ದೇವನಹಳ್ಳಿ: ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಹಕಾರ ನೀಡಿದರೆ ಸಮಸ್ಯೆ ಬಗೆಹರಿಸಲು ಸಹಕಾರಿಯಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ಕಮಲೇಶ್ ಹೇಳಿದರು.
ದೇವನಹಳ್ಳಿ ತಾಲೂಕು ಗಂಗವಾರ ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿಯ 2023 24ನೇ ಸಾಲಿನ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿ ಗ್ರಾಮಗಳಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಮಾಡುವುದಕ್ಕೆ ಗ್ರಾಮಸ್ಥರು ಅಕ್ಕ ಪಕ್ಕದ ನಿವಾಸಿಗಳು ಅಡೆತಡೆ ಮಾಡುವುದನ್ನು ನಿಲ್ಲಿಸಬೇಕು ಎಲ್ಲರೂ ಸಹಕಾರ ಕೊಟ್ಟರೆ ಉದ್ಯೋಗ ಖಾತ್ರಿ ಸೇರಿದಂತೆ ಇನ್ನು ಮುಂತಾದ ಅನುದಾನಗಳಲ್ಲಿ ಗ್ರಾಮಗಳ ಅಭಿವೃದ್ಧಿ ಮಾಡುತ್ತೇವೆ.
ಈಗಾಗಲೇ ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲ ಗ್ರಾಮಗಳ ಮನೆಯ ಜಾಗಗಳನ್ನು ಸರ್ವೆ ಮಾಡಿ ಪಂಚಾಯತಿಯಲ್ಲಿ ನೋಂದಣಿ ಮಾಡಲಾಗಿದೆ ಗ್ರಾಮಗಳಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯಬೇಕಾದರೆ ರಾಜಕೀಯ ಬೆಳೆಸದಂತೆ ನೋಡಿಕೊಂಡರೆ ಕೆಲಸ ಕಾರ್ಯಗಳಾಗುತ್ತವೆ ಗ್ರಾಮ ಪಂಚಾಯಿತಿಯಿಂದ ಮೊದಲು ಗ್ರಾಮಗಳಿಗೆ ಕುಡಿಯುವ ನೀರು ಆರೋಗ್ಯ ಶಿಕ್ಷಣ ಸ್ವಚ್ಛತೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದರು.
ಚನ್ನರಾಯಪಟ್ಟಣ ಉಪತಾಸಿಲ್ದಾರ್ ಸುರೇಶ್ ಮಾತನಾಡಿ ಈಗಾಗಲೇ ಪೌತಿ ಖಾತೆಗಳು ಮಾಡುವುದಕ್ಕೆ ಸರ್ಕಾರ ಆದೇಶವಾಗಿದೆ ಸರಿಯಾದ ದಾಖಲೆಗಳನ್ನು ನೀಡಿದರೆ ಪೌತಿ ಖಾತೆ ಮಾಡುತ್ತೇವೆ ಪೋಡಿ ಮುಕ್ತ ಗ್ರಾಮಗಳು ಮಾಡಬೇಕೆಂದು ಚೌಡಪ್ಪನಹಳ್ಳಿ ಲೋಕೇಶ್ ಅವರು ಹೇಳಿದ್ದಾರೆ ಅದರಂತೆ ಈಗಾಗಲೇ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಂತಾಂತವಾಗಿ ಮಾಡಲಾಗುತ್ತಿದೆ ಸ್ಮಶಣಗಳಿಗೆ ದಾರಿ ಇಲ್ಲದೆ ಇರುವ ಸಂಬಂಧಪಟ್ಟಂತೆ ಅರ್ಜಿಗಳ ಮುಖಾಂತರ ಮಾಹಿತಿ ನೀಡಿದ್ದಾರೆ ಸರ್ವೆ ನಡೆಸಿ ದಾರಿಯನ್ನು ಗುರುತಿಸಲಾಗುವುದು ದಾರಿ ಇಲ್ಲದ ಸ್ಮಶಾನಕ್ಕೆ ಅಕ್ಕ ಪಕ್ಕದ ಜಮೀನಿನವರಿಗೆ ಸರ್ಕಾರದಿಂದ ಹಣ ಮಂಜೂರು ಮಾಡಿ ದಾರಿ ನಿರ್ಮಿಸಿ ಕೊಡುವುದಕ್ಕೆ ಅವಕಾಶ ಇದೆ ಎಂದರು.
ಚೌಡಪ್ಪನಹಳ್ಳಿ ಲೋಕೇಶ್ ಮಾತನಾಡಿ ಗಂಗಾವರ ಚೌಡಪ್ಪನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳು ಮನೆಗಳ ಈ ಸ್ವತ್ತು ಖಾತೆ ಆಗಬೇಕು ಸರ್ಕಾರಿ ಜಮೀನು ಇರುವುದನ್ನು ಬಡವರಿಗೆ ಮನೆ ಕಟ್ಟಿಕೊಳ್ಳುವುದಕ್ಕೆ ಮಂಜೂರು ಮಾಡಿಕೊಡಬೇಕು ಇದರಿಂದ ಕುಟುಂಬದಲ್ಲಿ ಬೇರೆ ಹೋದ ವರೆಗೆ ಅನುಕೂಲವಾಗುತ್ತದೆ ಎಂದರು.
ಸಂದರ್ಭದಲ್ಲಿ ಉಪಾಧ್ಯಕ್ಷ ಲಕ್ಷ್ಮಮ್ಮ ಉಮೇಶ್, ಸದಸ್ಯರುಗಳಾದ ಚೈತ್ರ ಮನೋಹರ್ ರಾಜಣ್ಣ ಸೌಮ್ಯ ಅನಿಲ್ ಕುಮಾರ್ ನಾರಾಯಣಸ್ವಾಮಿ ಅಶ್ವಥ್ ನಾರಾಯಣ್ ಗೌರಮ್ಮ ನಾರಾಯಣಸ್ವಾಮಿ ಲಕ್ಷ್ಮಮ್ಮ ಗಂಗಾಧರ್ ಏ ಕುಮಾರ್ ದೇವರಾಜ್ ಪಿಡಿಒ ಶ್ರೀನಿವಾಸ್ ಸಿಆರ್ ಪಿ ಲೋಕೇಶ್ ನಿವೃತ್ತಿ ಕೈಗಾರಿಕಾ ಅಧಿಕಾರಿ ಬೈರೇಗೌಡ ಮಾಜಿ ಅಧ್ಯಕ್ಷ ರಾಜಣ್ಣ ಮನೋಹರ್, ತೋಟಗಾರಿಕೆಇಲಾಖೆ ಅಧಿಕಾರಿ ಕವಿತಾ ಪೂಜಾರಿ ಕೃಷಿ ಇಲಾಖೆ ಅಧಿಕಾರಿ ಸುನಿಲ್ ಹಾಗೂ ತಾಲೂಕಿನ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.