ದೇವನಹಳ್ಳಿ : ರಾಜ್ಯದಲ್ಲಿ ವಾಲ್ಮೀಕಿ ಬಲಿಷ್ಠವಾಗಿದೆ ಸರ್ಕಾ ರವು ಕೂಡ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಯನ್ನು ಹೆಚ್ಚಿಸುವ ಅನಿವಾರ್ಯವಿದೆ ಕೆಲ ದಿನಗಳ ಹಿಂದೆ ಸರ್ಕಾರಿ ನೌಕರರ ಮೀಸಲಾತಿ ಒಂಬತ್ತಿಯನ್ನು ರಾಜ್ಯ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಹಾಗೆ ಶೇಕಡ 15 ರಿಂದ 17 ಪರಿಶಿಷ್ಟ ಪಂಗಡಕ್ಕೆ ಶೇ 3 ರಿಂದ. 7.5 ಕ್ಕೆ ಮೀಸಲಾತಿ ಯನ್ನು ಹೆಚ್ಚಿಸುವ ಮೂಲಕ ಜನಾಂಗದ ಅಭಿವೃದ್ಧಿಗೆ ಸಹಕರಿ ಸಬೇಕೆಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮಿ ಅಭಿಪ್ರಾಯಿಸಿದರು.
ತಾಲೂಕು ಚಿಕ್ಕ ತತ್ತಮಂಗಲ ಗೇಟ್ ಬಳಿ ವಾಲ್ಮೀಕಿ ಸಮುದಾಯದ ಮುಖಂಡರು ಆಯೋಜಿಸಿದ್ದ ಅಭಿ ನಂದನಾ ಸಭೆಯಲ್ಲಿ ಮಾತನಾಡಿದ ಅವರು, ದೇವನ ಹಳ್ಳಿ ತಾಲೂಕಿನ ವಿಜಯಪುರದಲ್ಲಿ ಮಹರ್ಷಿ ವಾಲ್ಮೀಕಿ ದೇವಸ್ಥಾನ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ತೆರಳುತಿ ದ್ದೇನೆ. ತತ್ತಮಂಗಲ ರಮೇಶ್ ಅವರು ಉತ್ತಮ ರೀತಿಯಲ್ಲಿ ಜನಾಂಗ ವನ್ನು ಸಂಘಟಿಸುತ್ತಿದ್ದಾರೆ ಅವರಂತೆ ಉಳಿದವರು ಕೂಡ ಜನಾಂಗ ಸಂಘಟಿಸಿ ಆರ್ಥಿಕ ಸಾಮಾಜಿಕ ಶೈಕ್ಷಣಿಕ ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಶ್ರಮಿಸಬೇಕೆಂದರು.
ಎಸ್ ಟಿ ಭಾಗದ ಕೆಪಿಸಿಸಿ ಸದಸ್ಯ ದೊಡ್ಡ ತತ್ತಮಂಗಲ ರಮೇಶ್ ಅವರು ಮಾತನಾಡಿ, ಜನಾಂಗದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇಂತಹ ಧಾರ್ಮಿಕ ಕಾರ್ಯಕ್ರಮ ಗಳಿಗೆ ಮೆರುಗು ತರುವ ಕೆಲಸವಾಗಬೇಕು. ನಮ್ಮ ದಿನ ಸಮುದಾಯ ರಾಜಕೀಯವಾಗಿ ಸಾಕಷ್ಟು ಹಿಂದುಳಿದಿದೆ ಹಾಗಾಗಿ ನಮ್ಮ ಸಮುದಾಯಗಳು ವಾಸವಿರುವ ಗ್ರಾಮಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಜನಾಂಗದ ಎಲ್ಲರನ್ನು ಸಂಪರ್ಕಕ್ಕೆ ತೆಗೆದು ಕೊಂಡು ಮುಂದಿನ ದಿನಗಳಲ್ಲಿ ಶ್ರೀಗಳ ಅಧ್ಯಕ್ಷತೆಯಲ್ಲಿ ಸರ್ಕಾರದಿಂದ ಆಗುವ ಅಭಿವೃದ್ಧಿಯ ಕೆಲಸಗಳಿಗೆ ಸಂಘಟನೆಯ ಒಗ್ಗಟ್ಟಿನಿಂದ ಗೆಲುವು ಪಡೆಯಲು ಸಾಧ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟ ಶಶಿಕುಮಾರ್,ಯುವ ಕಾಂಗ್ರೆಸ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಮಾಜಿ ಅಧ್ಯಕ್ಷ ವಿಜಯಕುಮಾರ್, ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿಯಪ್ಪ, ಜನಾಂಗದ ಮುಖಂಡ ರಾದ ದೇವರಾಜು, ಯಲಿಯೂರು ರಮೇಶ್ ಸೇರಿದಂತೆ ನೂರಾರು ವಾಲ್ಮೀಕಿ ಸಮುದಾಯದ ಕಾರ್ಯಕರ್ತರು ಭಾಗವಹಿಸಿದ್ದರು.