ದೊಡ್ಡಬಳ್ಳಾಪುರ: ನಗರಕ್ಕೆ ಹೊಂದಿಕೊಂಡಿರುವ ಪಾಲನಜೋಗಿಹಳ್ಳಿ ಕೆರೆಯಲ್ಲಿ ಭಾನುವಾರ ಮೀನು ಹಿಡಿಯಲು ನೀರಿಗಿಳಿದ ನಗರದ ಸಹಜಾನಂದನಗರದ ಪ್ರಕಾಶ್ (45) ಎಂಬ ವ್ಯಕ್ತಿ ಮೃತ ಪಟ್ಟ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಮದ್ಯ ಸೇವಿಸಲು ಸ್ನೇಹಿತರ ಜೋತೆ ಅಲ್ಲಿಗೆ ಬಂದಿದ್ದ ಇವರು ಮದ್ಯದ ಸೇವನೆ ಮಾಡಿ ನಶೆಯಲ್ಲಿ ಮೀನು ಹಿಡಿಯಲು ನೀರಿಗೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ, ಜೋತೆಗೆ ಮಣ್ಣು ತೆಗೆದು ಹೂಳು ತುಂಬಿದ್ದ ಜಾಗದಲ್ಲಿ ಸಿಕ್ಕಿ ಹಾಕಿಕೊಂಡು ಮೃತಪಟ್ಟಿರಬಹುದು.
ಆತನ ಶವ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.