ಬಾಗಲಕೋಟೆ: ಮಳೆ ಅಬ್ಬರಕ್ಕೆ ಮನೆ ಮೇಲ್ಚಾವಣಿ, ಗೋಡೆ ಕುಸಿದು ಬಾಲಕ ಸಾವನ್ನಪ್ಪಿರುವಂತಹಘಟನೆಜಿಲ್ಲೆಯ ಬಾಗಲಕೋಟೆಯರಬಕವಿ ಬನಹಟ್ಟಿತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ೫ ಗಂಟೆಗೆ ಮನೆಯ ಮೇಲ್ಚಾವಣಿ ಮತ್ತುಗೋಡೆ ಕುಸಿದುಬಿದ್ದು, ದರ್ಶನ್ ಲಾತೂರ(೧೧) ಮೃತಪಟ್ಟಿದ್ದಾನೆ. ಮತ್ತೋರ್ವ ಬಾಲಕ ಶ್ರೀಶೈಲ್ಗೆ ಗಂಭೀರ ಗಾಯಗಳಾಗಿವೆ.
ಮೃತದರ್ಶನ್ ಲಾತೂರ, ನಾಗಪ್ಪ ಲಾತೂರ್ಎಂಬುವವರ ಮಗ.ಮಹಾಲಿಂಗಪುರದಅAಬೇಡ್ಕರ್ ವೃತ್ತದ ಬಳಿ ಮನೆ ಇದ್ದು, ಇಬ್ಬರು ಮಕ್ಕಳು ಮನೆಯಕೋಣೆಯಲ್ಲಿತಾಯಿಯೊಂದಿಗೆ ಮಲಗಿದ್ದರು.ಬೆಳಗ್ಗೆ ತಾಯಿಎದ್ದು ಬೇರೆಕೊಠಡಿಗೆ ಬರುತ್ತಿದ್ದಂತೆಇತ್ತಗೋಡೆ ಕುಸಿದುಬಿದ್ದಿದೆ.
ಅವಘಡದಲ್ಲಿದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನುಗಾಯಗೊಂಡ ಬಾಲಕ ಶ್ರೀಶೈಲ್ಗೆ ಸರ್ಕಾರಿಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ.ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೆತ್ತ ಮಗನನ್ನು ಕಳೆದುಕೊಂಡ ಪೋಷಕರಆಕ್ರಂದನ ಮುಗಿಲುಮಟ್ಟಿದೆ.
ವಿಜಯಪುರಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದಜನರು ತತ್ತರಿಸಿದ್ದಾರೆ. ಆಲಮೇಲ ತಾಲೂಕಿನತಾವರಖೇಡಗ್ರಾಮದಲ್ಲಿ ಭೀಮಾ ನದಿ ಪ್ರವಾಹದಿಂದ ಮನೆಗಳು ಜಲಾವೃತಗೊಂಡಿದೆ.ಪ್ರವಾಹ ಸ್ಥಿತಿಯ ನಡುವೆಯೂತೋಟದಲ್ಲಿ ಕುಟುಂಬಗಳು ವಾಸವಿದ್ದರು.ತೋಟದ ಮನೆಗಳಲ್ಲಿದ್ದ ೮ ಜನರನ್ನು ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಕಲಬುರಗಿಜಿಲ್ಲೆಯಲ್ಲಿಧಾರಾಕಾರ ಮಳೆ ಮುಂದುವರೆದಿದ್ದು, ಜಿಲ್ಲೆಯ ಚಿಂಚೋಳಿ ತಾಲೂಕಿನ ಮುಲ್ಲಾಮಾರಿಜಲಾಶಯದಿಂದಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ.ಹೀಗಾಗಿ ಗ್ರಾಮಗಳಿಗೆ ಸಂಪರ್ಕಕಲ್ಪಿಸುವ ೨ ಕಿರು ಸೇತುವೆಗಳು ಮುಳುಗಡೆ ಆಗಿವೆ. ನಿನ್ನೆಯಿಂದರಸ್ತೆ ಸಂಪರ್ಕಕಡಿತ ಹಿನ್ನೆಲೆಗ್ರಾಮಸ್ಥರು ಪರದಾಡುವಂತಾಗಿದೆ