ಬೆಂಗಳೂರು: ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ನಲ್ಲಿ ಕ್ರಾಂತಿಯುಂಟಾಗುತ್ತದೆ ಎಂಬ ಸದ್ದು ಬಹಳ ದಿನಗಳಿಂದ ಕೇಳಿಬರುತ್ತಿದೆ.
ನವೆಂಬರ್ ತಿಂಗಳಿಗೆ ಇನ್ನು ೧೪-೧೫ದಿನಬಾಕಿಯಿದೆ. ಮುಖ್ಯಮಂತ್ರಿ ಬದಲಾವಣೆಯ ಮಾತು ಪ್ರಬಲವಾಗಿ ಕೇಳಿಬರುತ್ತಿದೆ. ಸಿದ್ದರಾಮಯ್ಯ ಸೇರಿದಂತೆ ಅವರ ಅತ್ಯಾಪ್ತರು ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಎಂದು ಹೇಳಿದರೆ ಡಿ.ಕೆಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಹಲವರು ಪ್ರತಿಯಾಗಿ ಹೇಳುತ್ತಿದ್ದಾರೆ.
ಇದೆಲ್ಲದರ ನಡುವೆ ಕಳೆದ ಎರಡು ಮೂರು ದಿನಗಳ ಹಿಂದೆ ಸಂಪುಟದಿಂದ ಉಚ್ಛಾಟನೆಯಾದ ಹಿರಿಯ ಶಾಸಕ ಕೆ.ಎನ್. ರಾಜಣ್ಣ ಕ್ರಾಂತಿಯೆಂಬುದು
ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿಲ್ಲ. ಪ್ರತಿಪಕ್ಷ ಬಿಜೆಪಿಯಲ್ಲೂ ಕ್ರಾಂತಿಯುಂಟಾಗಲಿದೆ ಎಂದು ಹೊಸ ಬಾಂಬ್ ಎಸೆದಿದ್ದಾರೆ. ಬಿಜೆಪಿಯಲ್ಲೂ ಎರಡು
ಗುಂಪುಗಳಿವೆ. ಒಂದು ಗುಂಪು ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಲು ಹಾತೊರೆಯುತ್ತಿದ್ದರೆ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ
ಕೆಳಗಿಳಿಸಲೆಬೇಕೆಂದು ಯತ್ನಿಸುತ್ತಿವೆ.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಮುಂದುವರಿಯಬಾರದು ಎಂದು ಒಂದುಗುಂಪು ಸಿದ್ದವಾಗಿ ಅವರನ್ನು ಪದುಚ್ಯುತಿಗೊಳಿಸಲು ಪ್ರಯತ್ನ ಮಾಡುತ್ತಲೇ ಇವೆ. ಆದರೆ ವಿಜಯರೇಂದ್ರರನ್ನು ಮುಂದುವರೆಸಲು ಮತ್ತೊಂದು ಬಣ ತೀವ್ರಯತ್ನ ನಡೆಸುತ್ತಿವೆ. ಮಾಜಿ
ಮುಖ್ಯಮಂತ್ರಿ ವಿಜಯೇಂದ್ರ ಅವರ ತಂದೆ ಬಿ.ಎಸ್.ಯಡಿಯೂರಪ್ಪ ವಿಜಯೇಂದ್ರರ ಬೆನ್ನಿಗೆ ನಿಂತಿದ್ದಾರೆ. ಮೊನ್ನೆ ಮಾಜಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ಪಕ್ಷದ ಹಿರಿಯ ಮುಖಂಡರಾಗಿದ್ದ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಇದೀಗ ಯಡಿಯೂರಪ್ಪ ಬಗ್ಗೆ ಮೃದುಧೋರಣೆ ತಾಳಿದ್ದಾರೆ.
ಅವರ ವಿರುದ್ಧ ತಾವೇನು ಹೆಚ್ಚಾಗಿ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಇದೀಗ ತಡವಾಯಿತು ಎಂದು ಸಿಸಿ ಪಾಟೀಲ್ ಹೇಳಿದ್ದಾರೆ. ಈ ಎಲ್ಲದರ ಮಧ್ಯೆ ಯಡಿಯೂರಪ್ಪ ಕಳೆದ ನಾಲ್ಕೈದು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿಯಾಗಿ
ಮಾತುಕತೆಯಾಡಿಸಿದ್ದಾರೆ. ಪಕ್ಷದ ಕೆಲಸದ ಮೇಲೆ ದೆಹಲಿಗೆ ಬಂದಿದ್ದ ಈ ನಡುವೆ ಪ್ರಧಾನಿ ಭೇಟಿಯಾಗಲು ಅವಕಾಶ ದೊರೆಯಲು ಭೇಟಿಯ ಸಮಯದಲ್ಲಿ ನಡೆದ ಮಾತುಕತೆ ಏನು ಎಂದು ತಿಳಿದುಬಂದಿಲ್ಲ.
ಒಟ್ಟಾರೆ ಬಿಜೆಪಿಯಲ್ಲೂ ಕ್ರಾಂತಿಯುಂಟಾಗುತ್ತದೆ ಎಂಬುದಕ್ಕೆ ಈ ಎಲ್ಲ ಬೆಳವಣಿಗೆಗಳು ಪುಷ್ಠಿ ನೀಡಿದಂತೆ ಇದೆ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಎರಡು ಕ್ರಾಂತಿಗೆ ನಾಂದಿಯಾಡಲಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಒಟ್ಟಾರೆ ನವೆಂಬರ್ ತಿಂಗಳಲ್ಲಿ ಕ್ರಾಂತಿಯೆಂಬುದು ನಡೆಯುತ್ತದೋ ಇಲ್ಲವೋ ಎಂಬುದು ಬೇರೆ ಮಾತು. ಮುಖ್ಯಮಂತ್ರಿ ಬದಲಾವಣೆ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಪಲ್ಲಟ ವಿಷಯ ಯಾವ ಹಂತ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಿದೆ.