ಕನಕಪುರ: ತಾಲೂಕಿನ ಕಸಬಾ ಹೋಬಳಿ ಚೀರಣಕುಪ್ಪೆ ಗ್ರಾಮದಲ್ಲಿ ಬಸವೇಗೌಡರ ಮಗ ಮರಿಗೌಡರ ಮನೆ ಯಿಂದ ಬಸವೇಗೌಡರ ಮಗ ನಾಗರಾಜುರವರ ಮನೆ ಯವರೆಗೆ ಉತ್ತರ,ದಕ್ಷಿಣ ಅಭಿಮುಖವಾಗಿ ಚರಂಡಿ ಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಚರಂಡಿ ನೀರು ಮುಂದೆ ಹರಿದು ಹೋಗದೆ ನಾಗರಾಜು ಅವರ ಮನೆಯ ಬಳಿ ನಿಂತು ರೋಗರುಜಿನಗಳಿಗೆ ಆಸ್ಪದ ನೀಡುತ್ತಿದೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ದೂರು ನೀಡಿದರು ಏನು ಪ್ರಯೋಜನ ವಾಗದೆ ಇದ್ದ ಸಂದರ್ಭದಲ್ಲಿ ಗ್ರಾಮದ ಶ್ರೀರಾಮ ಸೇನಾ ಜಿಲ್ಲಾ ಮುಖಂಡ ನಾಗಾರ್ಜುನ್ ನೇತೃತ್ವದಲ್ಲಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ, ಕನಕಪುರತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ದೂರನ್ನು ದಾಖಲಿಸಿದ್ದ ಹಿನ್ನೆಲೆ ಯಲ್ಲಿ ಆರ್ ಡಬ್ಲ್ಯೂಎಸ್ ನ ಕಾರ್ಯನಿರ್ವಾಹಕ ಅಭಿಯಂತರ ರು ಗ್ರಾಮಸ್ಥರ ಸಮ್ಮುಖದಲ್ಲಿ ಬಗೆಹರಿಸಲಾಗಿದೆ ಎಂದು ಹೇಳಿ ಅರ್ಜಿಯನ್ನು ವಿಲೆ ಮಾಡಿದ್ದರು.
ಕೆಲ ದಿನಗಳ ನಂತರ ಸರ್ಕಾರದಿಂದ ನಾಗರ್ಜುನ ಗೌಡ ರವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ ವೇಳೆ ಅಧಿಕಾರಿಗಳು ಸುಳ್ಳು ಹೇಳಿದ್ದಾರೆ ಎಂದು ತಿಳಿದು ದೂರಿ ನ ಪ್ರಕರಣವನ್ನು ಪುನಃ ಪರೀಶೀಲನೆ ನಡೆಸುವಂತೆಸೂಚಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಮೋಜಿನದಾರ ರು ಹಾಗೂ ಚಾಕನಹಳ್ಳಿ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ನೌಕರ, ಕರ ವಸೂಲಿಗಾರ,ನೀರುಗಂಟಿ ಬಂದು ಸರ್ವೆ ಕಾರ್ಯ ನಡೆಸಿ ಗ್ರಾಮಸ್ಥರುಗಳಾದ ನಮ್ಮಗಳಲ್ಲಿ ಸಹಿ ಹಾಕಲು ಕೇಳಿದ ವೇಳೆ ವರದಿ ಓದಿ ನೋಡಲಾಗಿಸರಿಯಾದ ವಿವರಣೆ ಇಲ್ಲದ ಕಾರಣ ಸರಿ ಯಾಗಿ ವಿವರವಾಗಿ ಬರೆಯಿರಿ ಎಂದು ಕೇಳಿದ್ದಕ್ಕೆ ಸರ್ವೆ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ಥಳದಿಂದ ಹೊರಟು ಹೋದರು ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ರಾಜಕೀಯ ದ್ವೇಷಕ್ಕಾಗಿ ಗ್ರಾಮದ ನಿರ್ಲಕ್ಷ್ಯ: ಈ ಪ್ರಕರಣವನ್ನು ಗಮನಿಸಿದರೆ ಚಾಕನಹಳ್ಳಿ ಗ್ರಾಮ ಪಂಚಾಯಿತಿಗೆ ಚೀರಣ ಕುಪ್ಪೆ ಗ್ರಾಮಸ್ಥರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ ಎಂಬುದು ಎದ್ದು ಕಾಣುತ್ತಿದ್ದು , ರಾಜಕೀಯ ದುರುದ್ದೇಶದಿಂದ ಅಧಿಕಾರಿಗಳ ಮೂಲಕ ಗ್ರಾಮದ ಅಭಿವೃದ್ಧಿಯನ್ನು ಸ್ಥಳೀಯ ರಾಜಕೀಯ ಪುಡಾರಿಗಳು ತಡೆಯೊಡ್ಡುತ್ತಿದ್ದು ಇದರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾ ಗುವುದು ಎಂದು ಶ್ರೀರಾಮಸೇನಾ ಜಿಲ್ಲಾಧ್ಯಕ್ಷ ಹಾಗೂ ಗ್ರಾಮದ ಯುವಕ ನಾಗಾರ್ಜುನ್ ತಿಳಿಸಿದ್ದಾರೆ.