ಬಂಗಾರಪೇಟೆ: ತಾಲೂಕಿನ ಮೊದಲ ಬಾರಿಗೆ ಸರ್ವಜ್ಞ ಪುತ್ಥಳಿಯ ಲೋಕಾರ್ಪಣೆ ಮಾಡಿರುವುದು ಐತಿಹಾಸಿಕ ಮೈಲುಗಲ್ಲಿಗೆ ಸಾಕ್ಷಿಯಾಗಿದೆ ಎಂದು ಶಾಸಕ ಎಸ್ ಎನ್ ನಾರಾಯಣ ಸ್ವಾಮಿ ಅಭಿಪ್ರಾಯ ಪಟ್ಟರು.
ತಾಲೂಕು ಆಡಳಿತ ಹಾಗೂ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಕುಂಬಾರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸರ್ವಜ್ಞ ಜಯಂತಿ ಪ್ರಯುಕ್ತ ಕುಂಬಾರ ಪಾಳ್ಯ ಮುಖ್ಯರಸ್ತೆಯಲ್ಲಿ ಸರ್ವಜ್ಞ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ನಂತರ ಪುರಸಭಾ ಆವರಣದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.
ಸಣ್ಣ ಸಮುದಾಯಗಳ ಮೇಲೆ ಬಲಿಷ್ಠರ ದಬ್ಬಾಳಿಕೆ ನಿರಂತರವಾಗಿ ನಡೆದಿದೆ ಸರ್ವಜ್ಞರು ಸರ್ವರೊಳ್ಳು ಅನುಭವಗಳನ್ನು ಪಡೆದೆ ವಿದ್ಯೆಗಳಿಸಿ ಸಮಾಜ ಮೌಢ್ಯಗಳನ್ನು ತೊಡೆದುಹಾಕಲು ಸಾಮಾಜಿಕ ಕ್ರಾಂತಿ ಸಾರಿದ ತ್ರಿಪದಿಯ ಬ್ರಹ್ಮ ಸರ್ವಜ್ಞ ಎಂದರು.
ಸಣ್ಣ ಸಮುದಾಯಗಳು ಒಗ್ಗಟ್ಟಿನಿಂದ ಜೀವಿಸುವಂತಾಗಬೇಕು ಆಗ ಮಾತ್ರ ನಮ್ಮ ಬೇಡಿಕೆಗಳು ಈಡೇರಲು ಸಾಧ್ಯ ಎಂಬುದಕ್ಕೆ ಇಂದು ಲೋಕಾರ್ಪಣೆಗೊಂಡ ಸರ್ವಜ್ಞ ಪುತ್ಥಳಿ ಉದಾಹರಣೆಯಾಗಿದೆ, ಹುಟ್ಟು ಹಾಗೂ ಸಾವು ಸಹಜ ಪ್ರಕ್ರಿಯೆ ಆದರೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳು ಮಾತ್ರ ಸ್ಥಿರ ಸ್ಥಾಯಿಯಾಗಿರುತ್ತದೆ
ಕುಂಬಾರ ಸಮುದಾಯಕ್ಕೆ ೧೫ ದಿನಗಳ ಒಳಗಾಗಿ ಜಮೀನು ಮಂಜೂರು: ಕುಂಬಾರ ಸಮುದಾಯಕ್ಕೆ ೧೫ ದಿನಗಳ ಒಳಗಾಗಿ ಜಮೀನು ಮಂಜೂರು ಮಾಡಲಾಗುವುದು, ಹಾಗೂ ನರಸಭೆ ಚುನಾವಣೆಯಲ್ಲಿ ೧ ಸ್ಥಾನದಲ್ಲಿ ಸ್ಪರ್ಧೆ ಮಾಡಲಕ ಅವಕಾಶ ಕಲ್ಪಿಸಲಾಗುವುದು, ಇದರೊಟ್ಟಿಗೆ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಆಧ್ಯತೆ ಮೇರೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು, ಕುಂಬಾರ ಸಮುದಾಯ ಸರ್ಕಾರದ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಸಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ರಾಜಕೀಯ ಆಸ್ಥಿತ್ವಕ್ಕೆ ಭಧ್ರ ತಲಹದಿ :
ಕುಂಬಾರ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು ಕೊಳವೆಬಾವಿ, ಸ್ವಾವಲಂಬಿ ಬದುಕಿಗೆ ಸಾರಥಿ ಯೋಜನೆಯಡಿಯಲ್ಲಿ ವಾಹನ ಸೌಲಭ್ಯ ನೀಡಲಾಗುತ್ತಿದೆ ವಿಪರ್ಯಾಸ ಯಾರು ಅರ್ಜಿ ಹಾಕುತ್ತಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕುಂಬಾರ ಸಮುದಾಯದ ರಾಜಕೀಯ ಅಸ್ಥಿತ್ವಕ್ಕೆ ಭದ್ರ ತಲಹದಿ ಹಾಕುವ ನಿಟ್ಟಿನಲ್ಲಿ ಕುಂಬಾರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ನಮ್ಮದೇ ಜಿಲ್ಲೆಯವರಾದ ಶ್ರೀನಿವಾಸ್ ರವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೂ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮತ್ತು ಪುರಸಭಾ ಉಪಾಧ್ಯಕ್ಷ ರನ್ನಾಗಿ ಮಾಡಲಾಗಿದೆ ಎಂದರು.
