ಹಗರಣ ಶಿಕ್ಷಕರ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,ಜೆಡಿಎಸ್ ಪಕ್ಷ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ, ಅದನ್ನು ಮನಗಂಡು ಮತದಾರರು ವಿದ್ಯಾವಂತರಿದ್ದು ನಮ್ಮ್ ಅಭ್ಯರ್ಥಿ ಗೆಲುವಿಗೆ ಸಹಕರಿಸಲಿದ್ದಾರೆ.ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಜಿಲ್ಲಾಧ್ಯಕ್ಷರು ಚಂದ್ರೆಗೌಡ, ತಾಲ್ಲೂಕು ಜೆಡಿಎಸ್ ಪ್ರದಾನಕಾರ್ಯದರ್ಶಿ ಸಿ ಹೆಚ್ ಮಹೇಶ್, ಎ ಪಿ ಎಂ ಸಿ ಮಾಜಿ ಅಧ್ಯಕ್ಷಅದ್ದೂರಿ ಕುಮಾರ್, ತಾಲ್ಲೂಕ್ ಪಂಚಾಯತಿ ಮಾಜಿ ಸದಸ್ಯ ಬೆಲ್ಲೇನಹಳ್ಳಿ ರವಿಕುಮಾರ್ ಸೇರಿದಂತೆ ಇತರರಿದ್ದರು.