ಬೆಂಗಳೂರು: ಚಲನಚಿತ್ರೋತ್ಸವದಲ್ಲಿ ಯಾವ ಚಿತ್ರ ತೋರಿಸಬೇಕು ಅಂತ ಸಂಬಂಧಿಸಿದ ಇಲಾಖೆ ತೀರ್ಮಾನ ಮಾಡುತ್ತೆ. ಪ್ಯಾಲೆಸ್ಟ್ಯೆನ್ ಚಿತ್ರಗಳ ನಿರ್ಬಂಧ ಬಗ್ಗೆ ಮೇಲೆ ನಿರ್ಧಾರ ಆಗಿರುತ್ತೆ. ಆದರೆ, ನಮ್ಮಲ್ಲಿ ಇಬ್ಬರು ವಿರೋಧ ಮಾಡಿದ್ದಾರೆ, ಅವರದ್ದು ಸಂಕುಚಿತ ಮನೋಭಾವ, ಬಾಂಗ್ಲಾ ನರಮೇಧ ಬಗ್ಗೆ, ಪಾಕಿಸ್ತಾನದಲ್ಲಿನ ನರಮೇಧ ಬಗ್ಗೆಯೂ ಚಿತ್ರಗಳ ಪ್ರದರ್ಶನ ಮಾಡಿ ಅಂತ ಇವರ್ಯಾಕೆ ಹೇಳಲ್ಲ ಎಂದು ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರಶ್ನಿಸಿದರು.
ಎಡಪಂಥೀಯರ ಮಾತು ಯಾವಾಗಲೂ ಇದೇ ರೀತಿ ಇರುತ್ತೆ ಪ್ಯಾಲೆಸ್ಟ್ಯೆನ್ ಚಿತ್ರಗಳಿಗೆ ನಿರ್ಬಂಧ ನಿರ್ಧಾರ ಸರಿ ಇದೆ. ಪಾಕ್ ಪರ ಘೋಷಣೆ ಕೂಗಿದ ಕೇಸ್ ಗಳಲ್ಲಿ ಶಿಕ್ಷೆ ಆಗದ ವಿಚಾರ. ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡ್ತಿದೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ರು, ಮಾತಾಡದವರಿಗೆ ನೊಟೀಸ್ ಕೊಡ್ತಾರೆ. ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ತನಿಖೆ ಮುಗಿಸಿ ಕ್ರಮ ಆಗಬೇಕಿತ್ತು, ಆದರೆ ಆಗಿಲ್ಲ, ಹಾಗೇ ಮ್ಯಾನೇಜ್ ಮಾಡಿ ಅಂತ ಪೊಲೀಸರಿಗೆ ಸರ್ಕಾರ ಸೂಚಿಸಿದೆ. ಇದುವರೆಗೆ ಕ್ರಮ ಆಗಿಲ್ಲ, ಇದೇ ಅಲ್ಪಸಂಖ್ಯಾತರ ತುಷ್ಟೀಕರಣ. ಈ ಸರ್ಕಾರದಿಂದ ಇದೆಲ್ಲವನ್ನೂ ನಾವು ನಿರೀಕ್ಷೆ ಮಾಡಿದೀವಿ ಎಂದರು.



