ನೆಲಮಂಗಲ: ಮಹಿಳಾ ಸಾಹಿತಿಗಳಿಗೆ ಹಾಗೂ ತುಳಿತಕ್ಕೆ ಒಳಗಾದವರ ಪರ ಮಾತನಾಡಿ ಗೆಲುವು ಸಾದಿಸುತ್ತಿದ್ದರು ಅನ್ಯಾಯಾದ ವಿರುದ್ಧ ಸಮಾನತೆಗಾಗಿ ದ್ವನಿ ಎತ್ತುವವರಾಗಿದ್ದರು ನಾಡೋಜ ಸಾಹಿತಿ ಕಮಲ ಹಂಪನಾ ಎಂದು ಹಿರಿಯ ಇತಿಹಾಸ ಸಂಶೋಧಕ ಡಾ.ಎಚ್. ಎಸ್.ಗೋಪಾಲರಾವ್ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಆಯೋಜಿಸಿದ್ದ ಶ್ರದ್ದಾoಜಲಿ ಕಾರ್ಯಕ್ರಮ ದಲ್ಲಿ ಸಂತಾಪ ಸಲ್ಲಿಸಿ ಡಾ, ಕಮಲ ಹಂಪನಾ ಅವರ ಸಮಚಿತ್ತದ ಬಾಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ವಾಗಿದ್ದು ಸಾಹಿತ್ಯಲೋಕದ ಮಹಿಳಾ ಮುತ್ಸದ್ದಿ ತನದಿಂದ ಮಹಿಳಾ ಸಾಹಿತಿಗಳಿಗೂ ಮಾರ್ಗದರ್ಶಕರಾಗಿ ಕಾಣ ಸಿಗುತಿದ್ದರು ಅವರ ನಿಧನದಿಂದ ಸಾಹಿತ್ಯ ಮತ್ತು ಸಾಮೂಸ್ಕೃತಿಕ ಲೋಕ ಬಡವಾಗಿದೆ ಎಂದು ಸಂತಾಪ ಸೂಚಿಸಿದ್ದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಏನ್ ಜಿ ಗೋಪಾಲ್ ಮಾತನಾಡಿ ಮೆಲ್ಲಗೆ ಮಾತನಾಡುವ ಗಟ್ಟಿಗಿತ್ತಿ ಹುಟ್ಟಿದ್ದು ದೇವನಹಳ್ಳಿ ಯಲ್ಲಾದರೂ
ಅವರ ವಿವಾಹಕ್ಕೆ ಸಾಕ್ಷಿಯಾಗಿದ್ದು ಬಸವನಹಳ್ಳಿಯ ಲಕ್ಷ್ಮಿ ವೆಂಕಟೇಶ್ವರ ದೇವಾಲಯ ಅವರ ಬಂದುಗಳು ಇಲ್ಲಿದ್ದು ಅವರಿಗೆ ನೆಲಮಂಗಲ ಅಂದರೆ ಅಚ್ಚುಮೆಚ್ಚು ಎಂದು ಸ್ಮರಿಸಿದರು.
ಪುಷ್ಪ ನಮನ: ಅನಾರೋಗ್ಯದಿಂದ ಮೃತ ಪಟ್ಟ ಸಾಹಿತಿ ಡಾ. ಕಮಲಾಹಂಪನಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚಾರಣೆ ಸಲ್ಲಿಸಿದರು.
ಸಂದರ್ಭದಲ್ಲಿ ಸಾಹಿತಿ ಡಾ.ಚೌಡಯ್ಯ, ಕನ್ನಡ ಸಾಹಿತ್ಯ ಈ ಸಂದರ್ಭದಲ್ಲಿ ನಿವೃತ್ತ ಡಿಡಿಪಿಐ ಎಂ ವಿ ನೆಗಳೂರು. ಡಾ ಚೌಡಯ್ಯ, ನಿಕಟ ಪೂರ್ವ ಕಸಾಪ ಅಧ್ಯಕ್ಷರಾದ ಬಿ ಆರ್ ಪ್ರದೀಪ್ ಕುಮಾರ್, ಕಸಾಪ ನಗರಾಧ್ಯಕ್ಷ ಮಲ್ಲೇಶ್, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸದಾನಂದ ಆರಾಧ್ಯ, ವೀರಸಾಗರ ಭಾನುಪ್ರಕಾಶ್, ಚಿಕ್ಕಮಾರನಹಳ್ಳಿ ದಿನೇಶ್ ರಮೇಶ್ ಇನ್ನಿತರಿದ್ದರು.