ದೇವನಹಳ್ಳಿ: ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ನ್ಯಾಯ ಮತ್ತು ಸ್ವಾತಂತ್ರ ನೀಡಿದೆ ಎಂದು ಬಿಜ್ಜವಾರ ಗ್ರಾಮ ಪಂಚಾಯತಿ ಅಧ್ಯಕ್ಷ ಮಹದೇವಪ್ಪ ಹೇಳಿದರು.ಬಿಜ್ಜವಾರ ಗ್ರಾಪಂ ಮುಂಭಾಗದಲ್ಲಿ ಜಿಪಂ ಮಹಿಳಾ ಮತ್ತು ಮಕ್ಕಳ ಅಭಿ
ವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ.
ದೇಶದ ಪ್ರತಿಯೊಬ್ಬರಿಗೂ ಸಮಾನ ಮೂಲಭೂತ ಹಕ್ಕುಗಳಿವೆ ಪ್ರತಿಯೊಬ್ಬರೂ ಸಂವಿಧಾನ ಪ್ರಸ್ತಾವನೆ ಹಾಗೂ ಮೂಲಭೂತ ಹಕ್ಕುಗಳನ್ನು ಕಾನೂನಿನಡಿ ಸಿಗುವ ಸೌಲಭ್ಯಗಳು ಸಕಾಲದಲ್ಲಿ ಪಡೆದುಕೊಳ್ಳ ಬಹುದು. ಮೂಲಭೂತ ಕರ್ತವ್ಯಗಳನ್ನು ಸಹ ಕಡ್ಡಾಯ ವಾಗಿ ಪಾಲಿಸಿದರೆ ದೇಶದ ಸಂವಿಧಾನ ಪರಿಕಲ್ಪನೆಯನ್ನು ಪ್ರಸಕ್ತ ಗೊಳಿಸಬಹುದು ಎಂದು ತಿಳಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆಯ ನೀಡುವ ಮೂಲಕ ಪಂಚಾಯಿತಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಾರ್ಯ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪ್ರೇಮಾ. ತಾಲೂಕಿನ ಸಹಾಯಕ ನಿರ್ದೇಶಕಿ ನಳಿನಾಕ್ಷಿ ಸತೀಶ್. ನೂಡಲ್ ಅಧಿಕಾರಿ ಪ್ರಭಾಕರ್, ಪಂಚಾಯಿತಿ ಪಿಡಿಒ. ಪಂಚಾಯಿತಿ ಸಿಬ್ಬಂದಿ ಹಾಗೂ ಊರಿನ ಗ್ರಾಮಸ್ಥರು ಇದ್ದರು.