ಸರ್ವಜ್ಞ ವಚನಗಳು ಸಾರ್ವಕಾಲಿಕ ಸತ್ಯವಾಗಿದೆ: ಸರ್ವಜ್ಞ ತನ್ನ ಸರಳ ಭಾಷೆಯ ಮೂಲಕ ೧೪೦೦ ತ್ರಿಪದಿಗಳನ್ನು ರಚಿಸಿ ಜಾತಿ ವ್ಯವಸ್ಥೆಯ ಅಂದಕಾರವನ್ನು ಹೊಗಳಾಡಿಸಿದರು, ನಿಸರ್ಗದತ್ತವಾಗಿ ಬಂದ ಭೂಮಿ, ಗಾಳಿ, ಬೆಂಕಿ ಸರ್ವರಿಗೂ ಒಂದೇ ಆಗಿರುವಾಗ ನಶ್ವರವಾದ ಮಾನವನು ಜಾತಿ ಹೆಸರಿನಲ್ಲಿ ತಾರತಮ್ಯ ಮಾಡುವುದು ಸಮಂಜಸವಲ್ಲ ಎನ್ನುವುದರ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಾಮಾಜಿಕ ಕ್ರಾಂತಿ ಸಾರಿದರು ಎಂದರು
ಮಾನವತಾ ಸಂದೇಶದ ಹರಿಕಾರ ಸರ್ವಜ್ಞಾ: ಮುಖ್ಯ ಭಾಷಣಕಾರ ರಾಜಪ್ಪ ಮಾತನಾಡಿ ತಂದೆ ತಾಯಿ ಗುರುಗಳು ಎಡವಿದರೆ ಇಡೀ ಸಮಾಜವೇ ಅವನತಿಯ ಹಂತ ತಲುಪುತ್ತದೆ ಎನ್ನುವುದು ರೊಂದಿಗೆ ಜಾತಿವ್ಯವಸ್ಥೆಯ ವಿರುದ್ಧ ಸಾಮಾಜಿಕ ಕ್ರಾಂತಿ ಸಾರಿದ ತ್ರಿಪದಿಯ ಬ್ರಹ್ಮ ,ಸರ್ವಜ್ಞ ಶ್ರೇಷ್ಠ ವಚನಕಾರ, ದಾರ್ಶನಿಕ, ಕವಿ, ತ್ರಿಪದಿ ಚಕ್ರವರ್ತಿಯಾಗಿ ಜಾತಿ, ಮತ, ಧರ್ಮ ಸಂಘರ್ಷದ ವಿರುದ್ಧ ಮತ್ತು ಮೂಢನಂಬಿಕೆ, ಶೋಷಣೆಗಳನ್ನು ಕಟುವಾಗಿ ಟೀಕಿಸಿ ವಿಶ್ವಕ್ಕೆ ಮಾನವತಾ ಸಂದೇಶ ಸಾರಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೆ.ಚಂದ್ರಾರೆಡ್ಡಿ, ಗೌರವಾಧ್ಯಕ್ಷರಾದ ಆದಿನಾರಾಯಣಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್,ಮುನಿರಾಜು, ಮಾಜಿ ಪುರಸಭಾ ಉಪಾಧ್ಯಕ್ಷೆ ಚಂದ್ರವೇಣಿ ಮಂಜುನಾಥ್, ಮಾಜಿ ಪುರಸಭಾ ಅಧ್ಯಕ್ಷ ಗೋವಿಂದಾ , ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಆ,ನಾ,ಹರೀಶ್, ಕಾಂಗ್ರೆಸ್ ಮುಖಂಡ ಮಾದಮಂಗಳ ಮುನಿರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ, ತಹಸಿಲ್ದಾರ್ ಸುಜಾತಾ , ಸಂಘದ ಖಜಾಂಚಿ, ಜಯರಾಂ, ಎಸ್ ತ್ರಿಲೋಕಚಂದ್ರ, ವಕೀಲರಾದ ಸೂರ್ಯಪ್ರಸಾದ್, ಅನಿಲ್ ಕುಮಾರ್ , ಪತ್ರಕರ್ತರಾದ ರಾಮಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸವಿತಾ ಬಾಬು , ಕಾರೇಹಳ್ಳಿ ಶ್ರೀನಿವಾಸ್, ಅಂಬೇಡ್ಕರ್ ಪ್ರಚಾರ ಸಮಿತಿ ಅಧ್ಯಕ್ಷ ಬಾಬು, ಬಿಇಒ ಶಶಿಕಲಾ, ಶಿಕ್ಷಕರಾದ ರಾಜಪ್ಪ ಮುಖಂಡರಾದ ಜಗದೀಶ್, ಪುರಸಭಾ ಸದಸ್ಯ ಬಾಳೆಹಣ್ಣು ವೆಂಕಟೇಶ್, ನಗರಸಭೆ ಆಯುಕ್ತರಾದ ಸತ್ಯನಾರಾಯಣ, ಪೊಲೀಸ್ ಇನ್ಸೆ÷್ಪಕ್ಟರ್ ರವಿಕುಮಾರ್, ಚಿನ್ನಿವೆಂಕಟೇಶ್, ತ್ಯಾಗರಾಜು, ಶಿವಕುಮಾರ್ ಸೇರಿ ಇತರರು ಉಪಸ್ಥಿತರಿದ್ದರು.
ಸರ್ವಜ್ಞ ಪುತ್ಥಳಿಯ ಲೋಕಾರ್ಪಣೆ ಐತಿಹಾಸಿಕ ಮೈಲುಗಲ್ಲಿಗೆ ಸಾಕ್ಷಿ



